ಬೆಳಗಾವಿಗೆ ಸಿಎಂ ಬಂದ್ರೂ ಭೇಟಿಗೆ ಬಾರದ ಜಾರಕಿಹೊಳಿ, ಜೊಲ್ಲೆ..!

Kannadaprabha News   | Asianet News
Published : Jul 26, 2021, 08:12 AM ISTUpdated : Jul 26, 2021, 08:29 AM IST
ಬೆಳಗಾವಿಗೆ ಸಿಎಂ ಬಂದ್ರೂ ಭೇಟಿಗೆ ಬಾರದ ಜಾರಕಿಹೊಳಿ, ಜೊಲ್ಲೆ..!

ಸಾರಾಂಶ

* ಹಲವಾರು ಅನುಮಾನಗಳಿಗೆ ಕಾರಣವಾದ ಜೊಲ್ಲೆ, ಜಾರಕಿಹೊಳಿ ನಡೆ * ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದ ಯಡಿಯೂರಪ್ಪ * ಪ್ರವಾಹ ಪರಿಸ್ಥಿತಿ ಅವಲೋಕನಕ್ಕೆ ಮುಂದಾಗಿದ್ದ ಸಿಎಂ    

ಬೆಳಗಾವಿ(ಜು.26): ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಅವಲೋಕನಕ್ಕೆ ಖುದ್ದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾನುವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದರೂ ಬಿಜೆಪಿ ಶಾಸಕರಾದ ಜಾರಕಿಹೊಳಿ ಸಹೋದರರು ಅಂತರ ಕಾಯ್ದುಕೊಂಡಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. 

ಅಷ್ಟು ಮಾತ್ರವಲ್ಲದೆ ಸಚಿವೆ ಶಶಿಕಲಾ ಜೊಲ್ಲೆ ಅವರ ಕ್ಷೇತ್ರವಾದ ನಿಪ್ಪಾಣಿಗೆ ಮುಖ್ಯಮಂತ್ರಿ ಬಂದಿದ್ದರೂ ಸಚಿವೆ ಮಾತ್ರ ಕಾಣಿಸಿಕೊಳ್ಳದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. 

ಮೊಟ್ಟೆ ಖರೀದಿಯಲ್ಲಿ ಲಂಚ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಸಚಿವೆ ಶಶಿಕಲಾ ಜೊಲ್ಲೆ

ಘಟಪ್ರಭಾದಿಂದ ಗೋಕಾಕ ಪಟ್ಟಣ ಸೇರಿದಂತೆ, ತಾಲೂಕಿನ ಹಲವಾರು ಗ್ರಾಮಗಳು ಜಲಾವೃತವಾಗಿವೆ. ಆದರೆ, ಮುಖ್ಯಮಂತ್ರಿ ಕಾರ್ಯಕ್ರಮ ಪಟ್ಟಿಯಲ್ಲಿ ಈ ಸ್ಥಳಗಳ ವೀಕ್ಷಣೆ ಇರಲಿಲ್ಲ. ಇದು ಶಾಸಕ ರಮೇಶ ಜಾರಕಿಹೊಳಿ, ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಮುನಿಸಿಗೆ ಕಾರಣವಾಯಿತೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!