ಶಾಸಕ ಕೆ. ಮಹದೇವ್ ಮತ್ತು ಅವರ ಪುತ್ರ ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಭ್ರಷ್ಟಾಚಾರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ ಎಂದು ಮಾಜಿ ಶಾಸಕ ಕೆ. ವೆಂಕಟೇಶ್ ವ್ಯಂಗ್ಯವಾಡಿದರು.
ಬೆಟ್ಟದಪುರ : ಶಾಸಕ ಕೆ. ಮಹದೇವ್ ಮತ್ತು ಅವರ ಪುತ್ರ ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಭ್ರಷ್ಟಾಚಾರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ ಎಂದು ಮಾಜಿ ಶಾಸಕ ಕೆ. ವೆಂಕಟೇಶ್ ವ್ಯಂಗ್ಯವಾಡಿದರು.
ಪಿರಿಯಾಪಟ್ಟಣ ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಆಯೋಜಿಸಿದ್ದ(Congress) ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ತಮಗೆ ಉಪಯೋಗವಾಗುವ ಕಾಮಗಾರಿ ಹುಡುಕಿ ತರುತ್ತಿದ್ದಾರೆ. ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅಧಿಕಾರಿಗಳು ಹತೋಟಿಯಲ್ಲಿ ಇರದ ಪರಿಸ್ಥಿತಿ ಎದುರಾಗಿದೆ ಎಂದರು.
undefined
ನಾನು ಶಾಸಕನಾಗಿದ್ದಾಗ (MLA) ಮುಂದಿನ ತಲೆಮಾರಿಗೆ ಉಪಯೋಗವಾಗುವ ಹಲವು ಕಾರ್ಯಗಳನ್ನು ಹುಡುಕಿ ತರುತ್ತಿದ್ದೆ. ಆದರೆ ಈಗ ಇಂದಿನ ಶಾಸಕರು ತಾಲೂಕಿನಲ್ಲಿ ಪಡಿತರ ಚೀಟಿಗೆ ಹಣ, ಅಕ್ರಮ ಸಕ್ರಮ ಮೂಲಕ ಜಮೀನು ಸಕ್ರಮಗೊಳಿಸಲು ಒಂದು ಎಕರೆಗೆ ಒಂದು ಲಕ್ಷ ರೂ ಉದ್ಯೋಗ ಖಾತರಿಗೆ ಪರ್ಸೆಂಟೇಜ್, ಜಿಪಂ ಕಾಮಗಾರಿಗೆ ಪರ್ಸೆಂಟೇಜನ್ನು ಅಧಿಕಾರಿಗಳ ಮೂಲಕ ವಸೂಲು ಮಾಡುತ್ತಿರುವುದು ಜನರಿಗೆ ಈಗಾಗಲೇ ಗೊತ್ತಾಗಿದೆ ಎಂದು ಆರೋಪಿಸಿದರು.
ಅಧಿಕಾರಿಗಳು, ಶಾಸಕರು ಮತ್ತು ಪಿ.ಎಂ. ಪ್ರಸನ್ನ ಅವರಿಗೆ ಹಾಲು ತುಪ್ಪ ಸವಿದಂತಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ತಾಲೂಕಿನಲ್ಲಿ ಒಂದಾಗುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಶಾಸಕ ಕೆ. ಮಹದೇವ ಅವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅವರನ್ನು ಹೊಗಳಿ ನನ್ನನ್ನು ಸೋಲಿಸುವ ಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಎಚ್ಚರದಿಂದ ಇದ್ದು, ಒಮ್ಮತದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಕಾನೂರು ಗೋವಿಂದೇಗೌಡ ಮಾತನಾಡಿ, ಯುವಕರನ್ನು ಕರೆಸಿ ಮಾಜಿ ಶಾಸಕ ಕೆ. ವೆಂಕಟೇಶ್ ವಿರುದ್ಧ ಏಕವಚನದಲ್ಲಿ ಮಾತನಾಡುತ್ತಿರುವುದು ಶಾಸಕರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ಸ್ವಾಮಿಗೌಡ ಮಾತನಾಡಿ, ಶಾಸಕ ಕೆ. ಮಹದೇವ ಹಾಗೂ ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಅವರು ಸುಳ್ಳನ್ನೆ ಮನೆ ದೇವರಾಗಿ ಮಾಡಿಕೊಂಡಿದ್ದಾರೆ ಎಂದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಚ್.ಡಿ. ಗಣೇಶ್ ಮಾತನಾಡಿ, ಬಿಜೆಪಿ ಅಭ್ಯರ್ಥಿಯಾಗಿ ಬರುತ್ತಿರುವವರು ಯಾವುದೇ ಕೆಲಸ ಮಾಡುವುದಿಲ್ಲ. ಅವರು ಕೇವಲ ಬಿಜೆಪಿಯಿಂದ ಅಭ್ಯರ್ಥಿಯಾಗಲು ಮಾತ್ರ ಬರುತ್ತಿದ್ದಾರೆ. ಅವರಿಗೆ ಕುರುಬರು ಮತ ನೀಡಬಾರದು ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯರಾದ ನಿತಿನ್ ವೆಂಕಟೇಶ್, ಹಿಟ್ನ ಹಬ್ಬಾಗಿಲು ಅನಿಲ್‌ಕುಮಾರ್, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ ರಹಮದ್‌ಜಾನ್ ಬಾಬು, ತೆಲುಗನಕುಪ್ಪೆ ನಾಗಣ್ಣ, ಜಿಪಂ ಮಾಜಿ ಸದಸ್ಯ ಕೆ.ಸಿ. ರಾಜಶೇಖರ್, ಬಿ.ಎಸ್. ರಾಮಚಂದ್ರ, ಗ್ರಾಮದ ಮುಖಂಡರಾದ ಸ್ವಾಮಿಗೌಡ, ನ್ಯಾಯವಾದಿ ಕೆ.ಪಿ. ಜೀವನ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಹರೀಶ್, ಗ್ರಾಪಂ ಮಾಜಿ ಅಧ್ಯಕ್ಷ ಶಿವಪ್ಪ, ರವಿಕುಮಾರ್, ಚಂದ್ರಹಾಸ, ಮುಖಂಡರಾದ ನಿವೃತ್ತ ಶಿಕ್ಷಕ ಸಣ್ಣಸ್ವಾಮಿಗೌಡ, ಶಾಲು ಕೊಪ್ಪಲು ಪುಟ್ಟರಾಜು ಹಾಗೂ ತಾಲೂಕಿನ ಜಿಪಂ, ತಾಪಂನ ಮಾಜಿ ಸದಸ್ಯರು, ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.
ಕಾಂಗ್ರೆಸ್ ಬಲಗೊಳಿಸಲು ತಂತ್ರ
ಕಾರವಾರ (ಡಿ.28) : ವಿವಿಧ ಕಾರಣಗಳಿಗೆ ಬಿಜೆಪಿ ಕಡೆ ವಾಲಿರುವ ಹಿಂದುಳಿದ ವರ್ಗಗಳ ಮತದಾರರನ್ನು ಸೆಳೆಯಲು ಹಾಗೂ ಅವರನ್ನು ರಾಜಕೀಯವಾಗಿ ಮುಂಚೂಣಿಗೆ ತರಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ ಎಂದು ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಶಿರಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಧ್ಯಮ ಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಕಾಂಗ್ರೆಸ್(Congress) ಪಕ್ಷದ ಶಕ್ತಿಯೇ ಹಿಂದುಳಿದ ವರ್ಗದ ಮತದಾರರಾಗಿದ್ದಾರೆ. ಆದರೆ, ಕೆಲವು ಪ್ರಮಾಣದಲ್ಲಿ ಕಾಲಕ್ರಮೇಣ ಅವರು ಬಿಜೆಪಿ(BJP) ಕಡೆ ವಾಲಿದ್ದಾರೆ. ಅಂತಹ ಮತದಾರರನ್ನು ಕಾಂಗ್ರೆಸ್ ತನ್ನತ್ತ ಸೆಳೆಯಲು ಕಾರ್ಯಕ್ರಮ ರೂಪಿಸಿದೆ. ಈಗಾಗಲೇ 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಹಿರಿಯರು, ಪಕ್ಷದ ಪದಾಧಿಕಾರಿಗಳ ಜತೆ ಚರ್ಚಿಸಿ ಸಂಘಟನಾತ್ಮಕ ನಿರ್ಣಯ ಕೈಗೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಮತದಾರರನ್ನು ಮುಂಚೂಣಿಗೆ ತರಲು ಕ್ರಮ ತೆಗೆದುಕೊಳ್ಳುವ ಜತೆ ಪದಾಧಿಕಾರಿ ಸ್ಥಾನ ನೀಡಲು ಚಿಂತನೆ ನಡೆದಿದೆ ಎಂದರು.
ಎಲ್ಲ ಜಿಲ್ಲೆಯಲ್ಲೂ ಕಾಂಗ್ರೆಸ್ ಒಬಿಸಿ ಸಮಾವೇಶ: ಮಧು ಬಂಗಾರಪ್ಪ
ಒಬಿಸಿ(OBC) ಪುನರ್ ರಚನೆ, ಪದಾಧಿಕಾರಿಗಳ ನೇಮಕ ಶೀಘ್ರದಲ್ಲೇ ಮಾಡಲಾಗುವುದು. ಇದರ ಜತೆ ಪ್ರತಿಯೊಂದು ಜಿಲ್ಲಾ ಮಟ್ಟದಲ್ಲಿ ಒಬಿಸಿ ಸಮಾವೇಶ ಸಂಘಟಿಸಲು ತೀರ್ಮಾನಿಸಲಾಗಿದೆ. ಜ.15ರಿಂದ ಫೆ.28ರೊಳಗೆ ಆ ಸಮಾವೇಶ ಪೂರ್ಣಗೊಂಡ ನಂತರ ರಾಜ್ಯ ಸಮಾವೇಶ ಮಾಡಲಾಗುವುದು ಎಂದರು.