ಶಿರಾದಲ್ಲಿ 21 ಸಾವಿರ ಮನೆ ಮಂಜೂರು: ಟಿ.ಬಿ.ಜಯಚಂದ್ರ

By Kannadaprabha NewsFirst Published Sep 28, 2020, 9:32 AM IST
Highlights

ಶಿರಾ ಕ್ಷೇತ್ರಕ್ಕೆ 21 ಸಾವಿರ ಮನೆಗಳ ಮಂಜೂರು ಮಾಡಲಾಗಿದೆ. ಆದರೆ ಬಿಜೆಪಿ ಅನುದಾನ ಬಿಡುಗಡೆ ಮಾಡುವಲ್ಲಿಯೂ ಸೋತಿದೆ ಎಂದು ಕೈ ಮುಖಂಡರು ವಾಗ್ದಾಳಿ ನಡೆಸಿದ್ದಾರೆ. 

ಶಿರಾ (ಸೆ.28) : ಶಿರಾ ತಾಲೂಕನ್ನು ಗುಡಿಸಲು ಮುಕ್ತ ಮಾಡಬೇಕೆಂದು ನನ್ನ ಹತ್ತು ವರ್ಷದ ಅಧಿ​ಕಾರದ ಅವದಿಯಲ್ಲಿ 21 ಸಾವಿರಕ್ಕೂ ಹೆಚ್ಚು ಮನೆಗಳು ಮಂಜೂರಾಗಿವೆ. ಇನ್ನೂ ಮೂರು ಸಾವಿರ ಮನೆಗಳಿಗೆ 8.50 ಕೋಟಿ ರು. ಹಣ ಬಿಡುಗಡೆಯಾಗಬೇಕಿದೆ. ಮನೆ ಮಂಜೂರಾತಿ ಫಲಾನುಭವಿಗಳಿಗೆ ಹಣವೇ ನೀಡಲಾಗದೆ ಬಿಜೆಪಿ ಪಕ್ಷ ಹೊಸ ಮನೆಗಳ ಪಟ್ಟಿಮಾಡುತ್ತಿರುವುದು ಚುನಾವಣೆ ಗಿಮಿಕ್‌ ಎಂದು ಮಾಜಿ ಸಚಿವ ಟಿ ಬಿ ಜಯಚಂದ್ರ ಟೀಕಿಸಿದರು.

ಅವರು ಶಿರಾ ತಾಲೂಕಿನ ಬರಗೂರು ಗ್ರಾಮ ಪಂಚಾಯಿತಿ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಬೂತ್‌ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿ ಶಿರಾ ಕ್ಷೇತ್ರದ ಅಭಿವೃದ್ಧಿಗೆ ಎರಡೂವರೆ ಸಾವಿರ ಕೋಟಿ ರು. ಅನುದಾನ ತಂದು ಅಭಿವೃದ್ಧಿಪಡಿಸಿದ್ದು ಕಾಂಗ್ರೆಸ್‌ ಪಕ್ಷ ಅಧಿಕಾರದ ನನ್ನ ಅವಧಿಯಲ್ಲಿ ಮಾತ್ರ. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ 21 ಕೋಟಿಗೂ ಹೆಚ್ಚು ಹಣ ನನ್ನ ಅಧಿಕಾರದ ಅವಧಿಯಲ್ಲಿ ಹಾಗೂ ಸಮಾರು 23 ಸಮುದಾಯ ಭವನಗಳನ್ನು ನೀಡಿದ್ದೆ, ಕಳೆದ 9 ತಿಂಗಳಿನಿಂದಲೂ ಬಡವರಿಗೆ ಬರಬೇಕಿರುವ ಪಿಂಚಣಿ ಹಣ ಸಂದಾಯವಾಗುತ್ತಿಲ್ಲ ಪಿಂಚಣಿ ಫಲಾನುಭವಿಗಳು ವೃದ್ಧ್ದರು ಹಣ ಬರುವಿಕೆಯನ್ನು ಕಾಯುವಂತಾಗಿದೆ, ಬಿಜೆಪಿ ಮುಖಂಡರು ಶಿರಾ ಕ್ಷೇತ್ರಕ್ಕೆ 1 ಸಾವಿರ ಕೋಟಿ ನೀಡುತ್ತೇವೆ ಎನ್ನುತ್ತಾರೆ. ಇದೆಲ್ಲವೂ ಚುನಾವಣೆಗೋಸ್ಕರ ಸುಳ್ಳು ಹೇಳುತ್ತಿದ್ದಾರೆ ಎಂದರು.

ಶಿರಾ ಉಪಚುನಾವಣೆ ಮೇಲೆ ತ್ರಿಪಕ್ಷಗಳ ಕಣ್ಣು! ನಡೆದಿದೆ ರಣತಂತ್ರ .

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಗ್ರಾಮಾಂತರ ಅಧ್ಯಕ್ಷ ಬರಗೂರು ನಟರಾಜು, ನಗರ ಅಧ್ಯಕ್ಷ ಮಂಜುನಾಥ್‌, ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಬಿ.ಹಲಗುಂಡೇಗೌಡ, ಎನ್‌ಸಿ ದೋಡ್ಡಯ್ಯ, ಲೋಕೇಶ್‌, ರಾಮಕೃಷ್ಣ, ಬಿಸಿ ಸತೀಶ್‌, ನರಸಪ್ಪ, ಶ್ರೀನಿವಾಸ್‌ ಗೌಡ, ಡಿಸಿ ನಾರಾಯಣಪ್ಪ, ಲಕ್ಷಿತ್ರ್ಮೕನರಸಮ್ಮ, ಹಾರೋಗೆರೆ ಮಹೇಶ್‌, ಲತೀಫ್‌, ಉಮೇಶ್‌, ಫಕೃದ್ದೀನ್‌, ಶ್ರೀನಿವಾಸ್‌, ತಿಪ್ಪೇಸ್ವಾಮಿ, ಹನುಮಂತರಾಯಪ್ಪ, ತಿಮ್ಮೇಗೌಡ, ಕೃಷ್ಣಪ್ಪ, ಸಿದ್ದಪ್ಪ, ನಾಗಭೂಷಣ್‌, ಮಂಜುನಾಥ್‌ ಮತ್ತಿತರರು ಹಾಜರಿದ್ದರು.

click me!