ಗೆದ್ದರೆ ನಿಮ್ಮ ಮನೆ ಬಾಗಿಲಿಗೆ ಲಾಲ್‌

By Kannadaprabha News  |  First Published Apr 11, 2023, 5:24 AM IST

ಪರಮೇಶ್ವರ್‌ಗೆ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳೋಕೆ ಅಧಿಕಾರ ಬೇಕಿದೆ. ಸ್ನೇಹಜೀವಿ ಸುಧಾಕರಲಾಲ್‌ಗೆ ಜನಸೇವೆ ಮಾಡಲು ಅಧಿಕಾರ ಬೇಕಿದೆ. ಕೊರಟಗೆರೆ ಜನರೇ ಕಾಂಗ್ರೇಸ್‌-ಬಿಜೆಪಿಗೆ ಮತ ಹಾಕಿದ್ರೇ ನಿಮ್ಮ ಕೆಲಸಕ್ಕೆ ಬೆಂಗಳೂರು ಮತ್ತು ತುಮಕೂರು ನಗರಕ್ಕೆ ಹೋಗ್ಬೇಕು. ಜೆಡಿಎಸ್‌ ಪಕ್ಷಕ್ಕೆ ಮತ ಹಾಕಿದ್ರೇ ನಿಮ್ಮ ಮನೆ ಬಾಗಿಲಿಗೆ ಲಾಲ್‌ ಬರ್ತಾರೆ ಎಂದು ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಡಿಮಡು ರಂಗಶಾಮಯ್ಯ ತಿಳಿಸಿದರು.


 ಕೊರಟಗೆರೆ : ಪರಮೇಶ್ವರ್‌ಗೆ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳೋಕೆ ಅಧಿಕಾರ ಬೇಕಿದೆ. ಸ್ನೇಹಜೀವಿ ಸುಧಾಕರಲಾಲ್‌ಗೆ ಜನಸೇವೆ ಮಾಡಲು ಅಧಿಕಾರ ಬೇಕಿದೆ. ಕೊರಟಗೆರೆ ಜನರೇ ಕಾಂಗ್ರೇಸ್‌-ಬಿಜೆಪಿಗೆ ಮತ ಹಾಕಿದ್ರೇ ನಿಮ್ಮ ಕೆಲಸಕ್ಕೆ ಬೆಂಗಳೂರು ಮತ್ತು ತುಮಕೂರು ನಗರಕ್ಕೆ ಹೋಗ್ಬೇಕು. ಜೆಡಿಎಸ್‌ ಪಕ್ಷಕ್ಕೆ ಮತ ಹಾಕಿದ್ರೇ ನಿಮ್ಮ ಮನೆ ಬಾಗಿಲಿಗೆ ಲಾಲ್‌ ಬರ್ತಾರೆ ಎಂದು ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಡಿಮಡು ರಂಗಶಾಮಯ್ಯ ತಿಳಿಸಿದರು.

ಕೊರಟಗೆರೆ ಪಟ್ಟಣದ ಜಾಮೀಯಾ ಸಮುದಾಯ ಭವನದ ಆವರಣದಲ್ಲಿ ಜಾತ್ಯತೀತಾ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಹಿಂದುಳಿದ ವರ್ಗಗಳ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

ಹಿಂದುಳಿದ ವರ್ಗಗಳ ಜೆಡಿಎಸ್‌ ರಾಜ್ಯಾಧ್ಯಕ್ಷ ಜಯರಾಂ ಮಾತನಾಡಿ,ದ ಪರವಾಗಿ ಹೋರಾಟ ಮಾಡುವ ನಾಯಕ ನಮ್ಮ ದೇವೇಗೌಡರು ಮಾತ್ರ. ಪಂಚರತ್ನ ಯೋಜನೆಯು ಮಾಜಿ ಸಿಎಂ ಕುಮಾರಸ್ವಾಮಿಯ ಕರ್ನಾಟಕ ಸಮಗ್ರ ಅಭಿವೃದ್ಧಿಯ ಕನಸು. ಕೊರಟಗೆರೆ ಕ್ಷೇತ್ರದ ಲಾಲ್‌ 25ವರ್ಷದ ಜನಸೇವೆಯೇ ಅವರ ಗೆಲುವಿಗೆ ಆಧಾರಸ್ತಂಭ. ಆರೋಗ್ಯ ಸೇವೆ ಪಡೆದಿರುವ 35ಸಾವಿರ ಜನರೇ ಲಾಲ್‌ರನ್ನು ಮತ್ತೇ ಶಾಸಕರನ್ನಾಗಿ ಮಾಡ್ತಾರೇ. ಕುಮಾರಸ್ವಾಮಿ ಸಿಎಂ ಮತ್ತು ಸುಧಾಕರಲಾಲ್‌ ಸಚಿವ ಆಗೋದು ಖಚಿತ ಎಂದು ತಿಳಿಸಿದರು.

ಹಿಂದುಳಿದ ವರ್ಗದ ರಾಜ್ಯ ಕಾರ್ಯಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ಕೊರಟಗೆರೆ ಕ್ಷೇತ್ರ ಜೆಡಿಎಸ್‌ ಪಕ್ಷದ ಭದ್ರಕೋಟೆ. 2023ಕ್ಕೆ ಕೊರಟಗೆರೆ ಕ್ಷೇತ್ರದಿಂದ 2023ಕ್ಕೆ ಸುಧಾಕರಲಾಲ್‌ ಶಾಸಕ ಆಗೋದು ಖಚಿತ. ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಿದ್ದು ನಮ್ಮ ಹೆಮ್ಮೆಯ ಮಾಜಿ ಪ್ರಧಾನಿ ದೇವೇಗೌಡರು. ಕಾಂಗ್ರೆಸ್‌ ಪಕ್ಷ ಜಾತಿ, ನೀತಿ ಮತ್ತು ಓಣಿಯನ್ನೇ ವಿಂಗಡಣೆ ಮಾಡಿ ರಾಜಕೀಯ ಮಾಡುತ್ತಾ ಬಂದಿವೆ. ಕೊರಟಗೆರೆ ಕ್ಷೇತ್ರದ ಮತದಾರರು ಮನೆಯ ಮಗನಿಗೆ ಮತ ನೀಡಬೇಕಿದೆ ಎಂದು ಮನವಿ ಮಾಡಿದರು.

ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್‌.ಸುಧಾಕರಲಾಲ್‌ ಮಾತನಾಡಿ, ಹಿಂದುಳಿದ ಸಮಾಜಕ್ಕೆ ರಾಜಕೀಯ ಮೀಸಲಾತಿ ನೀಡಿದ್ದು ದೇವೇಗೌಡರು. ಧ್ವನಿ ಇಲ್ಲದ ಸಮಾಜಕ್ಕೆ ಶಕ್ತಿಯಾಗಿ ಆಸರೇ ನೀಡಿದವರು ನಮ್ಮ ಕುಮಾರಸ್ವಾಮಿ. ನನಗೇ ಅಧಿಕಾರ ಬೇಕಿರೋದು ಕುಮಾರಸ್ವಾಮಿ ಸಿಎಂ ಮಾಡಲು ಮತ್ತು ಕೊರಟಗೆರೆ ಕ್ಷೇತ್ರದ ಜನರ ಸೇವೆಗಾಗಿ ಮಾತ್ರ. ನನ್ನ ಬಳಿ ಹಣವಿಲ್ಲ ಅಂತಾರೇ. ಆದರೇ ಜನರೇ ನನಗೇ ಹಣ ನೀಡಿ ಆರ್ಶಿವಾದ ಮಾಡಿದ್ದಾರೆ. ಜನರ ಋುಣವನ್ನ ತೀರಿಸಲು ನನಗೆ ನಿಮ್ಮೇಲ್ಲರ ಸಹಕಾರ ಬೇಕಿದೆ ಎಂದು ಮನವಿ ಮಾಡಿದರು.

ಸಮಾವೇಶದಲ್ಲಿ ಹಿಂದುಳಿದ ವರ್ಗದ ರಾಜ್ಯ ಕಾರ್ಯಧ್ಯಕ್ಷ ಪಾತಯ್ಯ, ಜೆಡಿಎಸ್‌ ಮಹಿಳಾ ಜಿಲ್ಲಾಧ್ಯಕ್ಷೆ ಕುಸುಮಾ, ಕೊರಟಗೆರೆ ಜೆಡಿಎಸ್‌ ಕಾರ್ಯಧ್ಯಕ್ಷ ನರಸಿಂಹರಾಜು, ಉಪಾಧ್ಯಕ್ಷ ಕಾಮರಾಜು, ವಕ್ತಾರ ಲಕ್ಷೀಶ್‌, ಕಾರ್ಯದರ್ಶಿ ಲಕ್ಷ್ಮಣ್‌, ಹಿಂದುಳಿದ ವರ್ಗದ ಅಧ್ಯಕ್ಷ ಸೋಮಶೇಖರ್‌, ಮುಖಂಡರಾದ ಮಂಜುನಾಥ, ವೀರಕ್ಯಾತರಾಯ, ಹನುಮಂತರಾಜು, ಪ್ರಕಾಶ್‌, ಸತೀಶ್‌, ದೀಪು, ಶ್ರೀನಿವಾಸ್‌, ದೇವರಾಜು, ಸಾಕಾರಾಜು, ನಾಗೇಂದ್ರ, ನಟರಾಜು, ಪ್ರಕಾಶ್‌, ರಮೇಶ್‌, ಕೌಶಿಕ್‌, ಅಮರ, ಸೇರಿದಂತೆ ಇತರರು ಇದ್ದರು.

ಸೋತರೂ ಜನಸೇವೆಯಲ್ಲಿರುವೆ

ಕೊರಟಗೆರೆ ಕ್ಷೇತ್ರದಲ್ಲಿ 25ವರ್ಷ ಸೋತ್ರು-ಗೆದ್ರು ಜನರ ಜೊತೆಗಿದ್ದು ಜನಸೇವೆ ಮಾಡಿದ್ದೀನಿ. ಮುಂದಿನ 30ದಿನ ಮಾತ್ರ ನೀವು ನನ್ನ ಜೊತೆ ಇರಿ, ನಾನು 5ವರ್ಷ ಮನೆಮಗನಾಗಿ ನಿಮ್ಮ ಸೇವೆ ಮಾಡ್ತೀನಿ. 2023ರ ವಿಧಾನಸಭಾ ಚುನಾವಣೆಗೆ ನಾನು ಏ.15ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ತಾವೇಲ್ಲರೂ ಆಗಮಿಸಿ ನನಗೇ ಬೆಂಬಲ ಮತ್ತು ಸಹಕಾರ ನೀಡಬೇಕಿದೆ.

ಪಿ.ಆರ್‌.ಸುಧಾಕರಲಾಲ್‌. ಮಾಜಿ ಶಾಸಕ. ಕೊರಟಗೆರೆ

click me!