ನರಗುಂದ: ಕೊರೋನಾ ಕಾಟ, ಬೈರನಹಟ್ಟಿ ಶ್ರೀಗಳಿಂದ ಆನ್‌ಲೈನ್‌ ಶಿವಾನುಭವ

Kannadaprabha News   | Asianet News
Published : Jun 06, 2020, 08:26 AM IST
ನರಗುಂದ: ಕೊರೋನಾ ಕಾಟ, ಬೈರನಹಟ್ಟಿ ಶ್ರೀಗಳಿಂದ ಆನ್‌ಲೈನ್‌ ಶಿವಾನುಭವ

ಸಾರಾಂಶ

ಜೂಮ್‌ ಆ್ಯಪ್‌ ಬಳಕೆ ಮಾಡಿಕೊಂಡು ನಡೆಸಿರುವ ಶಿವಾನುಭವ| ಗುಜರಾತ್‌, ಜಮ್ಮು -ಕಾಶ್ಮೀರ, ಮುಂಬೈ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುವ ಶ್ರೀಮಠದ ಭಕ್ತರಿಂದ ವೀಕ್ಷಣೆ| ಜನರ ಮನೆ ಮನೆಗಳಿಗೆ ಬಸವ ಚಿಂತನೆ, ಅಧ್ಯಾತ್ಮ ತಲುಪಿಸುವ ನಿರಂತರ ಪ್ರಯತ್ನ ಮಾಡುತ್ತಿರುವ ಶ್ರೀಗಳು|

ಗದಗ(ಜೂ.06): ನರಗುಂದ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಶ್ರೀಗಳು ಕೊರೋನಾ ಹಿನ್ನೆಲೆಯಲ್ಲಿ ಹೆಚ್ಚು ಜನರನ್ನು ಸೇರಿಸಿದೇ ಆನ್‌ಲೈನ್‌ ಶಿವಾನುಭವ ಮಾಡುವ ಮೂಲಕ ಹೊಸ ಪ್ರಯತ್ನ ಮಾಡಿದ್ದಾರೆ. 

ಜೂಮ್‌ ಆ್ಯಪ್‌ ಬಳಕೆ ಮಾಡಿಕೊಂಡು ನಡೆಸಿರುವ ಈ ಶಿವಾನುಭವವನ್ನು ಗುಜರಾತ್‌, ಜಮ್ಮು -ಕಾಶ್ಮೀರ, ಮುಂಬೈ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುವ ಶ್ರೀಮಠದ ಭಕ್ತರು ವೀಕ್ಷಣೆ ಮಾಡಿದ್ದಾರೆ.

ಗದಗ: ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣ

ಕನ್ನಡಪ್ರೇಮಿಗಳು ಆಗಿರುವ ಶ್ರೀಗಳು ಹೊಸತನಕ್ಕೆ ತಮ್ಮನ್ನು ಒಗ್ಗೂಡಿಸಿಕೊಂಡು ಆ ಮೂಲಕ ಜನರ ಮನೆ ಮನೆಗಳಿಗೆ ಬಸವ ಚಿಂತನೆ, ಅಧ್ಯಾತ್ಮ ತಲುಪಿಸುವ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಅದರ ಭಾಗವಾಗಿಯೇ ಶ್ರೀಮಠದಲ್ಲಿ ಪ್ರತಿ ತಿಂಗಳು ಶಿವಾನುಭವ ಕಾರ್ಯಕ್ರಮದ ಹೆಸರಿನಲ್ಲಿ ಸಾಧಕರನ್ನು ಬೆನ್ನು ತಟ್ಟುವುದು, ಸಾರ್ವಜನಿಕರ ತಿಳಿವಳಿಕೆ ಮಟ್ಟಹೆಚ್ಚಿಸುವುದು ಶಿವಾನುಭವಗಳ ಉದ್ದೇಶವಾಗಿದೆ.
 

PREV
click me!

Recommended Stories

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾದಂತಿದೆ ರಾಜ್ಯದ ಸ್ಥಿತಿ: ಎಂ.ಪಿ.ರೇಣುಕಾಚಾರ್ಯ ಟೀಕೆ
ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!