ನಂಜನಗೂಡಿನ ಕಬಿನಿ ನಿರಾವರಿ ಇಲಾಖೆ ಅಧಿಕಾರಿಗಳು 3ಕ್ಕೂ ಹೆಚ್ಚಿನ ಕಾಮಗಾರಿಯನ್ನು ಒಟ್ಟಿಗೆ ಸೇರಿಸಿ 3 ಕೋಟಿಗಿಂತ ಹೆಚ್ಚಿನ ಪ್ಯಾಕೇಜ್ ಟೆಂಡರ್ ಕರೆಯುವ ಮೂಲಕ ಎಸ್ಸಿ, ಎಸ್ಟಿವರ್ಗದ ಗುತ್ತಿಗೆದಾರರನ್ನು ಕಾಮಗಾರಿಗಳಿಂದ ದೂರವಿಟ್ಟು ವಂಚಿಸುತ್ತಿದ್ದಾರೆ. ಕೂಡಲೇ ಪ್ಯಾಕೇಜ್ ಟೆಂಡರ್ ರದ್ದುಪಡಿಸುವಂತೆ ಆಗ್ರಹಿಸಿ ಎಸ್ಸಿ, ಎಸ್ಟಿಗುತ್ತಿಗೆದಾರರ ಸಂಘದವರು ಪ್ರತಿಭಟಿಸಿದರು.
ನಂಜನಗೂಡು (ಡೊ. 29): ನಂಜನಗೂಡಿನ ಕಬಿನಿ ನಿರಾವರಿ ಇಲಾಖೆ ಅಧಿಕಾರಿಗಳು 3ಕ್ಕೂ ಹೆಚ್ಚಿನ ಕಾಮಗಾರಿಯನ್ನು ಒಟ್ಟಿಗೆ ಸೇರಿಸಿ 3 ಕೋಟಿಗಿಂತ ಹೆಚ್ಚಿನ ಪ್ಯಾಕೇಜ್ ಟೆಂಡರ್ ಕರೆಯುವ ಮೂಲಕ ಎಸ್ಸಿ, ಎಸ್ಟಿವರ್ಗದ ಗುತ್ತಿಗೆದಾರರನ್ನು ಕಾಮಗಾರಿಗಳಿಂದ ದೂರವಿಟ್ಟು ವಂಚಿಸುತ್ತಿದ್ದಾರೆ. ಕೂಡಲೇ ಪ್ಯಾಕೇಜ್ ಟೆಂಡರ್ ರದ್ದುಪಡಿಸುವಂತೆ ಆಗ್ರಹಿಸಿ ಎಸ್ಸಿ, ಎಸ್ಟಿಗುತ್ತಿಗೆದಾರರ ಸಂಘದವರು ಪ್ರತಿಭಟಿಸಿದರು.
ನಗರದ ಕಬಿನಿ ಕಚೇರಿಯ ಮುಂಭಾಗ ಜಮಾವಣೆಗೊಂಡ ಕಾರ್ಯಕರ್ತರು, ರಾಜ್ಯ (Karnataka Govt) ಸರ್ಕಾರ ಮತ್ತು ನೀರಾವರಿ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
undefined
ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಉಪ್ಪಿನಹಳ್ಳಿ ಶಿವಣ್ಣ ಮಾತನಾಡಿ, ಬಡ ಎಸ್ಸಿ, ಎಸ್ಟಿವರ್ಗದ (ST) ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲಾತಿ ಜಾರಿಗೆ ತಂದರು. ಪ್ರಸ್ತುತ 50 ಲಕ್ಷವರೆಗಿನ ಕಾಮಗಾರಿಗೆ ಎಸ್ಸಿ, ಎಸ್ಟಿವರ್ಗದ ಗುತ್ತಿಗೆದಾರರು ಮೀಸಲು ವ್ಯವಸ್ಥೆಯ ಅನುಕೂಲ ಪಡೆಯುವ ಅವಕಾಶವಿದೆ. ನಂಜನಗೂಡಿನ ನೀರಾವರಿ ಇಲಾಖೆ ಅಧಿಕಾರಿಗಳು ಎಸ್ಸಿ, ಎಸ್ಟಿವರ್ಗದ ಗುತ್ತಿಗೆದಾರರನ್ನು ಟೆಂಡರ್ ಪ್ರಕ್ರಿಯೆಯಿಂದ ಹೊರಗಿಟ್ಟು ಕೆಲಸ ನೀಡದೆ ವಂಚಿಸುವ ಹುನ್ನಾರದಿಂದ ಸುಮಾರು 3 ರಿಂದ 4 ಕಾಮಗಾರಿಗಳನ್ನು ಒಟ್ಟಿಗೆ ಸೇರಿಸಿ . 3.35 ಕೋಟಿ, . 4.23 ಕೋಟಿ, . 82.35 ಲಕ್ಷಗಳಿಗೆ 3 ವಿವಿಧ ಪ್ಯಾಕೇಜ್ ಟೆಂಡರ್ ಕರೆಯಲಾಗಿದೆ ಎಂದು ಆರೋಪಿಸಿದರು.
ಆದ್ದರಿಂದ ಶಾಸಕರು ಮತ್ತು ಅಧಿಕಾರಿಗಳು ಈ ಬೃಹತ್ ಮೊತ್ತದ ಟೆಂಡರ್‌ಗಳನ್ನು ರದ್ದುಪಡಿಸಿ . 50 ಲಕ್ಷಗಳಿಗೆ ನಿಗದಿಪಡಿಸಿ ಟೆಂಡರ್ ಕರೆಯುವ ಮೂಲಕ ಬಡ ವರ್ಗದ ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿದ್ದಲಿಂಗು ಮಾತನಾಡಿ, 50 ಲಕ್ಷಗಳಿಗೆ ಸೀಮಿತವಾಗಿರುವ ಮೀಸಲು ವ್ಯವಸ್ಥೆಯ ಕಾಮಗಾರಿಯನ್ನು . 1 ಕೋಟಿಗೆ ಹೆಚ್ಚಿಸಿ ಅನುಕೂಲ ಮಾಡಬೇಕೆಂದು ಗುತ್ತಿಗೆದಾರರ ಸಂಘ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಕೆಲವೆಡೆ ಬೃಹತ್ ಮೊತ್ತದ ಟೆಂಡರ್ ರದ್ದುಪಡಿಸುವಂತೆ ಕೋರಿ ಉಚ್ಛ ನ್ಯಾಯಾಲಯದ ಮೋರೆ ಹೋಗಿದ್ದೇವೆ. ನ್ಯಾಯಾಲಯ ಕಾಮಗಾರಿಗಳಿಗೆ ತಡೆಯಾಜ್ಞೆ ನೀಡಿದೆ. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಬೃಹತ್ ಮೊತ್ತದ ಕಾಮಗಾರಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಉದ್ಯಮಿಗಳ ಸಾಲ ಮನ್ನಾ ಮಾಡುವ ಸರಕಾರ ದಶಕದ ಸಾಲ ಮನ್ನಾ ಮಾಡಿ, ಬಳ್ಳಾರಿ ರೈತರ ಅಳಲು
ಈ ಸಂಬಂಧ ನಂಜನಗೂಡು ಕಬಿನಿ ಇಇ ಬಿ.ಎಂ. ರಾಜು ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಗುತ್ತಿಗೆದಾರರ ಸಂಘದ ಶ್ರೀಕಂಠ, ಬಸವರಾಜು, ರಾಜೇಶ್, ಶಂಕರನಾಯಕ, ಕಾಳಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್, ಶ್ರೀಕಂಠನಾಯಕ, ಮುಖಂಡರಾದ ಹುಂಡಿ ನಾಗರಾಜು, ಸೌಭಾಗ್ಯ, ಸಿದ್ದರಾಜು, ಆರ್. ಮಹದೇವ, ಶ್ರೀನಿವಾಸ್, ರಾಜೇಶ್, ಲೋಕೇಶ್ ಮೊದಲಾದವರು ಇದ್ದರು.
ವೈಜ್ಞಾನಿಕ ಬೆಲೆ ನೀಡಲು ಆಗ್ರಹ
ಮಂಡ್ಯ (ಡಿ.28): ರಾಜ್ಯದಲ್ಲಿ ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದೆ. ಈಗಾಗಲೇ ರಸ್ತೆಯನ್ನು ಅಡ್ಡಗಟ್ಟುವುದು, ಉರುಳು ಸೇವೆ, ಅರೆಬೆತ್ತಲೆ ಮೆರವಣಿಗೆಯನ್ನು ಮಾಡಿದ್ದ ರೈತರು ಮಂಡ್ಯ ನಗರವನ್ನು ಬಂದ್ ಮಾಡುವಲ್ಲಿಯೂ ಯಶಸ್ವಿಯಾಗಿದ್ದರು. ಈಗ ಸಹನೆ ಕಟ್ಟೆಯೊಡೆದು ಒಂದು ಹೆಜ್ಜೆ ಮುಂದೆ ಹೋಗಿರುವ ರೈತರು ತಮ್ಮ ರಕ್ತವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರತಿಮೆ ಮೇಲೆ ಅಭಿಷೇಕ ಮಾಡಿದ್ದಾರೆ.
ಕಬ್ಬು ಬೆಳೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಬೆಂಬಲ ಬೆಲೆ ತೀವ್ರ ಕಡಿಮೆಯಾಗಿದೆ. ಕಬ್ಬಿನ ಬೆಲೆಯನ್ನು ಹೆಚ್ಚಳ ಮಾಡಬೇಕು ಎನ್ನುವುದಕ್ಕಿಂತ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಬೇಕು ಎಂದು ರೈತರು ಆಘ್ರಹಿಸುತ್ತಿದ್ದಾರೆ. ಇನ್ನು ಅಧಿವೇಶನ ಆರಂಭವಾದಂದಿನಿಂದ ಬೆಳಗಾವಿ, ಬೆಂಗಳೂರು, ಬಾಗಲಕೋಟೆ, ರಾಯಚೂರು, ಮೈಸೂರು ಮತ್ತು ಮಂಡ್ಯ ಸೇರಿದಂತೆ ವಿವಿಧೆಡೆ ರೈತರ ಪ್ರತಿಭಟನೆ ಜೋರಾಗಿ ನಡೆದಿದೆ. ಆದರೆ, ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಮಂಡ್ಯದಲ್ಲಿ ರೈತರು ಮಾಡುತ್ತಿರುವ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಹೀಗಾಗಿ ವಿಚಿತ್ರ ಪ್ರತಿಭಟನೆ ಮಾಡಿದ್ದಾರೆ.
Assembly Election 2023: ಮಂಡ್ಯ ಗೆಲುವಿಗೆ 'ಪಂಚರತ್ನ' ಮಂತ್ರ: 2023ರಲ್ಲಿ ಜೆಡಿಎಸ್ ಭದ್ರಕೋಟೆ ಏನಾಗಲಿದೆ?
ಧರಣಿ 50 ದಿನ ತಲುಪಿದ ಬೆನ್ನಲ್ಲೇ ರಕ್ತಾಭಿಷೇಕ: ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವಂತೆ ರೈತರು ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಮಾಡುತ್ತಿರುವ ಅಹೋರಾತ್ರಿ ಪ್ರತಿಭಟನಾ ಧರಣಿ ಇಂದಿಗೆ 50 ದಿನ ತಲುಪಿದೆ. ಇಷ್ಟಾದರೂ ದು ರೈತರ ಸಮಸ್ಯೆಗಳನ್ನು ಆಲಿಸದೆ, ಬೇಡಿಕೆಯನ್ನ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರದ ನಡೆ ಖಂಡಿಸಿ ಇಂದು ವಿಭಿನ್ನ ಪ್ರತಿಭಟನೆ ಮಾಡಲಾಗುತ್ತಿದೆ ಎಂದು 30ಕ್ಕೂ ಹೆಚ್ಚು ರೈತರು ತಮ್ಮ ರಕ್ತವನ್ನು ಸಿರಿಂಜ್‌ಗೆ (ಇಂಜೆಕ್ಷನ್ ಟ್ಯೂಬ್) ತುಂಬಿಸಿಕೊಂಡು ಸಂಗ್ರಹಣೆ ಮಾಡಿಕೊಂಡಿದ್ದಾರೆ. ನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರ ಪ್ರತಿಮೆಯೊಂದನ್ನು ತರಿಸಿ ಅದರ ಮೇಲೆ ರಕ್ತವನ್ನು ಸುರಿದು ಅಭಿಷೇಕ ಮಾಡಿದ್ದಾರೆ.
ರೈತರನ್ನು ವಶಕ್ಕೆ ಪಡೆದ ಪೊಲೀಸರು: ವಿಶ್ವೇಶ್ವರಯಯ ಪ್ರತಿಮೆ ಮುಂಭಾಗ ರೈತರು ಸಿಎಂ ಪ್ರತಿಮೆಗೆ ರಕ್ತಾಭಿಷೇಕ ಮಾಡುತ್ತಿದ್ದಂತೆಯೇ, ಅಲ್ಲಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ, ರಕ್ತದ ಅಭಿಷೇಕ ಮಾಡಿದ ಪ್ರತಿಮೆಯನ್ನೂ ವಶಕ್ಕೆ ಪಡೆದಿದ್ದು, ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ.