* ಮೈಸೂರಿನಲ್ಲಿ 'ಬಡವ ರಾಸ್ಕಲ್' ವೀಕ್ಷಣೆ ಮಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.
* ಮೈಸೂರಿನ ಡಿಆರ್ ಸಿ ಸಿನಿಮಾಸ್ ನಲ್ಲಿ ಸಿನಿಮಾ ವೀಕ್ಷಣೆ.
* ಮೈಸೂರಿನ ಜಯಲಕ್ಷ್ಮಿ ಪುರಂ ನಲ್ಲಿ ಇರೋ ಚಿತ್ರಮಂದಿರ.
* ಚಿತ್ರ ವೀಕ್ಷಣೆ ವೇಳೆ ಅಭಿಮಾನಿಗಳ ಸೆಲ್ಫಿ
ಮೈಸೂರು(ಡಿ. 24) ಕನ್ನಡದ ಸದಭಿರುಚಿಯ 'ಬಡವ ರಾಸ್ಕಲ್' ಚಿತ್ರವನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ವೀಕ್ಷಣೆ ಮಾಡಿದ್ದಾರೆ. ವೀಕ್ಷಿಸಿ ಅಭಿನಂದನೆ ತಿಳಿಸಿದ್ದಾರೆ ಸಿನಿಮಾದಲ್ಲಿ ಧನಂಜಯ್ ಉತ್ತಮವಾಗಿ ನಟಿಸಿದ್ದಾರೆ ನನಗೆ ಧನಂಜಯ್ ಪರ್ಪಾಮೆನ್ಸ್ ತುಂಬಾ ಇಷ್ಟ ಆಯ್ತು. ಒಂದು ಸಣ್ಣ ವಿಷಯವನ್ನ ವಿಭಿನ್ನವಾಗಿ, ಹಾಸ್ಯದ, ಕ್ಯೂರಿಯಾಸಿಟಿ ಮೂಲಕ ಹೇಳಲು ಹೊರಟಿದ್ದಾರೆ. ಶಂಕರ್ ಗುರು ಉತ್ತಮ ನಿರ್ದೇಶನ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಚಿತ್ರ ಬಿಡುಗಡೆಯಾಗಿದ್ದು ಅದ್ದೂರಿಯಾಗಿ ಮುನ್ನುಗ್ಗುತ್ತಿದೆ.
ನಾವು ಯಾವಾಗಲೂ ಕನ್ನಡದ ಪರ.ಹೋರಾಟದ ಉತ್ತಮ ರೀತಿಯಲ್ಲಿ ಆಗಬೇಕು. ಡಿ.31 ಕ್ಕೆ ಬಂದ್ ಗೆ ಕರೆ ನೀಡಿರೋದು ಬೇಸರದ ವಿಚಾರ. ಅಂದು 3 ಕನ್ನಡದ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಇಂತಹ ವೇಳೆಯಲ್ಲಿ ಬಂದ್ ಕರೆ ನೀಡಿರೋದು ಕನ್ನಡಕ್ಕೆ ದ್ರೋಹ ಮಾಡಿದ ಹಾಗೆ. ಸರ್ಕಾರ ಉತ್ತಮವಾಗಿ ಸ್ಪಂದನೆ ಮಾಡುತ್ತಿದೆ. ಇಷ್ಯೂ ಇದ್ದಾಗ ಅದನ್ನ ಬುದ್ದಿವಂತಿಕೆಯಿಂದ ಬಗೆ ಹರಿಸಬೇಕು ಎಂದರು. ಎಂಇಎಸ್ ಪುಂಡಾಟ ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಶಿವಣ್ಣ ಪ್ರತಿಕ್ರಿಯೆ ನೀಡಿದರು.
Badava Rascal Movie: ಡಾಲಿ ಸಿನಿಮಾದ ಸ್ಪೆಷಾಲಿಟಿ ಏನ್ ಗೊತ್ತಾ ?
ಎಂಇಎಸ್ ಪುಂಡಾಟಕ್ಕೆ ಕಡಿವಾಣ ಹಾಕಲೇಬೇಕಿದೆ. ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ಸ್ಯಾಂಡಲ್ ವುಡ್ ನೈತಿಕ ಬೆಂಬಲ ಎಂಬುದನ್ನು ಸ್ಪಷ್ಟಪಡಿಸಿದೆ. ನಟ ಯಶ್ ಸಹ ಮಾತನಾಡಿದ್ದು ಈ ವಿಚಾರದಲ್ಲಿ ನಮ್ಮೆಲ್ಲರ ನಿಲುವು ಒಂದೇ ಎಂದು ತಿಳಿಸಿದ್ದಾರೆ.
ಎಂಇಎಸ್ ಪುಂಟಾಡ: ಎಂಇಎಸ್ ಪುಂಡಾಟ ಮೆರೆದು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿತ್ತು. ಕನ್ನಡ ಧ್ವಜವನ್ನು ಸುಟ್ಟು ಹುಚ್ಚಾಟ ಮೆರೆದಿದ್ದರು. ಇದಕ್ಕೆ ಇಡೀ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಎಂಇಎಸ್ ನಿಷೇಧ ಮಾಡಲು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ.
ಎಂಇಎಸ್ ದುಂಡಾವರ್ತನೆ ಖಂಡಿಸಿ, ಎಂಇಎಸ್‌ನ್ನು (MES) ನಿಷೇಧಿಸಬೇಕೆಂದು ಆಗ್ರಹಿಸಿ ಇದೇ ಡಿ. 31 ರಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಲಾಗಿದೆ. 'ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ನೀಡುವುದಾಗಿ ಫಿಲ್ಮ್ ಛೇಂಬರ್‌ನಲ್ಲಿಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಎಂದಿನಂತೆ ನಡೆಯುತ್ತದೆ. ಚಿತ್ರೀಕರಣ ಸ್ಥಗಿತ ಇಲ್ಲ. ಕನ್ನಡದ ಪರವಾಗಿ ನಮ್ಮ ಬೆಂಬಲ ಸದಾ ಇರುತ್ತೆ' ಎಂದು ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಹೇಳಿದ್ದಾರೆ.
'ನೈತಿಕ ಬೆಂಬಲ ಬೇಡ. ಬಂದ್‌ನಲ್ಲಿ ಭಾಗವಹಿಸಬೇಕು. ಎಷ್ಟು ದಿನ ದಬ್ಬಾಳಿಕೆ ಸಹಿಸಿಕೊಂಡು ನಾವಿರಬೇಕು.? ನೀವು ಕನ್ನಡಿಗರಲ್ವಾ..? ಬನ್ನಿ, ಬಂದ್ ಯಶಸ್ವಿಗೊಳಿಸಬೇಕು'' ಎಂದು ಸ್ಯಾಂಡ್‌ವುಡ್ ಕಲಾವಿದರಿಗೆ ಸಾರಾ ಗೋವಿಂದು ಇನ್ನೊಂದು ಕಡೆ ಕರೆ ನೀಡಿದ್ದಾರೆ.
ಕರ್ನಾಟಕ ಬಂದ್ ಗೆ ನಮ್ಮ ಬೆಂಬಲ ಇದೆ ಎಂದು ಹಲವು ಹೇಳಿದ್ದರೆ ಈ ನಿರ್ಧಾರವನ್ನು ಮರು ಪರಿಶೀಲನೆ ಮಾಡಿ ಎಂದು ನಾಗರಿಕರು ಮನವಿ ಮಾಡಿಕೊಂಡಿದ್ದರು. ಒಟ್ಟಿನಲ್ಲಿ ಎಂಇಎಸ್ ಮತ್ತು ಶಿವಸೇನೆ ಪುಂಡಾಟಕ್ಕೆ ಕಡಿವಾಣ ಹಾಕುವಲ್ಲಿ ಸರ್ಕಾರ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಿದೆ.