ಗದಗ: ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣ

By Kannadaprabha News  |  First Published Jun 6, 2020, 8:13 AM IST

ಗದಗ ನಗರದ ಹುಡ್ಕೋ ಕಾಲನಿ ನಿಯಂತ್ರಿತ ಪ್ರದೇಶ|  ನಿಯಂತ್ರಿತ ಪ್ರದೇಶದಿಂದ ಇತರೆ ಪ್ರದೇಶಗಳಿಗೆ ಅಥವಾ ಇತರೆ ಪ್ರದೇಶಗಳಿಂದ ನಿಯಂತ್ರಿತ ಪ್ರದೇಶಕ್ಕೆ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿ ಹೊರತುಪಡಿಸಿ ಜನರ ಪ್ರವೇಶವನ್ನು ನಿರ್ಬಂಧ| ಆದೇಶವನ್ನು ಉಲ್ಲಂಘಿಸಿದವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ- 2005 ರನ್ವಯ ಸೂಕ್ತ ಕ್ರಮ|


ಗದಗ(ಜೂ.06): ಗದಗ ಬೆಟಗೇರಿ ನಗರಸಭೆಯ ವಾರ್ಡ್‌ 35ರ ಹುಡ್ಕೋ ಕಾಲನಿ 2ನೇ ಕ್ರಾಸ್‌ ಇದರ ಸುತ್ತಲಿನ 100 ಮೀ ಪ್ರದೇಶವನ್ನು ತಕ್ಷಣದಿಂದ ಕೋವಿಡ್‌-19 ಸೋಂಕು ನಿಯಂತ್ರಿತ (ಕಂಟೇನ್ಮೆಂಟ್‌) ಪ್ರದೇಶವೆಂದು ಮತ್ತು ಪ್ರದೇಶದ ವ್ಯಾಪ್ತಿಯ ಸುತ್ತಲಿನ 5 ಕಿಮೀ ವ್ಯಾಪ್ತಿಯ ಸುತ್ತಳತೆಯ ಪ್ರದೇಶವನ್ನು ಬಫರ್‌ ಝೋನ್‌ ಎಂದು ಘೋಷಿಸಿ, ಗದಗ ಉಪ ವಿಭಾಗಾಧಿಕಾರಿ ಇವರನ್ನು ಈ ಎರಡೂ ಪ್ರದೇಶಗಳ ಇನ್ಸಿಂಡೆಂಟ್‌ ಕಮಾಂಡರ್‌ ಎಂದು ನೇಮಿಸಿ ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.

ನಿಯಂತ್ರಿತ ಪ್ರದೇಶದಿಂದ ಇತರೆ ಪ್ರದೇಶಗಳಿಗೆ ಅಥವಾ ಇತರೆ ಪ್ರದೇಶಗಳಿಂದ ನಿಯಂತ್ರಿತ ಪ್ರದೇಶಕ್ಕೆ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿ ಹೊರತುಪಡಿಸಿ ಜನರ ಪ್ರವೇಶವನ್ನು ನಿರ್ಬಂಧಿಸಿದೆ. ಬಫರ್‌ ಝೋನ್‌ನ ಮೊದಲ ಒಂದು ಕಿಮೀ ವ್ಯಾಪ್ತಿಯ ತೀವ್ರ ಬಫರ್‌ಝೋನ ಪ್ರದೇಶದ ಪ್ರತಿ ಮನೆ ಮನೆಗಳಲ್ಲೂ ಆರೋಗ್ಯ ತಪಾಸಣೆ ನಡೆಸಲಾಗುವುದು. ಅಗತ್ಯ ವಸ್ತುಗಳ ಪೂರೈಕೆಯನ್ನು ಸಂಬಂಧಿತ ಇಲಾಖೆಗಳ ಮೂಲಕವೇ ಜರುಗಿಸಬೇಕು.ಖಾಸಗಿ ಮೂಲಗಳಿಗೆ ಅವಕಾಶವಿಲ್ಲ, ಈ ಪ್ರದೇಶಗಳ ಜನರಿಗೆ ಅವರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಗೃಹಪ್ರತಿಬಂಧ ಕಡ್ಡಾಯವಾಗಿದ್ದು ಮನೆ ಬಿಟ್ಟು ಹೊರಗೆ ಬರುವುದನ್ನು ನಿಷೇಧಿಸಲಾಗಿದೆ. ಕರ್ತವ್ಯ ನಿರತ ವಾಹನ ಹೊರತುಪಡಿಸಿ ಇತರ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ಈ ಆದೇಶವನ್ನು ಉಲ್ಲಂಘಿಸಿದವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ- 2005 ರನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

Tap to resize

Latest Videos

ಕೊರೋನಾ ತಂದ ಸಂಕಷ್ಟ: ಕುಟುಂಬ ನಿರ್ವಹಣೆಗೆ ಕೂಲಿ ಕೆಲಸಕ್ಕೆ ಮುಂದಾದ ಎಂಜಿನಿಯರ್‌..!

ಕಂಟೈನ್‌ಮೆಂಟ್‌, ಬಫರ್‌ ಝೋನ್‌ ಮತ್ತು ಕ್ಲಸ್ಟರ್‌ಗಳಲ್ಲಿ ಕೊರೋನಾ ವೈರಸ್‌ ನಿಯಂತ್ರಿಸುವ ಕುರಿತು ಕಾರ್ಯ ನಿರ್ವಹಿಸುವ ಇನ್ಸಿಡೆಂಟ್‌ ಕಮಾಂಡರ್‌, ಪೊಲೀಸ್‌, ಆರೋಗ್ಯ, ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳಿಗೆ ಹಾಗೂ ವಿವಿಧ ಇಲಾಖೆಗಳಿಗೆ ಸರ್ಕಾರದ ಮಾರ್ಗಸೂಚಿಗಳನ್ವಯ ಕರ್ತವ್ಯಗಳನ್ನು ನಿಗದಿಪಡಿಸಿ ಅವುಗಳನ್ನು ಜವಾಬ್ದಾಯಿಂದ ನಿರ್ವಹಿಸಲು ತಿಳಿಸಲಾಗಿದೆ.
 

click me!