'ಹಿರಿಯ ನಾಗರಿಕರನ್ನು ಗೌರವದಿಂದ ಕಾಣಿ' ಡಿಸಿಎಂ ಸಲಹೆ

Published : Feb 11, 2021, 10:37 PM IST
'ಹಿರಿಯ ನಾಗರಿಕರನ್ನು ಗೌರವದಿಂದ ಕಾಣಿ' ಡಿಸಿಎಂ ಸಲಹೆ

ಸಾರಾಂಶ

ಹಿರಿಯ ನಾಗರಿಕರನ್ನು ಗೌರವದಿಂದ ಕಾಣಿ/ ಡಿಸಿಎಂ ಅಶ್ವಥ್ ನಾರಾಯಣ  ಸಲಹೆ/ ಬದಲಾದ ಸ್ಥಿತಿಯಲ್ಲಿ ಹಿರಿಯ ನಾಗರಿಕರ ಪರಿಸ್ಥಿತಿ ಸಂಕಷ್ಟಕ್ಕೆ ತಲುಪಿದೆ

ಬೆಂಗಳೂರು(ಫೆ. 11) ಹಿರಿಯ ನಾಗರಿಕರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ನಗರೀಕರಣದಿಂದ ಆದ್ಯತೆ ಗಳು ಬದಲಾಗಿರುವ ಹಿನ್ನಲೆಯಲ್ಲಿ ಇತ್ತೀಚಿಗೆ ಹಿರಿಯರಿಗೆ ಗೌರವ ಕೊಡುವುದು ಕಡಿಮೆ ಆಗ್ತಿದೆ ಎಂದು  ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ  ಅಭಿಪ್ರಾಯ ಪಟ್ಟಿದ್ದಾರೆ.

ನಾವು ಏನೇ ಕಾನೂನುಗಳು ತಂದರೂ ಸಹಾ ಜನರಲ್ಲಿ ಪ್ರಜ್ಞೆ ಮೂಡಿದಾಗಷ್ಟೇ ಬದಲಾವಣೆ ಸಾದ್ಯ. ಜನ್ಮ ಕೊಟ್ಟ  ತಂದೆ ತಾಯಿ ಸೇವೆ ಮಾಡುವುದು ನಮ್ಮ ಭಾಗ್ಯ. ಕಂದಾಯ ಇಲಾಖೆ ಈಗ ಮನೆ ಬಾಗಿಲಿಗೇ ಪಿಂಚಣಿ ನೀಡುವ ಸೌಲಭ್ಯ ನೀಡ್ತಿದೆ. ವೃದ್ದಾಶ್ರಮದ ಸಂಸ್ಕೃತಿ ನಮ್ಮಲ್ಲಿ ಕಡಿಮೆ ಆಗಬೇಕು ಎಂದರು.

ಕೇಂದ್ರ ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ ಸಿಕ್ಕಿದ್ದು ಏನು?

ಶಿಕ್ಷಣ ಅಂದ್ರೆ ಕೇವಲ ವಿದ್ಯಾಭ್ಯಾಸ ಮಾತ್ರವೇ ಅಲ್ಲ. ನಾವು ಹೇಗೆ ಜವಾಬ್ದಾರಿ ನಾಗರೀಕರಾಗಬೇಕು ಎಂದು ತಿಳಿಯುವುದೇ ಶಿಕ್ಷಣ. ವಿಶಿಷ್ಟ ಚೇತನರು ಸಹಾ ಸಮಾಜದಲ್ಲಿ ಬದುಕಲು ಕಷ್ಟ ಪಡುವ ಪರಿಸ್ಥಿತಿ ಇದೆ. ಪುಟ್ ಪಾತ್, ಬಸ್ ಎಲ್ಲಿ ಯೂ ಕೂಡಾ ವಿಶಿಷ್ಟ ಚೇತನರಿಗೆ ಅನುಕೂಲವಾಗುವಂತಹಾ ವ್ಯವಸ್ಥೆಗಳಿಲ್ಲ‌. ಯಾವುದೇ ಸಂಪನ್ಮೂಲ ಮೊದಲ ಆದ್ಯತೆಯಾಗಿ ವಿಕಲ ಚೇತನರಿಗೆ ಸಿಗುವಂತಾಗಬೇಕು. ನಮಗೆ ಸಿಕ್ಕಿರುವ ಅಧಿಕಾರಕ್ಕೆ ಬೆಲೆ ಸಿಗಬೇಕಾದ್ರೆ, ವಿಕಲ ಚೇತನರ, ಹಿರಿಯ ಚೇತನರ ಕಲ್ಯಾಣ ವಾಗಬೇಕು ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು ಎಂದು ಹೇಳಿದರು. 

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು