ಬಸ್‌ ಉಚಿತ ಆಯ್ತು,ಈಗ ಗರ್ಭಿಣಿಯರಿಗೆ ಆಟೋಗಳಲ್ಲಿಯೂ ಉಚಿತ ಪ್ರಯಾಣಕ್ಕೆ ಚಾಲನೆ ಜಿಲ್ಲಾಧಿಕಾರಿ ದಿವ್ಯಪ್ರಭು

Published : Jul 19, 2023, 10:59 PM IST
ಬಸ್‌ ಉಚಿತ ಆಯ್ತು,ಈಗ ಗರ್ಭಿಣಿಯರಿಗೆ ಆಟೋಗಳಲ್ಲಿಯೂ ಉಚಿತ ಪ್ರಯಾಣಕ್ಕೆ ಚಾಲನೆ ಜಿಲ್ಲಾಧಿಕಾರಿ ದಿವ್ಯಪ್ರಭು

ಸಾರಾಂಶ

ಈಗಾಗಲೇ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಗರ್ಭಿಣಿಯರಿಗೆ ಉಚಿತ ಆಟೋ ಸೇವೆಗೆ ಚಾಲನೆ ನೀಡಿದ್ದಾರೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜು.19): ಆಟೋ ಚಾಲಕರು ಅಂದ್ರೆ ಸಾಕು ಅವರು ಕಿರಿಕ್ ಪಾರ್ಟಿಗಳು ಕಣಪ್ಪ ಅವರ ಸಹವಾಸ ಬೇಡ ಎಂದು ಹೇಳುವವರೇ ಹೆಚ್ಚು. ಆದ್ರೆ ಇಲ್ಲೊಂದು ಆಟೋ ಚಾಲಕರು ಹಾಗೂ ಮಾಲೀಕರ ಸಂಘ ಮಾಡಿರುವ ಕೆಲಸ ನೋಡಿದ್ರೆ ಎಲ್ಲರೂ ಶಹಬ್ಬಾಶ್ ಅನ್ನೋದು ಗ್ಯಾರಂಟಿ. ಅಷ್ಟಕ್ಕೂ ಅವರು ಮಾಡಿರೋ ಕಾರ್ಯವಾದ್ರು ಏನು ಅಂತೀರಾ! ಈ ವರದಿ ನೋಡಿ..

ಆಟೋ‌ಗಳ ಹಿಂಭಾಗದಲ್ಲಿ ಗರ್ಭಿಣಿಯರಿಗೆ ಉಚಿತ ಸೇವೆ ಎಂದು ಹಾಕಿರುವ ಸ್ನೇಹ ಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ. ಮತ್ತೊಂದೆಡೆ ಸ್ವತಃ ತಾವೇ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ‌ ನೀಡ್ತಿರೋ ಜಿಲ್ಲಾಧಿಕಾರಿ. ಇಂತಹ ಅಪರೂಪದ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ನಗರದ ಡಿಸಿ ಕಚೇರಿ ಬಳಿ. ಆಟೋ ಚಾಲಕರು ಅಂದ್ರೆ ಜನರು ಬರೀ ನೆಗೆಟಿವ್ ರೀತಿಯಲ್ಲೇ ಮಾತನಾಡ್ತಾರೆ. ಆದರೆ, ಸಾರ್ವಜನಿಕರಿಗಾಗಿ ನಾವು ಏನಾದ್ರು ಸಹಾಯ ಮಾಡಬೇಕು ಎಂದು ದೃಷ್ಟಿಯಿಂದ ನಮ್ಮ ಸ್ನೇಹ ಜೀವಿ ಬಳಗದಿಂದ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿಕೊಳ್ಳಲಾಗಿದೆ. 

ರೈತರಿಗೆ ಹೆಣ್ಣು ಕೊಡ್ತಿಲ್ಲ: ಕನ್ಯಾಭಾಗ್ಯ ಯೋಜನೆ ಜಾರಿಗೆ ತಂದು ಮದುವೆ ಮಾಡಿಸಿ

ಯಾವುದೇ ಸಮಸಯದಲ್ಲಿ ಬಂದರೂ ಉಚಿತ ಸೇವೆ: ದಿನದ ಯಾವುದೇ ಸಮಯದಲ್ಲಿಯಾದ್ರು ಗರ್ಭಿಣಿಯರು ಆಟೋ ಹತ್ತಿದ್ದರೆ ಅವರಿಂದ ಯಾವುದೇ ರೀತಿಯ ಹಣ ಪಡೆಯದೇ ಉಚಿತ ಸೇವೆಯನ್ನು ನೀಡುವುದೇ‌ ನಮ್ಮ‌ ಉದ್ದೇಶವಾಗಿದೆ. ನಮ್ಮ ಯೂನಿಯನ್ ವತಿಯಿಂದ ಪ್ರತೀ ವರ್ಷ ಮಾಡುತ್ತಲೇ ಬರುತ್ತಿದ್ದೇವೆ. ಈ ಸೇವೆ ನಿತ್ಯ ಸಾಗುತ್ತಲೇ ಇರುತ್ತದೆ. ಜನರು ನಮ್ಮ ಸೇವೆಯನ್ನು ಸದುಪಯೋಗ ಮಾಡಿಕೊಳ್ಳಲಿ. ಅದೇ ರೀತಿ ಸರ್ಕಾರ ಕೂಡ ನಮ್ಮ ಕಡೆ ಗಮನ ಹರಿಸಿ ನಮ್ಮಂತಹ ಆಟೋ ಚಾಲಕರಿಗೆ ಏನಾದ್ರು ಅನುಕೂಲ ಮಾಡಿಕೊಡಲಿ ಎಂಬುದು ಆಟೋ ಚಾಲಕರ ಒತ್ತಾಯ.

ಜಿಲ್ಲಾಧಿಕಾರಿ ದಿವ್ಯಪ್ರಭು ಚಾಲನೆ: ಫ್ರೀ ಆಟೋ ಸರ್ವೀಸ್ ಉದ್ಘಾಟನೆ ಮಾಡಿದ ಡಿಸಿ ಜಿ.ಆರ್.ಜೆ ದಿವ್ಯಪ್ರಭು ಅವರು, ಆಟೋ ಚಾಲಕರು ಗರ್ಭಿಣಿಯರು ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ.  ವಿಶೇಷವಾಗಿ ಮಹಿಳೆಯರಿಗೆ ಅನುಕೂಲ ಆಗಲಿರುವ ಯೋಜನೆ ಇದಾಗಿರುವುದರಿಂದ ನನಗೆ ತುಂಬಾ ಖುಷಿ ಆಗಿದೆ. ಇದೇ ರೀತಿ ಇನ್ನಷ್ಟು ಉತ್ತಮ ಸೇವೆಯನ್ನು ಜನರಿಗೆ ಅವರು ನೀಡುವಂತಾಗಲಿ ಎಂದು ಅಭಿನಂದಿಸಿದರು. ಇನ್ನೂ ಈ ಸೇವೆಯನ್ನು ಸದುಪಯೋಗ ಮಾಡಿಕೊಂಡಂತಹ ಗರ್ಭಿಣಿಯರು ಫುಲ್ ಖುಷ್ ಆಗಿದ್ರು. ಪ್ರತೀ ಬಾರಿ ಚೆಕಪ್ ಗೆ ಆಟೋದಲ್ಲಿ ಬರುವಾಗ ವಿಪರೀತ ದುಡ್ಡು ಆಗ್ತಿತ್ತು. ಆದ್ರೆ ಈಗ ಆಟೋದವರು ಉಚಿತ ಸೇವೆ ಆರಂಭಿಸಿರೋದು ಸಾಕಷ್ಟು ಬಡವರಿಗೆ ಅನುಕೂಲ ಆಗಲಿದೆ ಎಂದು ಶ್ಲಾಘಿಸಿದರು.

ಗೃಹಲಕ್ಷ್ಮಿ ಯೋಜನೆ ಅಧಿಕೃತ ಆರಂಭ: ಮೊದಲ ಫಲಾನುಭವಿ ಮಹಿಳೆಯರು ಇವರೇ.. ಸುಮಾ, ಆನಂದಿ, ಸತ್ಯಾ

ಒಟ್ಟಾರೆ ಸ್ನೇಹ ಜೀವಿ ಆಟೋ ಚಾಲಕರ ಬಳಗದಿಂದ ಗರ್ಭಿಣಿಯರಿಗೆ ಉಚಿತ ಸೇವೆ ಆರಂಭಿಸಿರೋದು ಉತ್ತಮ ಕೆಲಸ. ಇದೇ ರೀತಿ ಉಳಿದ ಆಟೋ ಚಾಲಕರ ಸಂಘವೂ ಸಾರ್ವಜನಿಕರ‌ ಒಳಿತಿಗಾಗಿ ಸೇವೆ ಸಲ್ಲಿಸಲು ಎಂಬುದು ಎಲ್ಲರ ಆಶಯ.

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC