ಶಿರಾ ಜೆಡಿಎಸ್‌ ಕಾರ‍್ಯಕರ್ತರು ಶಿಸ್ತಿನ ಸಿಪಾಯಿಗಳು: ಉಗ್ರೇಶ್‌

By Kannadaprabha News  |  First Published Apr 8, 2023, 7:21 AM IST

ಶಿರಾ ಕ್ಷೇತ್ರದಲ್ಲಿ ಜೆಡಿಎಸ್‌ ಭದ್ರವಾಗಿದ್ದು, ಜೆಡಿಎಸ್‌ ಕಾರ್ಯಕರ್ತರು ಶಿಸ್ತಿನ ಶಿಪಾಯಿಗಳು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಈ ಬಾರಿ ಜೆಡಿಎಸ್‌ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಿ ಎಂದು ಜೆಡಿಎಸ್‌ ಅಭ್ಯರ್ಥಿ ಆರ್‌.ಉಗ್ರೇಶ್‌ ಹೇಳಿದರು.


 ಶಿರಾ : ಶಿರಾ ಕ್ಷೇತ್ರದಲ್ಲಿ ಜೆಡಿಎಸ್‌ ಭದ್ರವಾಗಿದ್ದು, ಜೆಡಿಎಸ್‌ ಕಾರ್ಯಕರ್ತರು ಶಿಸ್ತಿನ ಶಿಪಾಯಿಗಳು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಈ ಬಾರಿ ಜೆಡಿಎಸ್‌ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಿ ಎಂದು ಜೆಡಿಎಸ್‌ ಅಭ್ಯರ್ಥಿ ಆರ್‌.ಉಗ್ರೇಶ್‌ ಹೇಳಿದರು.

ನಗರದ ಶ್ರೀರಾಮ ಭವನದಲ್ಲಿ ಏರ್ಪಡಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಾಜಿ ಸಚಿವರಾದ ದಿವಂಗತ ಬಿ.ಸತ್ಯನಾರಾಯಣ ಅವರ ಆರ್ಶೀವಾದದೊಂದಿಗೆ, ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಬೇಕು, ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು. ಆ ನಿಟ್ಟಿನಲ್ಲಿ ಜೆಡಿಎಸ್‌ ಕಾರ್ಯಕರ್ತರು ಶ್ರಮಿಸಬೇಕು. ಚುನಾವಣೆಗೆ ಎಲ್ಲರೂ ಹಣ ಇರಬೇಕು, ಆಸ್ತಿ ಇರಬೇಕು ಎನ್ನುತ್ತಾರೆ. ಆದರೆ ನನಗೆ ಯಾವ ಆಸ್ತಿ ಅಂತಸ್ತು ಬೇಡ. ಶಿರಾ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರೇ ನನಗೆ ಆಸ್ತಿ ಎಂದರು.

Latest Videos

undefined

ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್‌.ಆರ್‌.ಗೌಡ ಮಾತನಾಡಿ, ರಾಜ್ಯದಲ್ಲಿ ಉತ್ತಮ ರೈತಪರ ಆಡಳಿತ ನಡೆಸಲು ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕು. ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ಜೀವನ ಮಾಡುವುದೇ ಕಷ್ಟವಾಗಿದೆ. ಪೆಟ್ರೋಲ್‌, ಡಿಸೇಲ್‌, ಗ್ಯಾಸ್‌ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಆದ್ದರಿಂದ ಜನಸಾಮಾನ್ಯರಿಗೆ ಜನಸ್ನೇಹಿ ಆಡಳಿತ ಸಿಗಬೇಕೆಂದರೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಬೇಕು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟಮಾತಿನಂತೆ 25000 ಕೋಟಿ ರು. ರೈತರ ಸಾಲ ಮನ್ನಾ ಮಾಡಿದ್ದರು. ಆದರೂ ಬಿಜೆಪಿಯವರ ಆಪರೇಷನ್‌ ಕಮಲದಿಂದ ಅಧಿಕಾರವನ್ನು ಬಿಟ್ಟುಕೊಡಬೇಕಾಯಿತು. ಆದ್ದರಿಂದ ಈ ಬಾರಿ ಜೆಡಿಎಸ್‌ ಪಕ್ಷಕ್ಕೆ ಹೆಚ್ಚಿನ ಮತ ನೀಡಿ ಸಂಪೂರ್ಣ ಬಹುಮತ ನೀಡಿ ಎಂದರು.

ಜೆಡಿಎಸ್‌ ಮುಖಂಡ ಕಲ್ಕೆರೆ ರವಿಕುಮಾರ್‌ ಮಾತನಾಡಿ, ಜೆಡಿಎಸ್‌ ರೈತರ ಪಕ್ಷ. ಜೆಡಿಎಸ್‌ದಿಂದ ಮಾತ್ರ ರೈತರ ಏಳಿಗೆ ಸಾಧ್ಯ. ಕ್ಷೇತ್ರದಲ್ಲಿ ಜೆಡಿಎಸ್‌ ಭದ್ರವಾಗಿದೆ. 2018ರ ಚುನಾವಣೆಯಲ್ಲಿ ಮಾಜಿ ಸಚಿವರಾದ ದಿವಂಗತ ಬಿ.ಸತ್ಯನಾರಾಯಣ ಅವರನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಗಲ್ಲಿಸಿದ ರೀತಿಯಲ್ಲಿಯೇ 2023ರ ಚುನಾವಣೆಯಲ್ಲಿಯೂ ಸಹ ಕ್ಷೇತ್ರದ ಕಾರ್ಯಕರ್ತರು ಗೆಲುವು ಸಾಧಿಸುವಂತೆ ಶ್ರಮಿಸಬೇಕು. ಹಣದ ಆಮಿಷಕ್ಕೆ ಮತದಾರರು ಬಲಿಯಾಗಬಾರದು ಎಂದರು.

ಸಭೆಯಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಸತ್ಯಪ್ರಕಾಶ್‌, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಸದಸ್ಯ ರಾಮಕೃಷ್ಣ, ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ, ತಾ.ಪಂ. ಮಾಜಿ ಉಪಾಧ್ಯಕ್ಷ ಉದಯಶಂಕರ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್‌, ಪರಮೇಶ್‌ಗೌಡ, ಹುಂಜನಾಳು ರಾಜಣ್ಣ, ಎಂಜಲಗೆರೆ ತಿಪ್ಪೇಸ್ವಾಮಿ, ಸೂಡಾ ಮಾಜಿ ಅಧ್ಯಕ್ಷ ಈರಣ್ಣ, ಗ್ರಾ.ಪಂ. ಸದಸ್ಯ ಟಿ.ಡಿ.ನರಸಿಂಹಮೂರ್ತಿ, ಜೆಡಿಎಸ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರೆಹಮತ್‌ ಉಲ್ಲಾ ಖಾನ್‌, ನಗರ ಜೆಡಿಎಸ್‌ ಅಧ್ಯಕ್ಷ ಶ್ರೀರಂಗ, ಮಹಮದ್‌ ಸಫೀರ್‌, ಕೋಟೆ ಮಹದೇವ್‌, ಭೂಕಾಂತ ಸೇರಿದಂತೆ ಹಲವರು ಹಾಜರಿದ್ದರು.

click me!