ಶಿರಾ : 31 ರಿಂದ ಫೆ. 6 ರವರೆಗೆ ಸಂವಿಧಾನ ಜಾಗೃತಿ ಜಾಥಾ

By Kannadaprabha News  |  First Published Jan 26, 2024, 9:04 AM IST

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ತಾಲೂಕು ಮಟ್ಟದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜ.31 ರಿಂದ ಫೆ. 6 ರವರೆಗೆ ಜಾಥಾ ರಥಯಾತ್ರೆಯನ್ನು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ದತ್ತಾತ್ರೆಯ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅನಂತರಾಜು ತಿಳಿಸಿದರು.


  ಶಿರಾ :  ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ತಾಲೂಕು ಮಟ್ಟದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜ.31 ರಿಂದ ಫೆ. 6 ರವರೆಗೆ ಜಾಥಾ ರಥಯಾತ್ರೆಯನ್ನು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ದತ್ತಾತ್ರೆಯ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅನಂತರಾಜು ತಿಳಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು. ಜ. 31 ರಂದುಜಾಗೃತಿ ಜಾಥಾವು ಶಿರಾದಿಂದ ಹೊರಟು ಬುಕ್ಕಾಪಟ್ಟಣ, ರಾಮಲಿಂಗಾಪುರ, ಕುರುಬರಹಳ್ಳಿ, ನೇರಳಗುಡ್ಡ, ಹುಯಿಲ್ದೊರೆ, ದೊಡ್ಡ ಅಗ್ರಹಾರ ಗ್ರಾಪಂಗಳಿಗೆ ತೆರಳಲಿದೆ. ಫೆ. 1 ರಂದು ಗೋಪಾಲ ದೇವರಹಳ್ಳಿ, ಯಲದಬಾಗಿ, ಶೀಬಿ, ಶೀಬಿ ಅಗ್ರಹಾರ, ಕಳ್ಳಂಬೆಳ್ಳ, ಭೂವನಹಳ್ಳಿ, ಫೆ. 2ರಂದು ಲಕ್ಷ್ಮೀಸಾಗರ, ತಾವರೆಕೆರೆ, ಹುಣಸೆಹಳ್ಳಿ, ಹೊಸೂರು, ಗೌಡಗೆರೆ, ಬೇವಿನಹಳ್ಳಿ, ಫೆ. 3 ರಂದು ಚಂಗಾವರ, ದ್ವಾರನಕುಂಟೆ, ಹುಲಿಕುಂಟೆ, ತಡಕಲೂರು, ದೊಡ್ಡಬಾಣಗೆರೆ, ಬರಗೂರಿಗೆ ತೆರಳಲಿದೆ.

Tap to resize

Latest Videos

undefined

ಫೆ. 4 ರಂದು ಹಂದಿಕುಂಟೆ, ಹೊಸಹಳ್ಳಿ, ನಾದೂರು, ಹೆಂದೊರೆ, ಬಂದಕುಂಟೆ, ಮೇಲುಕುಂಟೆಗೆ, ಫೆ. 5 ರಂದು ಕೊಟ್ಟ, ಮದಲೂರು, ಹೊನ್ನಗೊಂಡನಹಳ್ಳಿ, ಮಾಗೋಡು, ರತ್ನಸಂದ್ರ, ಯಲಿಯೂರುಗೆ ತಲುಪಲಿದೆ. ಫೆ. 6 ರಂದು ಚಿಕ್ಕನಹಳ್ಳಿ, ಹಾಲೇನಹಳ್ಳಿ, ತಾಳಗುಂದ, ಭೂಪಸಂದ್ರ, ತರೂರು, ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿಗೆ ತೆರಳಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಪ್ರತಿಯೊಂದ ಗ್ರಾಮ ಪಂಚಾಯಿತಿಗೂ ಒಬ್ಬರು ನೋಡಲ್ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಲಾಗಿದೆ ಎಂದರು. ಪೂರ್ವಭಾವಿ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಯತೀಶ್‌ ಕುಮಾರ್, ಪೌರಾಯುಕ್ತ ರುದ್ರೇಶ್ ಸೇರಿದಂತೆ ಹಲವರು ಹಾಜರಿದ್ದರು.

ಜಾತಿ ಗಣತಿ ವರದಿಗೆ ಸಮಯ ಕೊಡುವೆ

 

ಮೈಸೂರು(ಜ.26):  ರಾಜಕೀಯವಾಗಿ ರಾಮನನ್ನು ಬಿಜೆಪಿ ಬಳಸಿಕೊಂಡರೂ ಪ್ರಬುದ್ಧ ಮತದಾರರು ಸಂವಿಧಾನದ ಆಶಯದಂತೆ ನಡೆದುಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮ ಸರ್ವಜನಾಂಗದ ವ್ಯಕ್ತಿ. ಆತನ ರಾಜ್ಯಭಾರದಲ್ಲಿ ಎಲ್ಲಾ ವರ್ಗದ ಜನರಿಗೂ ಸಮಾನ ನ್ಯಾಯ ನೀಡಿದ್ದ. ಶ್ರೀರಾಮ ಎಲ್ಲಾ ಜನರಿಗೂ ನ್ಯಾಯಕೊಟ್ಟ. ಆದ್ದರಿಂದಲೇ ರಾಮರಾಜ್ಯದ ಕಲ್ಪನೆ ಬಂತು. ಎಲ್ಲಾ ಜನರು ಆತನ ಕಾಲದಲ್ಲಿ ಸುಖಿಯಾಗಿದ್ದಾಗಿ ತಿಳಿಸಿದರು.

ವಾರದೊಳಗೆ ಜಾತಿಗಣತಿ ವರದಿ ಸಿಎಂಗೆ ಸಲ್ಲಿಕೆ: ಜಯಪ್ರಕಾಶ್‌ ಹೆಗ್ಡೆ

ರಾಜಕೀಯವಾಗಿ ಬಳಸಿಕೊಳ್ಳಬೇಕು ಎಂಬ ಕಾರಣಕ್ಕೆ ಆತುರವಾಗಿ ಮತ್ತು ಅಪೂರ್ಣಗೊಂಡಿರುವ ಮಂದಿರವನ್ನು ಉದ್ಘಾಟಿಸಲಾಗಿದೆ. ದೇಶವು ಜಾತ್ಯತೀತ ರಾಷ್ಟ್ರ. ಸಂವಿಧಾನವನ್ನು ಒಪ್ಪಿಕೊಂಡಿರುವ ದೇಶ. ಏನೇ ಮಾಡಿದರೂ ಅದು ನಡೆಯಲ್ಲ. ಶ್ರೀರಾಮ ಸರ್ವಜನಾಂಗದ ವ್ಯಕ್ತಿ. ರಾಮರಾಜ್ಯದ ಕಲ್ಪನೆಯ ಆಡಳಿತವನ್ನು ಕಂಡವರು. ಕಾಡಿಗೆ ಯಾವ ಕಾರಣಕ್ಕಾಗಿ ಹೋದ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ, ಏನೇ ಮಾಡಿದರೂ ಅದು ನಡೆಯಲ್ಲ ಎಂದರು.

ನಾನು ಹಿಂದೂ ಧರ್ಮದಂತೆ ನಡೆಯುತ್ತೇನೆ. ಇಸ್ಲಾಂ, ಕ್ರೈಸ್ತ, ಬೌದ್ದ, ಸಿಖ್ ಅವರವರ ಧರ್ಮದಂತೆ ನಡೆದುಕೊಳ್ಳುತ್ತಾರೆ. ಎಲ್ಲಾ ಧರ್ಮಗಳಲ್ಲೂ ಮನುಷ್ಯತ್ವವನ್ನು ಪ್ರೀತಿಸುವ ಗುಣಗಳು ಇವೆಯೇ ಹೊರತು ದ್ವೇಷಿಸುವಂತೆ ಹೇಳಿಲ್ಲ. ಆಸ್ಸಾಂನಲ್ಲಿ ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆಗೆ ತಡೆಯಾಕಿರುವ ಜತೆಗೆ ಅವರ ಮೇಲೆ ಎಫ್‌ಐಆರ್ ದಾಖಲಿಸಿರುವುದು ರಾಜಕೀಯ ಪ್ರೇರಿತ ಮತ್ತು ಉದ್ದೇಶ ಪೂರ್ವಕ ಎಂದು ಅವರು ಟೀಕಿಸಿದರು.
ದೇಶದಲ್ಲಿ ಕಾಡುತ್ತಿರುವ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಯಾತ್ರೆ ಸಫಲವಾಗದಂತೆ ತಡೆಯುವ ಕೆಲಸ ಮಾಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ತಿರುಗುಬಾಣವಾಗಲಿದೆ ಎಂದರು.

ಇಂಡಿಯಾ ಒಕ್ಕೂಟದಲ್ಲಿನ ಮೈತ್ರಿ ಪಕ್ಷಗಳ ಸ್ವತಂತ್ರ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ. ನನಗೇನೂ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ಚುನಾವಣೆ ನಡೆಯುವ ತನಕ ಮಾತುಕತೆ, ಚರ್ಚೆಗಳು ಇರುತ್ತವೆ. ಯಾವುದು ಅಂತಿಮವಾಗಿರಲ್ಲ ಎಂದರು.

click me!