ತುಂಗಭದ್ರಾ ಬೋರ್ಡಿಂದ ಅನ್ಯಾಯವಾದ್ರೂ ಬಿಜೆಪಿ ಸುಮ್ಮನಿರುವುದ್ಯಾಕೆ: ತಂಗಡಗಿ ವಾಗ್ದಾಳಿ

Published : Aug 13, 2024, 06:00 AM IST
 ತುಂಗಭದ್ರಾ ಬೋರ್ಡಿಂದ ಅನ್ಯಾಯವಾದ್ರೂ ಬಿಜೆಪಿ ಸುಮ್ಮನಿರುವುದ್ಯಾಕೆ: ತಂಗಡಗಿ ವಾಗ್ದಾಳಿ

ಸಾರಾಂಶ

ತುಂಗಭದ್ರಾ ಬೋರ್ಡ್ ಯಾರ ವ್ಯಾಪ್ತಿಗೆ ಬರುತ್ತದೆ. ಇದರ ನಿರ್ವಹಣೆ ಹೊಣೆಯನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವುದು ತಮಗೆ ಗೊತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು. ತುಂಗಭದ್ರಾ ಬೋರ್ಡ್‌ನಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಲು ನೀವೆಷ್ಟು ಪ್ರಯತ್ನ ಮಾಡಿದ್ದೀರಿ, ಎಷ್ಟು ಬಾರಿ ಕೇಂದ್ರಕ್ಕೆ ಪತ್ರ ಬರೆದಿದ್ದೀರಿ, ನಿಮ್ಮದೇ ಸರ್ಕಾರ ಇದೆ, ಅದನ್ನು ಯಾಕೆ ಸರಿ ಮಾಡುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ ಸಚಿವ ಶಿವರಾಜ ತಂಗಡಗಿ   

ಕೊಪ್ಪಳ(ಆ.13):  ಬಿಜೆಪಿಯವರು ಕಿತ್ತು ಗುಡ್ಡೆ ಹಾಕಿದ್ದು ಅಷ್ಟರಲ್ಲಿಯೇ ಇದೆ. ಅವರು ಅಧಿಕಾರವಧಿಯಲ್ಲಿ ಏನು ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಈಗ ಕೇಂದ್ರದ ಅಧೀನದಲ್ಲಿಯೇ ಇರುವ ತುಂಗಭದ್ರಾ ಬೋರ್ಡ್‌ನಿಂದಲೇ ಅನ್ಯಾಯವಾಗುತ್ತಿದ್ದರೂ ಯಾಕೆ ಸುಮ್ಮನಿದ್ದಾರೆ? ಎಂದು ಸಚಿವ ಶಿವರಾಜ ತಂಗಡಗಿ ಕಿಡಿಕಾರಿದರು.

ತುಂಗಭದ್ರಾ ಜಲಾಶಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರಾ ಬೋರ್ಡ್ ಯಾರ ವ್ಯಾಪ್ತಿಗೆ ಬರುತ್ತದೆ. ಇದರ ನಿರ್ವಹಣೆ ಹೊಣೆಯನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವುದು ತಮಗೆ ಗೊತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು. ತುಂಗಭದ್ರಾ ಬೋರ್ಡ್‌ನಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಲು ನೀವೆಷ್ಟು ಪ್ರಯತ್ನ ಮಾಡಿದ್ದೀರಿ, ಎಷ್ಟು ಬಾರಿ ಕೇಂದ್ರಕ್ಕೆ ಪತ್ರ ಬರೆದಿದ್ದೀರಿ, ನಿಮ್ಮದೇ ಸರ್ಕಾರ ಇದೆ, ಅದನ್ನು ಯಾಕೆ ಸರಿ ಮಾಡುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.

ಡ್ಯಾಂ ಗೇಟ್‌ ಒಡೆದ ಸುದ್ದಿ ಕೇಳಿ ಎದೆ ಧಸಕ್‌ ಅಂತು, ಎದ್ನೊ ಬಿದ್ನೋ ಅಂತಾ ಜಲಾಶಯದ ಕಡೆ ಓಡಿದೆ: ಸಚಿವ ಶಿವರಾಜ ತಂಗಡಗಿ

ಈಗ ನಾನು ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ, ಈ ಕ್ರಸ್ಟ್ ಗೇಟ್ ದುರಸ್ತಿಯಾಗಿ, ರೈತರ ಒಂದು ಬೆಳೆಗಾದರೂ ನೀರು ಕೊಡುವಂತಾಗಬೇಕಾಗಿದೆ. ಅದಾದ ಮೇಲೆ ಈ ಬಿಜೆಪಿಯವರ ಕುರಿತು ಮಾತನಾಡುತ್ತೇನೆ, ಬೋರ್ಡ್ ಬಗ್ಗೆ ಮಾತನಾಡುತ್ತೇನೆ ಎಂದರು.

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು