ಬೈಕ್‌, ಕಾರ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್‌

Published : Jul 20, 2019, 11:59 AM IST
ಬೈಕ್‌, ಕಾರ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್‌

ಸಾರಾಂಶ

ಪಟ್ಟಣದ ವಾಟರ್‌ ಟ್ಯಾಂಕ್‌ ಸರ್ಕಲ್‌ನಿಂದ ಪಟ್ಟಣ ಪಂಚಾಯಿತಿವರೆಗೆ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ಹಾಗೂ 4 ಚಕ್ರಗಳ ಪಾರ್ಕಿಂಗ್‌ ವ್ಯವಸ್ಥೆಯನ್ನು ಪ್ರತ್ಯೇಕ ಮಾಡಲಾಗಿದ್ದು, ವಾಹನಗಳ ಮಾಲೀಕರಿಗೆ ತುಸು ನೆಮ್ಮದಿ ಸಿಕ್ಕಿದೆ. ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯವಕ್ತವಾಗಿದೆ.

ಚಿಕ್ಕಮಗಳೂರು(ಜು.20): ಪಟ್ಟಣದ ವಾಟರ್‌ ಟ್ಯಾಂಕ್‌ ಸರ್ಕಲ್‌ನಿಂದ ಪಟ್ಟಣ ಪಂಚಾಯಿತಿವರೆಗೆ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ಹಾಗೂ 4 ಚಕ್ರಗಳ ಪಾರ್ಕಿಂಗ್‌ ವ್ಯವಸ್ಥೆಯನ್ನು ಪ್ರತ್ಯೇಕ ಮಾಡಲಾಗಿದ್ದು, ವಾಹನಗಳ ಮಾಲೀಕರಿಗೆ ತುಸು ನೆಮ್ಮದಿ ಸಿಕ್ಕಿದೆ. ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯವಕ್ತವಾಗಿದೆ.

ಪಾರ್ಕಿಂಗ್ ಸಮಸ್ಯೆ ಸವಾಲಾಗಿತ್ತು:

ಹಲವು ವರ್ಷಗಳಿಂದಲೂ ಈ ರಸ್ತೆಯಲ್ಲಿ ಪಾರ್ಕಿಂಗ್‌ ಮಾಡಲು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು. ಕಾರು, ಲಾರಿ, ಜೀಪು ಸೇರಿದಂತೆ 4 ಚಕ್ರಗಳು ವಾಹನ, ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನವಾದ ಬೈಕ್‌ಗಳು ಒಟ್ಟಾಗಿ ಪಾರ್ಕಿಂಗ್‌ ಮಾಡುತ್ತಿದ್ದರು. ಬೈಕ್‌ ನಿಲ್ಲಿಸಿದ ಹಿಂಬದಿಯಲ್ಲಿ ಕಾರು ನಿಲ್ಲಿಸಲಾಗುತ್ತಿತ್ತು. ಕಾರು, ಜೀಪಿನ ಹಿಂಭಾಗದಲ್ಲಿ 3-4 ಬೈಕ್‌ಗಳು ನಿಲ್ಲುತ್ತಿದ್ದವು. ಇದರಿಂದಾಗ ವಾಹನ ತೆಗೆಯಲು ಹರಸಾಹಸ ಪಡಬೇಕಾಗುತ್ತಿತ್ತು.

ಕಾರು ಕ್ಲೀನ್ ಇಲ್ಲದಿದ್ದರೆ ಬೀಳುತ್ತೆ 9 ಸಾವಿರ ರೂ ದಂಡ!

ಈ ಮಧ್ಯೆ ಮೋಟಾರ್‌ ಬೈಕ್‌ ನಿಲ್ಲಿಸುವಾಗ ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದರು. ಕಾರು, ಜೀಪುಗಳಿಗೆ ಜಾಗ ಸಾಕಾಗುತ್ತಿರಲಿಲ್ಲ. ಇದರಿಂದಾಗ ವಾಹನ ಸವಾರರು ಬೇಸತ್ತು ಬೈಕ್‌ ಹಾಗೂ ನಾಲ್ಕು ಚಕ್ರಗಳ ವಾಹನಗಳ ಪಾರ್ಕಿಂಗ್‌ ಪ್ರತ್ಯೇಕ ಮಾಡಬೇಕು ಎಂದು ನಾಗರಿಕರು, ವಾಹನ ಚಾಲಕರು ಪೊಲೀಸ್‌ ಇಲಾಖೆಯನ್ನು ಒತ್ತಾಯಿಸಿದ್ದರು. ಈಗ ಪೊಲೀಸರು ಮಾಡಿರುವ ಪಾರ್ಕಿಂಗ್‌ ವ್ಯವಸ್ಥೆ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉತ್ತಮ ಪ್ರತಿಕ್ರಿಯೆ:

ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ದ್ವಿಚಕ್ರಗಳಿಗೆ ರಸ್ತೆಯ ಒಂದು ಬದಿ ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೆ ರಸ್ತೆಯ ಮತ್ತೊಂದು ಬದಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್‌ ಠಾಣಾಧಿಕಾರಿ ರವಿ ನಿಡಘಟ್ಟ ತಿಳಿಸಿದ್ದಾರೆ. ಮಂಗಳವಾರ, ಗುರುವಾರ, ಶನಿವಾರ 4 ಚಕ್ರಗಳ ವಾಹನಗಳು ಆಸ್ಪತ್ರೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಇರುವ ರಸ್ತೆ ಬದಿ ನಿಲ್ಲಿಸಬೇಕು. ಇದೇ ವಾರಗಳಲ್ಲಿ ಸಂತೆ ಮಾರುಕಟ್ಟೆಯ ಬದಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಬೇಕು. ಉಳಿದ ಸೋಮವಾರ, ಬುಧವಾರ, ಶುಕ್ರವಾರ ಆಸ್ಪತ್ರೆಯ ಕಡೆ ದ್ವಿಚಕ್ರ ವಾಹನ ಹಾಗೂ ಸಂತೆ ಮಾರುಕಟ್ಟೆಯ ಬದಿ ನಾಲ್ಕು ಚಕ್ರಗಳ ವಾಹನ ನಿಲ್ಲಿಸಬೇಕು. 4 ದಿನಗಳಿಂದ ಈ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಸಾರ್ವಜನಿಕರು ತಮ್ಮ ವಾಹನವನ್ನು ಸಾಲಾಗಿ ನಿಲ್ಲಿಸಬೇಕು. ಒಂದರ ಹಿಂದೆ ಮತ್ತೊಂದು ವಾಹನ ನಿಲ್ಲಿಸಬಾರದು. ಸಾಧ್ಯವಾದಷ್ಟುವಾಹನವನ್ನು ನೇರವಾಗಿ ನಿಲ್ಲಿಸಬೇಕು. ಇದರಿಂದ ಜಾಗ ಉಳಿಯಲಿದೆ. ಈ ಪಾರ್ಕಿಂಗ್‌ ವ್ಯವಸ್ಥೆಗೆ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ ಎಂದರು.

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!