Raichur: ತಿಂಗಳಿನಿಂದ ಕುಡಿಯಲು ನೀರಿಲ್ಲದೇ ಪರದಾಡುತ್ತಿರುವ ಜನರು; ಕ್ಯಾರೆ ಅಂತಿಲ್ಲ PDO

Published : Apr 16, 2026, 11:39 AM IST
Lack of drinking water

ಸಾರಾಂಶ

ಅರಕೇರಾ ತಾಲೂಕಿನ ಯಮನಾಯ್ಕ ತಾಂಡಾದಲ್ಲಿ ಅಂತರ್ಜಲ ಕುಸಿತದಿಂದಾಗಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ. ಈ ಸಮಸ್ಯೆಯ ಬಗ್ಗೆ ಶಾಸಕಿ ಕರೆಮ್ಮ ಜಿ. ನಾಯಕರ ಗಮನ ಸೆಳೆದಾಗ, ಅವರು ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಯಚೂರು:  ದೇವದುರ್ಗಸಮೀಪದ ಅರಕೇರಾ ತಾಲೂಕಿನ ಕೆ.ಇರಬಗೇರಾ ಗ್ರಾಪಂ ವ್ಯಾಪ್ತಿಯ ಯಮನಾಯ್ಕ ತಾಂಡಾ ವಾಸಿಗಳಿಗೆ ಕಳೆದ ಒಂದು ತಿಂಗಳಿನಿಂದ ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದಾರೆ.ಅನೇಕ ಬಾರಿ ಗ್ರಾಪಂ ಪಿಡಿಒರಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಸಿಗಳು ದೂರಿದ್ದಾರೆ.

ಅಂತರ್ಜಲ ಕುಸಿತ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಶಾಸಕಿ ಕರೆಮ್ಮ ಜಿ. ನಾಯಕರನ್ನು ತಾಂಡಾ ವಾಸಿಗಳ ನಿಯೋಗ ಭೇಟಿ ಮಾಡಿ, ಕುಡಿವ ನೀರಿನ ತೊಂದರೆ ಕುರಿತು ಗಮನ ಸೆಳೆದರು. ನೀರು ಸರಬಾಜು ಮಾಡುತ್ತಿದ್ದ ಕೊಳವೆ ಬಾವಿಯಲ್ಲಿ ಅಂತರ್ಜಲ ಕುಸಿದ ಪರಿಣಾಮ ನೀರು ಲಭ್ಯವಿಲ್ಲ. ಪರ್ಯಾಯ ದಾರಿಯಿಲ್ಲದೇ ತಾಂಡಾ ವಾಸಿಗಳು ಹೊಲಗಳಿಗೆ ಹೋಗಿ ನೀರು ತರುವ ಅನಿವಾರ್ಯತೆ ಇದೆ. ಇನ್ನೂ ಕೆಲವರು ಪಕ್ಕದ ತಾಂಡಾಗಳಿಗೆ ಹೋಗಿ ನೀರು ತರುತ್ತಿದ್ದಾರೆ. ಈ ಕುರಿತು ಅನೇಕ ಬಾರಿ ಪಿಡಿಒಯವರ ಗಮನಕ್ಕೆ ತಂದರೂ ಕ್ಯಾರೇ ಎನ್ನುತ್ತಿಲ್ಲ ಎಂದು ವಾಸಿಗಳು ದೂರಿದರು.

ಇದನ್ನೂ ಓದಿ: ವಿಜಯನಗರ: ಹೊಲಕ್ಕೆ ಹೋಗಿದ್ದ ರೈತನ ಮೇಲೆ ಕರಡಿ ದಾಳಿ, ಕೈ, ಕಾಲು ಭಾಗಕ್ಕೆ ಪರಚಿ ತೀವ್ರ ಗಾಯ

ಶಾಸಕಿ ಕರೆಮ್ಮ ಜಿ.ನಾಯಕ ತಾಪಂ ಇಒ ಮತ್ತು ಪಿಡಿಒರಿಗೆ ದೂರವಾಣಿಯಲ್ಲಿ ಮಾತನಾಡಿ, ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಹಾಗೂ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸೂಚಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಬಳೆ, ಬಸನಗೌಡ ದೇಸಾಯಿ, ಗೋವಿಂದರಾಜ್ ನಾಯಕ ಕೊತ್ತದೊಡ್ಡಿ, ಶಾಲಂ ಉದ್ದಾರ, ತಾಂಡಾ ವಾಸಿಗಳಾದ ಶಂಕರಪ್ಪ ಚವ್ಹಾಣ, ಕೃಷ್ಣಪ್ಪನಾಯ್ಕ, ಆಡಕಪ್ಪ, ದ್ಯಾಮ್ಲಾನಾಯಕ ಹಾಗೂ ಇತರರು ಇದ್ದರು.

ಇದನ್ನೂ ಓದಿ: ಯೋಗೇಶ್ ಗೌಡ ಹ*ತ್ಯೆ: ಪಾಪಪ್ರಜ್ಞೆ ಕಾಡ್ತಿತ್ತು ಹೀಗಾಗಿ ಕೋರ್ಟ್‌ನಲ್ಲಿ ಸತ್ಯ ಹೇಳಿದೆ, ಮಾಫಿ ಸಾಕ್ಷಿ ಬಸವರಾಜ್ ಮುತ್ತಗಿ

 

 

PREV
Read more Articles on
click me!

Recommended Stories

ಬೆಂಗಳೂರು: ಪ್ರೀತಿ ನಿರಾಕರಿಸಿದ ಹಿಂದೂ ಮಾಡೆಲ್‌ಗೆ ಹಿಗ್ಗಾ ಮುಗ್ಗಾ ಥಳಿಸಿದ ಜುಹೇದ್!
ವಿಜಯನಗರ: ಹೊಲಕ್ಕೆ ಹೋಗಿದ್ದ ರೈತನ ಮೇಲೆ ಕರಡಿ ದಾಳಿ, ಕೈ, ಕಾಲು ಭಾಗಕ್ಕೆ ಪರಚಿ ತೀವ್ರ ಗಾಯ