ಬೆಂಗಳೂರಿನಲ್ಲಿ ಮಾ.8 ರಿಂದ ಆರಂಭಗೊಂಡ ಕೊರೋನಾ ಸೋಂಕಿನ ಆರ್ಭಟ ಮೇ 14ಕ್ಕೆ ಬರೋಬ್ಬರಿ 196ಕ್ಕೆ ಬಂದು ತಲುಪಿದೆ| ಒಂದೆರಡು ದಿನಗಳಲ್ಲಿ ಸೋಂಕಿತರ ಸಂಖ್ಯೆ 200ರ ಗಡಿ ಮುಟ್ಟಲಿದೆ|ನಗರದ 51 ವಾರ್ಡ್‌ಗಳಲ್ಲಿ ಈವರೆಗೆ ಕೊರೋನಾ ಸೋಂಕು ಪ್ರಕರಣ ಕಾಣಿಸಿಕೊಂಡಿವೆ|
ಬೆಂಗಳೂರು(ಮೇ.15): ನಗರದಲ್ಲಿ ಗುರುವಾರ ಹೊಸದಾಗಿ ಒಟ್ಟು ಏಳು ಕೊರೋನಾ ಸೋಂಕು ಪ್ರಕರಣ ದೃಢಪಡುವುದರೊಂದಿಗೆ ರಾಜಧಾನಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದ್ವಿಶತಕದ ಗಡಿಯತ್ತ ದಾಪುಗಾಲು ಹಾಕಿದೆ.
ನಗರದಲ್ಲಿ ಮಾ.8 ರಿಂದ ಆರಂಭಗೊಂಡ ಕೊರೋನಾ ಸೋಂಕಿನ ಆರ್ಭಟ ಮೇ 14ಕ್ಕೆ ಬರೋಬ್ಬರಿ 196ಕ್ಕೆ ಬಂದು ತಲುಪಿದೆ. ಒಂದೆರಡು ದಿನಗಳಲ್ಲಿ ಸೋಂಕಿತರ ಸಂಖ್ಯೆ 200ರ ಗಡಿ ಮುಟ್ಟಲಿದೆ.
ಗುರುವಾರ ಪಾದರಾಯನಪುರದಲ್ಲಿ ಐದು, ಮಂಗಮ್ಮಪಾಳ್ಯ ಎರಡು ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಈವರೆಗೆ 92 ಜನರು ಗುಣಮುಖರಾಗಿದ್ದು, 94 ಸಕ್ರಿಯ ಪ್ರಕರಣಗಳು ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟು 8 ಜನರು ಸಾವನ್ನಪ್ಪಿದ್ದಾರೆ.
ಕೊರೋನಾ ಕಾಟ: ಪ್ರತಿ ಕುಟುಂಬದ ಕೋವಿಡ್ ಪರೀಕ್ಷೆ ಆರಂಭ
ನಗರದ 51 ವಾರ್ಡ್‌ಗಳಲ್ಲಿ ಈವರೆಗೆ ಕೊರೋನಾ ಸೋಂಕು ಪ್ರಕರಣ ಕಾಣಿಸಿಕೊಂಡಿವೆ. ಅದರಲ್ಲಿ 33 ವಾರ್ಡ್‌ಗಳಲ್ಲಿ ಕಳೆದ 21 ದಿನಗಳಿಂದ ಕೊರೋನಾ ಸೋಂಕು ಪ್ರಕರಣ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಈ ವಾರ್ಡ್‌ಗಳನ್ನು ಕಂಟೈನ್ಮೆಂಟ್ ಮುಕ್ತ ವಾರ್ಡ್ ಎಂದು ಘೋಷಿಸಲಾಗಿದೆ. ಈ ಮೂಲಕ ನಗರದ ಕಂಟೈನ್ಮೆಂಟ್ ವಾರ್ಡ್‌ಗಳ ಸಂಖ್ಯೆ 19ಕ್ಕೆ ಇಳಿಕೆಯಾಗಿದೆ.