ಬಿರುಸಿನ ರಾಜಕೀಯದ ಬೆನ್ನಲ್ಲೇ ಶಾಕ್ : ಬಿಜೆಪಿಗೆ ಕೈ ಕೊಟ್ಟು ಕಾಂಗ್ರೆಸ್ ಸೇರಿದ ಮುಖಂಡರು

By Kannadaprabha News  |  First Published Nov 4, 2020, 3:36 PM IST

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಪಕ್ಷಾಂತರ ಪರ್ವವೂ ಜೋರಾಗಿದೆ. ಬಿಜೆಪಿ ಮುಖಂಡರು ತೊರೆದು ಕಾಂಗ್ರೆಸ್ ಸೆರಿದ್ದಾರೆ


ಗುಂಡ್ಲುಪೇಟೆ (ನ.04): ತಾಲೂಕಿನ ಕಬ್ಬಹಳ್ಳಿ ಹಾಗು ಬನ್ನಿತಾಳಪುರ ಗ್ರಾಮದ ಬಿಜೆಪಿ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್‌ ಮುಖಂಡ ಎಚ್‌.ಎಂ. ಗಣೇಶ್‌ ಪ್ರಸಾದ್‌ ನಾಯಕತ್ವ ಒಪ್ಪಿ ಕಾಂಗ್ರೆಸ್‌ಗೆ ಸೇರಿದರು.

ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್‌. ಮಹೇಶ್‌ ನೇತೃತ್ವದಲ್ಲಿ ಗ್ರಾಮದ ಬಿಜೆಪಿ ಕಾರ್ಯಕರ್ತರಾದ ಶಿವಶಂಕರ್‌, ಮಲ್ಲು, ಸೋಮಶೇಖರ್‌, ಶ್ರೀನಾಥ್‌, ಮಣಿ, ಸ್ವಾಮಿ, ರಾಜೇಶ್‌, ಮಂಜು, ಮಂಜುನಾಥ್‌, ಸಿದ್ದರಾಜು, ಹರೀಶ್‌, ಮಹೇಶ್‌, ಗುರುಸ್ವಾಮಿ ಬಿಜೆಪಿ ತೊರೆದರು.

Tap to resize

Latest Videos

undefined

ಗೆದ್ದರೆ ಜನಾರ್ದನ ತೀರ್ಪು : ಸೋತರೆ ಇವಿಎಂ ಫಾಲ್ಟ್

ಬನ್ನಿತಾಳಪುರ ಗ್ರಾಮದ ಶಂಕರ್‌, ಸ್ವಾಮಿ,ಬಸವಶೆಟ್ಟಿ, ಸಿದ್ದಶೆಟ್ಟಿ, ವೆಂಟಕರಮಣಸ್ವಾಮಿ, ಅಂಗಡಿ ಮಹದೇವಶೆಟ್ಟಿ, ಮಾದಶೆಟ್ಟಿ, ಚಿಕ್ಕಮಾದಶೆಟ್ಟಿ, ನಾಗಶೆಟ್ಟಿ, ಶಂಕರ್‌, ನಿರಂಜನ್‌, ಆನಂದ್‌, ಮರಿಶೆಟ್ಟಿಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದರು. ಕಬ್ಬಹಳ್ಳಿ ಹಾಗೂ ಬನ್ನಿತಾಳಪುರ ಗ್ರಾಮದ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡವರನ್ನು ಕಾಂಗ್ರೆಸ್‌ ಪಕ್ಷದ ಶಲ್ಯ ಹೊದಿಸಿ ಬರಮಾಡಿಕೊಂಡು ಪಕ್ಷಕ್ಕೆ ಸ್ವಾಗತಿಸಿದರು.

ಕ್ಷೇತ್ರದಲ್ಲಿ ಬಿಜೆಪಿಯಲ್ಲಿನ ಅನೇಕರು ಪಕ್ಷ ತೊರೆಯುವುದಾಗಿ ಹೇಳುತ್ತಿದ್ದಾರೆ. ನಮ್ಮ ಪಕ್ಷದ ಹಿರಿಯ ಮುಖಂಡರೊಂದಿಗೆ ಮಾತನಾಡಿ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿದರು.

click me!