ಎಲ್ಲಾ ಕಾಂಗ್ರೆಸ್‌ನವರ ಮನೆ ಮೇಲೆ ರೈಡ್ ಮಾಡಿಸುತ್ತಿರುವುದೇ ಇದನ್ನು ಪುಷ್ಟೀಕರಿಸುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ದಾವಣಗೆರೆ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ. ಬಿಜೆಪಿಯ ಇದೇ ಸೇಡಿನ ರಾಜಕಾರಣದಿಂದಾಗಿಯೇ ರಾಜ್ಯದಲ್ಲಿ ಗಲಾಟೆಯಾಗುತ್ತಿವೆ. ಕಾಂಗ್ರೆಸ್‌ನವರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸ ಬಿಜೆಪಿ ಮಾಡುತ್ತಿದೆಯಷ್ಟೇ ಎಂದು ಅವರು ದೂರಿದರು.
ದಾವಣಗೆರೆ(ಸೆ.05): ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದ್ದು, ಒಬ್ಬರಲ್ಲ ಇಬ್ಬರಲ್ಲಾ ಎಲ್ಲಾ ಕಾಂಗ್ರೆಸ್‌ನವರ ಮನೆ ಮೇಲೆ ರೈಡ್ ಮಾಡಿಸುತ್ತಿರುವುದೇ ಇದನ್ನು ಪುಷ್ಟೀಕರಿಸುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ದಾವಣಗೆರೆ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ.
ಸೇಡಿನ ರಾಜಕಾರಣ ಬಿಟ್ಟರೆ ಬಿಜೆಪಿಗೂ ಒಳ್ಳೆಯದು. ಬಿಜೆಪಿಯ ಇದೇ ಸೇಡಿನ ರಾಜಕಾರಣದಿಂದಾಗಿಯೇ ರಾಜ್ಯದಲ್ಲಿ ಗಲಾಟೆಯಾಗುತ್ತಿವೆ. ಕಾಂಗ್ರೆಸ್‌ನವರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸ ಬಿಜೆಪಿ ಮಾಡುತ್ತಿದೆಯಷ್ಟೇ ಎಂದು ಅವರು ದೂರಿದರು.
ಡಿಕೆಶಿ ಬಂಧನ: ಮುಂದುವರಿದ ಪ್ರತಿಭಟನೆ ಕಿಚ್ಚು; ರಾಮನಗರ ಬಂದ್
ನಗರದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಕಾಂಗ್ರೆಸ್ ಶಾಸಕರನ್ನು ಇಲ್ಲಿಗೆ ಕರೆ ತಂದು ರಕ್ಷಣೆ ಮಾಡಿದ್ದಕ್ಕೆ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ ಮೇಲಿನ ಸಿಟ್ಟಿಗೆ ಬಿಜೆಪಿಯವರು ಹೀಗೆ ಮಾಡಿದ್ದಾರೆ. ಕಾಂಗ್ರೆಸ್, ಜೆಡಿಎಸ್‌ನವರ ಮನೆ ಮೇಲೆ ದಾಳಿ ಮಾಡಿಸುವವರು ಬಿಜೆಪಿಯವರ ಮನೆಗಳ ಮೇಲೆ ಏಕೆ ದಾಳಿ ಮಾಡುವುದಿಲ್ಲ. ಕಾಂಗ್ರೆಸ್‌ನ ಪಿ.ಚಿದಂಬರಂಗೂ ಬಂಧಿಸುವಂತೆ ಮಾಡಿದ್ದ ಬಿಜೆಪಿಯವರು ಜೆಡಿಎಸ್‌ನ ರೇವಣ್ಣ ಸಂಬಂಧಿಗಳ ಮನೆ ಮೇಲೆಲ್ಲಾ ದಾಳಿ ಮಾಡಿಸಿದರು. ಸದ್ಯಕ್ಕೆ ಬಿಜೆಪಿಯವರ ಕಾಲ ನಡೆಯುತ್ತಿದೆ. ನಡೆಯಲಿ. ಸ್ವಾಯತ್ತ ಸಂಸ್ಥೆಗಳನ್ನೇ ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆಯೆಂದು ನನ್ನ ಬಾಯಿಂದಲೇ ಹೇಳಬೇಕೇ ಎಂದು ಪ್ರಶ್ನಿಸಿದರು.
'ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ'
ಸುಳ್ಳನೇ ಹತ್ತು ಸಲ ಹೇಳಿ ಸತ್ಯ ಮಾಡ್ತಾರೆ:
ಸರ್ಕಾರಿ ಕಚೇರಿಗಳ ದುರ್ಬಳಕೆ, ಸ್ವಾಯತ್ತ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐನಂತಹವುಗಳನ್ನೇ ಬಿಜೆಪಿ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಸುಳ್ಳನ್ನೇ ನಿಜ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಒಂದು ಸುಳ್ಳನ್ನೇ ಹತ್ತು ಸಲ ಹೇಳಿ ಸತ್ಯವೆಂದು ಸಾಧಿಸುತ್ತಾರೆ. ಬಿಜೆಪಿಯ ಇಂತಹ ವರ್ತನೆ, ನಡೆಯಿಂದಾಗಿಯೇ ರಾಜ್ಯದಲ್ಲಿ ಟೈಯರ್, ವಾಹನಗಳನ್ನು ಸುಟ್ಟು ಗಲಾಟೆಯಾಗುತ್ತಿವೆ. ಈ ಎಲ್ಲಾ ಗಲಾಟೆಗಳಿಗೂ ಬಿಜೆಪಿಯೇ ಕಾರಣ ಎಂದು ಆರೋಪಿಸಿದರು.