ರೇಣುಕಾಚಾರ್ಯ ಹೊಗಳಿದ ಕೈ ಮುಖಂಡ ಶಾಮನೂರು

By Kannadaprabha News  |  First Published Sep 27, 2021, 7:34 AM IST
  • ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯದಲ್ಲೇ ಉತ್ತಮ ಕೆಲಸ ಮಾಡಿದ ಶಾಸಕ
  • ರೇಣುಕಾಚಾರ್ಯ ಹಾಡಿ ಹೊಗಳಿದ ಕಾಂಗ್ರೆಸ್‌ ಶಾಸಕ ಡಾ.ಶಾಮನೂರು ಶಿವಶಂಕರಪ್ಪ

ದಾವಣಗೆರೆ (ಸೆ.27): ಕೋವಿಡ್‌ (Covid) ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯದಲ್ಲೇ ಉತ್ತಮ ಕೆಲಸ ಮಾಡಿದ ಶಾಸಕರೆಂದರೆ ಅದು ಹೊನ್ನಾಳಿ ರೇಣುಕಾಚಾರ್ಯ (Renukacharya) ಎಂದು ಕಾಂಗ್ರೆಸ್‌ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಡಿ ಹೊಗಳಿದ್ದಾರೆ. 

ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್‌ ಸೋಂಕಿತರಲ್ಲಿ ಆತ್ಮಸೈರ್ಯ ಮೂಡಿಸಲು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಮಲಗಿದ್ದಲ್ಲದೇ, ಜನರಲ್ಲಿ ಸೋಂಕಿನ ವಿಚಾರದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಬಗ್ಗೆ ಅರಿವು ಮೂಡಿಸಿದ ರೇಣುಕಾಚಾರ್ಯ ಕಳಕಳಿ ನಾವ್ಯಾರೂ ಮರೆಯುವಂತಿಲ್ಲ ಎಂದರು.

Tap to resize

Latest Videos

ಕೊರೋನಾ ಕಾಲದಲ್ಲಿ ರೇಣುಕಾಚಾರ್ಯ ಕೆಲಸಕ್ಕೆ ರಾಜೇಶ್ ಕೃಷ್ಣನ್ ಮೆಚ್ಚುಗೆ

ನಾವು ಬೇರೆ ಪಾರ್ಟಿ, ರೇಣುಕಾಚಾರ್ಯರದ್ದು ಬೇರೆ ಪಾರ್ಟಿ. ನಮ್ಮ ನಮ್ಮ ಪಾರ್ಟಿಗಳು ಬೇರೆಯಾದರೂ ಉತ್ತಮ ಕೆಲಸ ಮಾಡಿದವರನ್ನು ಒಳ್ಳೆಯ ಕೆಲಸ ಮಾಡಿದ್ದೀರಿ ಎಂಬುದಾಗಿ ಹೇಳಲೇಬೇಕು ಎಂದರು.

ಕೋವಿಡ್ ಕಾಲದಲ್ಲಿ ವಿವಿಧ ಸೇವೆ

ಕೋವಿಡ್ ಸಂದರ್ಭದಲ್ಲಿ ತಮ್ಮ ಕ್ಷೇತ್ರದಲ್ಲಿ ವಿವಿಧ ಸೇವೆಗಳನ್ನು ಸಲ್ಲಿಸುವ ಮೂಲಕ ಶಾಸಕ ರೆಣುಕಾಚಾರ್ಯ ಜನ ಮೆಚ್ಚಿಗೆಗೆ ಪಾತ್ರರಾಗಿದ್ದರು. ಹಗಲು ರಾತ್ರಿ ಎನ್ನದೇ ಸೋಂಕಿತರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕೋವಿಡ್ ಕೇರ್‌ ಸೆಂಟರಿನಲ್ಲೆ ತಮ್ಮ ವಾಸ್ತವ್ಯವಸನ್ನು ಮಾಡಿ ಸ್ವತಃ ರೋಗಿಗಳಿಗೆ ಊಟವನ್ನು ಮಾಡಿ ಬಡಿಸುತ್ತಿದ್ದರು. 

ಹೋಳಿಗೆ ತಯಾರು :  ಕಳೆದ ಹಲವು ದಿನಗಳಿಂದ ತಮ್ಮ ಕ್ಷೇತ್ರದ ಕೋವಿಡ್ ಸೋಂಕಿತರ ನೆರವಿಗೆ ಅವಿರತವಾಗಿ ಶ್ರಮಿಸುತ್ತಿರುವ ಶಾಸಕ ರೇಣುಕಾಚಾರ್ಯ ಇದೀಗ ಹೋಳಿಗೆ ತಯಾರಿಸಿದ್ದರು. ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿಂದು ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹಾಗೂ ಪತ್ನಿ ಖುದ್ದು ಬಾಣಸಿಗರಾಗಿ ಹೋಳಿಗೆ ತಯಾರಿಸಿ ಬಡಿಸಿದ್ದರು.

ಅನಾಥ ಬಾಲಕಿ ದತ್ತು : 

 ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಬಾಲಕಿಯನ್ನು  ಪಡೆಯಲು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ದಂಪತಿ ನಿರ್ಧರಿಸಿದ್ದರು. ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ದೊಡ್ಡೇರಹಳ್ಳಿ ಗ್ರಾಮದ ಬಾಲಕಿಯನ್ನು ಭೇಟಿ ಮಾಡಿದ ರೇಣುಕಾಚಾರ್ಯ ಹಾಗೂ ಪತ್ನಿ ಸುಮಿತ್ರಾ ಅವರು ಸಾಂತ್ವನ ಹೇಳಿ ಭರವಸೆ ನೀಡಿದ್ದರು.

ಬಾಲಕಿ ಕೆಲ ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡು ಎರಡು ತಿಂಗಳ ಹಿಂದೆ ಕೋವಿಡ್‌ನಿಂದ ತಂದೆಯನ್ನು ಕಳೆದುಕೊಂಡಿದ್ದಳು. ಹೀಗಾಗಿ ಗ್ರಾಮಕ್ಕೆ ತೆರಳಿ ಮಗುವಿಗೆ  ಹೇಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಆರ್ಥಿಕ ಸಹಾಯ ಮಾಡಿದ್ದರು. 

ಸಸಿ ನೆಟ್ಟ ಸೋಂಕಿತರು, ರೇಣುಕಾಚಾರ್ಯರಿಂದ ಮತ್ತೊಂದು ಮಾದರಿ ಕೆಲಸ

ಇದೇ ವೇಳೆ ಮಾತನಾಡಿದ ರೇಣುಕಾಚಾರ್ಯ ಅವರು, ಬಾಲಕಿಯ ಸಂಬಂಧಿಕರು ಒಪ್ಪಿದರೆ ದತ್ತು ಪಡೆದು ತಂದೆ ತಾಯಿ ಸ್ಥಾನದಲ್ಲಿ ನಿಂತು ಮುಂದಿನ ವಿಧ್ಯಾಭ್ಯಾಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಬಾಲಕಿಯನ್ನು ಬಾಚಿ ತಪ್ಪಿಕೊಂಡು ಸಾಂತ್ವನ ಹೇಳಿದ ರೇಣು ದಂಪತಿ.

click me!