ಶಿವಮೊಗ್ಗ ಹ್ಯೂಂಡಾಯ್‌ ಕಾರ್ ಶೋ ರೂಂನಲ್ಲಿ ಅಗ್ನಿ ಅವಘಡ, 7 ಕಾರು ಭಸ್ಮ!

Published : Feb 17, 2024, 09:57 AM IST
 ಶಿವಮೊಗ್ಗ  ಹ್ಯೂಂಡಾಯ್‌ ಕಾರ್ ಶೋ ರೂಂನಲ್ಲಿ ಅಗ್ನಿ ಅವಘಡ, 7 ಕಾರು ಭಸ್ಮ!

ಸಾರಾಂಶ

ಕರೆಂಟ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ನಗರದ ಶಂಕರಮಠ ರಸ್ತೆಯಲ್ಲಿರುವ ರಾಹುಲ್ ಹ್ಯೂಂಡಾಯ್‌ ಕಾರ್ ಶೋ ರೂಂಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರು. ಮೌಲ್ಯವ ಕಾರು ಮತ್ತು ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ.

ಶಿವಮೊಗ್ಗ (ಫೆ.17): ಕರೆಂಟ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ನಗರದ ಶಂಕರಮಠ ರಸ್ತೆಯಲ್ಲಿರುವ ರಾಹುಲ್ ಹ್ಯೂಂಡಾಯ್‌ ಕಾರ್ ಶೋ ರೂಂಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರು. ಮೌಲ್ಯವ ಕಾರು ಮತ್ತು ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ. ಒಟ್ಟು 7 ಕಾರುಗಳು ಬೆಂಕಿಗೆ ಆಹುತಿಯಾಗಿದೆ.

ರಾತ್ರಿ 10 ಗಂಟೆಗೆ ಅಗ್ನಿ ಅವಘಡ ಸಂಭವಿಸಿದ್ದು, ಶೋ‌ ರೂಂ ನಲ್ಲಿದ್ದ ಹೊಸ ಕಾರುಗಳು ಹಾಗೂ ಸರ್ವಿಸ್ ಗೆ ಬಂದಿದ್ದ ಲಕ್ಷಾಂತರ ರು. ಮೌಲ್ಯದ ಕಾರುಗಳು ಭಾಗಶಃ ಅಥವಾ ಪೂರ್ಣ ಬೆಂಕಿಗೆ ಆಹುತಿಯಾಗಿರುವುದಾಗಿ ತಿಳಿದು ಬಂದಿದೆ.

ಕೇರಳ ಸಿಎಂ ಪುತ್ರಿಯ 135 ಕೋಟಿ ವಂಚನೆ ಕೇಸ್, ವೀಣಾ ವಿಜಯನ್ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

ಶೋ ರೂಂನ ಮೇಲ್ಛಾವಣಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ, ಶೋ ರೂಂ ಸಿಬ್ಬಂದಿಗಳು, ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.

ಈ ವೇಳೆ ಬೆಂಕಿ ಜೋರಾಗಿದ್ದು, ಪಕ್ಕದ ಸೋನಾ ಹೊಂಡಾ ಶೋ‌ ರೂಂಗೂ ಬೆಂಕಿ ತಗುಲಿದ್ದು, ಕೂಡಲೇ ಅಗ್ನಿ ಶಾಮಕದಳದವರು ಬೆಂಕಿಯನ್ನು ನಂದಿಸಿದ್ದಾರೆ. ವಿಷಯ ತಿಳಿದು ದೊಡ್ಡ ಸಂಖ್ಯೆಯ ಜನರು ಶೋ ರೂಂ ಬಳಿ ಜಮಾಯಿಸಿದರು. ಅಗ್ನಿಶಾಮಕ ದಳದ ವಿಳಂಬಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ ನಡೆಯಿತು.

ರೈತರು- ಕೇಂದ್ರದ ಮಾತುಕತೆ ಅಪೂರ್ಣ, ನಾಳೆ 4ನೇ ಸುತ್ತಿನ ಚರ್ಚೆ, ಪ್ರತಿಭಟನೆ ವೇಳೆ ಅಶ್ರುವಾಯು ಸಿಸಿಡಿದ ಪೊಲೀಸ್‌

ಇನ್ನು ಶೋರೂಮ್ ಗೆ ಬೆಂಕಿ ಬಿದ್ದ  ತಕ್ಷಣ ರಿಪೇರಿಗೆ ಬಂದಿದ್ದ ಕಾರುಗಳನ್ನು ಹೊರ ತೆಗೆದು ಸುರಕ್ಷಿತ ಸ್ಥಳದಲ್ಲಿ ಸಿಬ್ಬಂದಿ ಇರಿಸಿದರು. ಶೋರೂಮ್ ನ ಡಿಸ್ಪ್ಲೇ ಕೌಂಟರ್ ನಲ್ಲಿದ್ದ ಮೂರಕ್ಕೂ ಹೆಚ್ಚು ಹೊಸ ಕಾರು ಸುಟ್ಟು ಭಸ್ಮವಾಗಿದೆ. ಶೋ ರೂಂ ನ ಸ್ಪೇರ್ ಪಾರ್ಟ್ಸ್ ರೆಕಾರ್ಡ್ ಸೆಕ್ಷನ್ ಗಳಿಗೂ ಬೆಂಕಿಯಿಂದ ಹಾನಿಯಾಗಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಕೋಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

PREV
Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ