ಯಲ್ಲಾಪುರ: ಮಹಿಳೆ ಮೇಲೆ ಕಾಮುಕನಿಂದ ಲೈಂಗಿಕ ದೌರ್ಜನ್ಯ

Kannadaprabha News   | Asianet News
Published : Sep 27, 2020, 01:45 PM ISTUpdated : Sep 27, 2020, 01:46 PM IST
ಯಲ್ಲಾಪುರ: ಮಹಿಳೆ ಮೇಲೆ ಕಾಮುಕನಿಂದ ಲೈಂಗಿಕ ದೌರ್ಜನ್ಯ

ಸಾರಾಂಶ

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ| ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಾರೆ ಗ್ರಾಮದಲ್ಲಿ ನಡೆದ ಘಟನೆ| ವಿಷಯ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ ಆರೋಪಿ| ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲು| 

ಯಲ್ಲಾಪುರ(ಸೆ.27):ತಾಲೂಕಿನ ಮಾವಿನಮನೆ ಗ್ರಾಪಂ ವ್ಯಾಪ್ತಿಯ ಬಾರೆಯಲ್ಲಿ ಮಹಿಳೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯ ವಿರುದ್ಧ ಸಂತ್ರಸ್ತ ಮಹಿಳೆ ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕೊಟ್ಟಿಗೆ ಮನೆಯ ಪ್ರಕಾಶ ಅನಂತ ಭಟ್ಟ ಎಂಬಾತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಬಾರೆಯ 27 ವರ್ಷದ ಮಹಿಳೆ ದೂರಿದ್ದಾರೆ. ನಾನು ಹಾಗೂ ನನ್ನ ಪತಿ ವಜ್ರಳ್ಳಿಯಲ್ಲಿ ಕೆಲಸಕ್ಕಿದ್ದ ಸಂದರ್ಭದಲ್ಲಿ ಆರೋಪಿ ಪ್ರಕಾಶ ಭಟ್ಟ, ನನಗೆ ಜಮೀನು ತೆಗೆಸಿಕೊಡುವುದಾಗಿ ಆಮಿಷವೊಡ್ಡಿ, ಒತ್ತಾಯಪೂರ್ವಕವಾಗಿ ತನ್ನ ಮನೆಗೆ ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಸುಮಾರು ಒಂದು ತಿಂಗಳ ಕಾಲ ನಾನು ಹಾಗೂ ನನ್ನ ಪತಿ ಕೆಲಸ ಮಾಡಿದೆವು. ಒಂದು ದಿವಸ ನನ್ನ ಪತಿ ಗದ್ದೆಯ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಪ್ರಕಾಶ ಭಟ್ಟ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. 

ಶಿರಸಿ: ಮಾರಿಕಾಂಬಾ ದೇವಿ ಮೂರ್ತಿ ತಲೆಯ ಮೇಲೆ ಎತ್ತಿ ಹಿಡಿದು ಗೌರವಿಸಿದ್ದ ಎಸ್‌ಪಿಬಿ

ಈ ವಿಷಯ ಬಹಿರಂಗಪಡಿಸಿದರೆ ನನ್ನನ್ನು ಹಾಗೂ ನನ್ನ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಕಳೆದ ಆರು ತಿಂಗಳ ಅವಧಿಯಲ್ಲಿ ಹಲವು ಬಾರಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಮಹಿಳೆ ದೂರು ನೀಡಿದ್ದಾರೆ. ದೂರು ನೀಡುವ ವಿಷಯ ತಿಳಿಯುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ದು, ಆತನನ್ನು ಶೀಘ್ರ ಪತ್ತೆ ಹಚ್ಚಿ, ನನಗೆ ನ್ಯಾಯ ಒದಗಿಸಿಕೊಡಬೇಕೆಂದು ಸಂತ್ರಸ್ತೆ ಒತ್ತಾಯಿಸಿದ್ದಾಳೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಚಿಕ್ಕಬಳ್ಳಾಪುರದಲ್ಲಿ ಮಾನವ ಹಕ್ಕುಗಳ ದಿನಾಚರಣೆ: ಸಾವಿರಾರು ಜನರಲ್ಲಿ ನಾಯಕತ್ವ ಬಿತ್ತಿದ ನವಶಕ್ತಿ ನಾಟಕ
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ