ಕೊರೋನಾ ಕಾಟ: ಆಹಾರ ಸಿಗದೆ ಲೈಂಗಿಕ ಕಾರ್ಯಕರ್ತೆಯರ ಪರದಾಟ!

By Kannadaprabha News  |  First Published Apr 12, 2020, 9:21 AM IST

ಲೈಂಗಿಕ ಕಾರ್ಯಕರ್ತೆಯರ ಬದುಕು ಹೈರಾಣ| ಲಾಕ್‌​ಡೌ​ನ್‌​ನಿಂದಾಗಿ 4300 ಲೈಂಗಿಕ ಕಾರ್ಯ​ಕ​ರ್ತೆ​ಯ​ರಿಗೆ ಸಂಕ​ಷ್ಟ| ಜಿಲ್ಲೆಯಲ್ಲಿರುವ 4300 ಲೈಂಗಿಕ ಕಾರ್ಯಕರ್ತೆಯರು| ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಪೈಕಿ ಶೇ. 96ರಷ್ಟು ಜನರು ಆರ್ಥಿಕವಾಗಿ ಅತ್ಯಂತ ಸಂಕಷ್ಟದಲ್ಲಿರುವವರೇ| 


ಕೆ.ಎಂ. ಮಂಜುನಾಥ್‌

ಬಳ್ಳಾರಿ(ಏ.12): ಕೊರೋನಾ ವೈರಸ್‌ ಭೀತಿಯಿಂದಾಗಿರುವ ಲಾಕ್‌ಡೌನ್‌ ಜಿಲ್ಲೆಯ ಲೈಂಗಿಕ ಕಾರ್ಯಕರ್ತೆಯರ ಬದುಕನ್ನು ಸಹ ಹೈರಾಣಾಗಿಸಿದೆ. ದಿನದ ಊಟಕ್ಕಾಗಿ ಅವರು ಪರದಾಡುತ್ತಿದ್ದಾರೆ.

Tap to resize

Latest Videos

ನಗರ ಹಾಗೂ ಗ್ರಾಮೀಣ ಭಾಗದ ಜನರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 4300 ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಪೈಕಿ ಶೇ. 96ರಷ್ಟು ಜನರು ಆರ್ಥಿಕವಾಗಿ ಅತ್ಯಂತ ಸಂಕಷ್ಟದಲ್ಲಿರುವವರೇ ಇದ್ದು, ನಿತ್ಯದ ಹಸಿವು ನೀಗಿಸಿಕೊಳ್ಳಲು, ಮಕ್ಕಳ ಶಿಕ್ಷಣಕ್ಕೆ ಹಣ ಜೋಡಿಸಿಕೊಳ್ಳಲು ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕೊರೋನಾ ಆತಂಕ: ಸೋಂಕಿತ ಓಡಾಡಿದ್ದ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರಿಂದ ಸಮೀಕ್ಷೆ

ಪತಿಯಿಂದ ದೂರ ಉಳಿದವರು, ಯಾರದೋ ಕುತಂತ್ರದಿಂದ ಮುತ್ತು ಕಟ್ಟಿಸಿಕೊಂಡು ದೇವದಾಸಿ ಆದವರು, ಘರವಾಲಿಗಳುಗೆ ಮಾರಾಟವಾದ ಬಡವರ ಮಕ್ಕಳು ಈ ವೃತ್ತಿಯಲ್ಲಿದ್ದಾರೆ. ಇವರು ಕೆಲವರ ಜೊತೆ ದೂರವಾಣಿ ಸಂಪರ್ಕ ಇಟ್ಟುಕೊಂಡು ವೃತ್ತಿ ನಡೆಸುತ್ತಾರೆ. ಮತ್ತೆ ಕೆಲವರು ನಿರ್ದಿಷ್ಟಮನೆಯೊಂದರಲ್ಲಿ ಲೈಂಗಿಕ ವೃತ್ತಿ ನಡೆಸುತ್ತಾರೆ. ಜಿಲ್ಲೆಯ 4300 ಲೈಂಗಿಕ ಕಾರ್ಯಕರ್ತೆಯರಲ್ಲಿ 1200 ಜನರು ಗ್ರಾಮೀಣ ಭಾಗದವರು.

ಸೌಖ್ಯ ಬೆಳಕು ನಿಗಾ

ಜಿಲ್ಲೆಯ ಲೈಂಗಿಕ ಕಾರ್ಯಕರ್ತೆರ ಆರೋಗ್ಯ ತಪಾಸಣೆ, ಕೌನ್ಸೆಲಿಂಗ್‌, ಎಚ್‌ಐವಿ ಪರೀಕ್ಷೆ ಸೇರಿದಂತೆ ಅವರಿಗೆ ಬೇಕಾದ ಆರೋಗ್ಯ ಸೇವೆಯನ್ನು ಸೌಖ್ಯ ಬೆಳಕು ಸಂಘಟನೆ ಒದಗಿಸುತ್ತಿದೆ. ನಿರಂತರ ಲೈಂಗಿಕ ಕಾರ್ಯಕರ್ತೆಯರ ಜೊತೆ ಸಂಪರ್ಕದಲ್ಲಿರುವ ಸಂಘಟನೆಯ ಅವರ ಆರೋಗ್ಯದ ಮೇಲೆ ಕಾಳಜಿ ವಹಿಸಿ ಕಾರ್ಯನಿರ್ವಹಿಸುತ್ತಿದೆ. ಕೊರೋನಾ ವೈರಸ್‌ನಿಂದ ಲಾಕ್‌ಡೌನ್‌ ಆಗಿರುವುದರಿಂದ ಸೌಖ್ಯ ಬೆಳಕಿನ ಮುಖ್ಯಸ್ಥರು ಲೈಂಗಿಕ ಕಾರ್ಯಕರ್ತೆಯರಿಗೆ ಬೇಕಾದ ಪಡಿತರ ಮತ್ತಿತರ ಸೌಲಭ್ಯಕ್ಕಾಗಿ ದಾನಿಗಳ ಮೊರೆ ಹೋಗಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಲೈಂಗಿಕ ಕಾರ್ಯಕರ್ತೆಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸದ್ಯ ಅವರಿಗೆ ಅಕ್ಕಿ, ಬೇಳೆ, ಎಣ್ಣೆ ಮತ್ತಿತರ ವಸ್ತುಗಳನ್ನು ಒದಗಿಸಬೇಕಾಗಿದೆ. ಜಿಲ್ಲಾಡಳಿತ ಮೊರೆ ಹೋಗುತ್ತಿದ್ದೇವೆ ಎಂದು ಬಳ್ಳಾರಿಯ  ಸೌಖ್ಯಬೆಳಕು ಕಾರ್ಯಕ್ರಮದ ವ್ಯವಸ್ಥಾಪಕರು ಲಕ್ಷ್ಮಿ ನರಸಮ್ಮ ಹೇಳಿದ್ದಾರೆ. 
 

click me!