ಬೆಂಗಳೂರು: ಗರ್ಭಿಣಿಗೆ ಲಾರಿ ಡಿಕ್ಕಿ, ಹೊಟ್ಟೆಯಿಂದ ಬಂದ ಮಗು ವಿಲವಿಲ ಒದ್ದಾಡಿ ಸಾವು..!

By Kannadaprabha News  |  First Published Aug 8, 2024, 9:04 AM IST

ಮಂಜುನಾಥ್ ಪತ್ನಿಯನ್ನು ಕರೆದುಕೊಂಡು ಶಿವಗಂಗೆಯ ಹರಕೆ ಗಣಪತಿ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿ ವಾಪಸ್ ಬರುತ್ತಿದ್ದಾಗ ವೇಗವಾಗಿ ಬಂದ ಟಿಪ್ಪ‌ಲಾರಿ ಡಿಕ್ಕಿ ಹೊಡೆಯಿತು. ಕೆಳಗೆ ಬಿದ್ದ ಸಿಂಚನಾ ಮೇಲೆ ಟಿಪ್ಪ‌ರ್ ಹರಿದ ಪರಿಣಾಮ ಹೊಟ್ಟೆಯಲ್ಲಿದ್ದ 8 ತಿಂಗಳು ಮಗು ಹೊರಗೆ ಬಂದಿದೆ.

ದಾಬಸ್‌ಪೇಟೆ(ಆ.08):  ನೆಲಮಂಗಲದ ಸಮೀಪ ರಾಷ್ಟ್ರೀಯ ಹೆದ್ದಾರಿ 48ರ ಎಡೇಹಳ್ಳಿ ಬಳಿ ಬುಧವಾರ ಬೆಳಗ್ಗೆ ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. 

ಹೊಟ್ಟೆಯಲ್ಲಿದ್ದ 8 ತಿಂಗಳ ಭ್ರೂಣ ಹೊರ ಬಂದು, ವಿಲ ವಿಲ ಒದ್ದಾಡಿ ಸಾವನ್ನಪ್ಪಿದೆ. ತೋಟನಹಳ್ಳಿ ಗ್ರಾಮದ ಸಿಂಚನಾ (30) ಮೃತರು. ಸ್ಕೂಟರ್ ಚಾಲನೆ ಮಾಡುತ್ತಿದ್ದ ಸಿಂಚನಾ ಪತಿ ಮಂಜುನಾಥ್ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. 

Tap to resize

Latest Videos

ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಅಪಘಾತ: ಬಾಲ್ಯದಿಂದಲೂ ಜೊತೆಯಾಗಿದ್ದ ಸ್ನೇಹಿತರು ಸಾವಿನಲ್ಲೂ ಒಂದಾದರು!

click me!