15 ಕೃಷಿ ಸಾಧಕರಿಗೆ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ 'ರೈತ ರತ್ನ' ಪುರಸ್ಕಾರ

By Suvarna News  |  First Published Feb 11, 2021, 3:47 PM IST

ಫೆ.12ರಂದು 15 ಮಂದಿ ರೈತ ಸಾಧಕರಿಗೆ ಪ್ರತಿಷ್ಟಿತ ರೈತ ರತ್ನ ಪ್ರಶಸ್ತಿ ಪ್ರದಾನ/ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಗದ ಗೌರವ ಪುರಸ್ಕಾರ/ ಸುಸ್ಥಿರ ಕೃಷಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಕೃಷಿ ತಂತ್ರಜ್ಞಾನ, ಬೆಳೆ ವಿಜ್ಞಾನಿ, ಬೆಳೆ ವೈದ್ಯ, ರೈತ ಮಹಿಳೆ ಸೇರಿದಂತೆ ವಿವಿಧ ವಿಭಾಗದಲ್ಲಿ ಪುರಸ್ಕಾರ


ಬೆಂಗಳೂರು(ಫೆ.  11 ಕನ್ನಡಪ್ರಭ ಮತ್ತು  ಏಷ್ಯಾನೆಟ್ ಸುವರ್ಣ ನ್ಯೂಸ್ ರೈತ ರತ್ನರನ್ನು ಸನ್ಮಾನಿಸಲಿದೆ.ರಾಷ್ಟ್ರಕ್ಕೆ ಸದಾ ಕೊಡುಗೆ ನೀಡಿಕೊಂಡು ಬಂದಿರುವ ಕೃಷಿ ಕ್ಷೇತ್ರದ ಸಾಧಕರನ್ನು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಗೌರವಿಸಲಿದೆ. 

ಪ್ರಸ್ತುತ ಪರಿಸ್ಥಿತಿಯಲ್ಲಿ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿರುವುದು ಕೃಷಿ ಕ್ಷೇತ್ರ. ಎಲ್ಲಿ ನೋಡಿದರೂ ಕೃಷಿ ಕ್ಷೇತ್ರದ ಕುರಿತು ನಕರಾತ್ಮಕ ಮಾತುಗಳೇ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಎದೆಗುಂದದೆ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸಮಾಜ ತಿರುಗಿನೋಡುವಂತೆ ಸಾಧನೆ ಮಾಡಿದ ರೈತರನ್ನು ಗೌರವಿಸುವ  ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಗದ ಪ್ರಯತ್ನವೇ ರೈತ ರತ್ನ ಪ್ರಶಸ್ತಿ. ಈ ಮೂಲಕ ರೈತ ಸಮೂಹಕ್ಕೆ ಗೌರವ ಸಲ್ಲಿಸುವುದು ಮತ್ತು ಸ್ಫೂರ್ತಿ ತುಂಬುವುದು ರೈತ ರತ್ನ ಪ್ರಶಸ್ತಿಯ ಉದ್ದೇಶ.

Tap to resize

Latest Videos

ಸಾಧಕರಿಗೆ ಸುವರ್ಣ ನ್ಯೂಸ್ ಗೌರವ.. ಅಭಿನಂದನೆ

ಈ ಪ್ರಶಸ್ತಿಗೆ ಸಾವಿರಾರು ಅರ್ಜಿಗಳು ಬಂದಿದ್ದು ಅದರಲ್ಲಿ ಸುಮಾರು 15 ಮಂದಿ ಸಾಧಕರನ್ನು ಕೃಷಿ ತಜ್ಞರು ಆಯ್ಕೆ ಮಾಡಿದ್ದಾರೆ. ಆಯ್ಕೆಯಾದ ಕೃಷಿ ಸಾಧಕರಿಗೆ ಫೆ.12ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿ ಜಂಟಿಯಾಗಿ ಸ್ಥಾಪಿಸಿರುವ ಪ್ರಶಸ್ತಿ ಇದಾಗಿದ್ದು. ಈ ಪ್ರಶಸ್ತಿಯ ತೀರ್ಪುಗಾರರಾಗಿ ಕೃಷಿ- ಪರಿಸರ ತಜ್ಞ ಹಾಗೂ ಪತ್ರಕರ್ತ ಶಿವಾನಂದ ಕಳವೆ , ಕೃಷಿ ತಜ್ಞ-ಉದ್ಯಮಿ ಕೃಷ್ಣ ಪ್ರಸಾದ ಹಾಗೂ ನಿರ್ದೇಶಕಿ, ನಿರ್ದೇಶಕಿ, ನಟಿ ಶ್ರುತಿ ನಾಯ್ಡು ಭಾಗವಹಿಸಿದ್ದರು.

ಸುಸ್ಥಿರ ಕೃಷಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಕೃಷಿ ತಂತ್ರಜ್ಞಾನ, ಬೆಳೆ ವಿಜ್ಞಾನಿ, ಬೆಳೆ ವೈದ್ಯ, ರೈತ ಮಹಿಳೆ, ಯುವ ರೈತ, ರೈತ ಉತ್ಪಾದನಾ ಸಂಸ್ಥೆ, ರೈತ ಸಂಶೋಧಕ, ಹೈನುಗಾರಿಕೆ, ಮೀನುಗಾರಿಕೆ, ತೋಟಗಾರಿಕೆ, ಕೋಳಿ ಸಾಕಣೆ ಹಾಗೂ ಕೃಷಿ ಉತ್ಪನ್ನ ಮಾರಾಟಗಾರ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

click me!