ಪೊಲೀಸರಿಂದ ಇದೆಂತಾ ಕೃತ್ಯ : ಬೇಲಿಯೇ ಎದ್ದು ಹೊಲ ಮೇಯ್ತು!

By Kannadaprabha NewsFirst Published Sep 27, 2020, 1:04 PM IST
Highlights

ಇದೊಂದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯಾಗಿದೆ. ಪೊಲೀಸರೇ ಹಿಂಗೆ ಮಾಡಿದ್ರೆ ಇನ್ನ್ಯಾರ ಬಳಿ ಹೋಗಬೇಕು..?

ಮಾಲೂರು (ಸೆ.27):  ಕೋಳಿಗಳ ಕಳ್ಳತನ ಮಾಡಿರುವುದಾಗಿ ಆರೋಪಿಸಿ ಕಿರುಕುಳ ನೀಡಿದ್ದ ಸ್ಥಳೀಯ ಅಪರಾಧ ವಿಭಾಗದ ಪೊಲೀಸರು ಪ್ರಕರಣದಿಂದ ಕೈಬಿಡಲು 2 ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಕಾರಣ ವ್ಯಕ್ತಿಯೋರ್ವ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತ್ಮಹತ್ಯೆಗೆ ಕಾರಣರಾದ ಪೊಲೀಸರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅವರ ಸಹೋದರ ನಾಗರಾಜ್‌ ಅವರು ಪಟ್ಟಣದ ಠಾಣೆಯ ಸಿಪಿಐ ಮಾರ್ಕೋಂಡಪ್ಪ ಅವರಿಗೆ ದೂರು ನೀಡಿದ್ದಾರೆ.

ತಾಲೂಕಿನ ಹನುಮನಾಯಕನಹಳ್ಳಿಯಲ್ಲಿ ಕೋಳಿಗಳ ಕಳ್ಳತನ ಮಾಡಿರುವುದಾಗಿ ಬಂದ ದೂರಿನ ಮೇರೆಗೆ ಅಪರಾಧ ವಿಭಾಗದ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ 3 ಮಂದಿಯನ್ನು ಠಾಣೆಗೆ ಕರೆತಂದು ಒಂದು ದಿನಪೂರ್ತಿ ಠಾಣೆಯಲ್ಲಿ ಕೂಡಿ ಹಾಕಿ ಕಿರುಕುಳ ನೀಡಿದ್ದು, 2 ಲಕ್ಷ ರು.ಗಳು ನೀಡಿದರೆ ಪ್ರಕರಣದಿಂದ ಕೈ ಬಿಡುವುದಾಗಿ ಬೆದರಿಕೆ ಹಾಕಿದ್ದರು.

ಏರ್‌ಗನ್‌ ತೋರಿಸಿ ಚಿನ್ನ ದೋಚಿದ ಖದೀಮರು: ಮೂವರ ಬಂಧನ ..

ಇದರಿಂದ ಬೇಸತ್ತ ನನ್ನ ಸಹೋದರ ನರಸಿಂಹಪ್ಪ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೋಲಾರದ ಎಸ್‌.ಎನ್‌.ಆರ್‌. ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತ್ಮಹತ್ಯೆಗೆ ಕಾರಣರಾದ ಅಪರಾಧ ವಿಭಾಗದ ಪೊಲೀಸ್‌ ಸಿಬ್ಬಂದಿಯ ಮೇಲೆ ಪ್ರಕರಣ ದಾಖಲಿಸಿಕೊಳ್ಳುವಂತೆ ಹನುಮನಾಯಕನಹಳ್ಳಿ ಗ್ರಾಮದ ನರಸಿಂಹಪ್ಪ ಸಹೋದರ ನಾಗರಾಜ್‌ ದೂರು ನೀಡಿದ್ದಾರೆ.

ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಮಾತನಾಡಿ, ಅಮಾಯಕರನ್ನು ಠಾಣೆಗೆ ಕರೆ ತಂದು ಕಿರುಕುಳ ನೀಡುತ್ತಿರುವ ಪೊಲೀಸರ ವರ್ತನೆ ಖಂಡನೀಯವಾಗಿದ್ದು, ಇಂತಹ ಅಧಿ​ಕಾರಿಗಳನ್ನು ನಿಯಂತ್ರಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.

click me!