ಪಟ್ಟಣದಲ್ಲಿ ಮಹಾತ್ಮಾ ಗಾಂಧಿ ಜಯಂತಿಯಂದು ಮದ್ಯ ಮತ್ತು ಮಾಂಸ ಮಾರಾಟ| ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ| ಗಾಂಧಿ ಜಯಂತಿಯಂದು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ| ಅಲ್ಲದೇ ಮಾಂಸ ಮಾರಾಟವಕ್ಕೂ ನಿಷೇಧವಿದೆ| ಮಾಂಸದಂಗಡಿಗಳಲ್ಲೂ ಪ್ರಾಣಿ ವಧೆ ರಾಜಾರೋಷವಾಗಿಯೇ ನಡೆದಿತ್ತು| ಇದಕ್ಕೆ ಸಾರ್ವಜನಿಕರು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಲಾಯಿತು|
ಶಿಗ್ಗಾಂವಿ(ಅ.3): ವಿಶ್ವಕ್ಕೆ ಅಹಿಂಸಾ ಮಂತ್ರ ಬೋಧಿಸಿದ ಮಹಾತ್ಮಾ ಗಾಂಧಿ ಜಯಂತಿಯಂದು ಮದ್ಯ ಮತ್ತು ಮಾಂಸ ಮಾರಾಟ ನಿಷೇಧವಿದ್ದರೂ ಪಟ್ಟಣದಲ್ಲಿ ಇವೆರಡೂ ಬುಧವಾರ ಎಗ್ಗಿಲ್ಲದೇ ನಡೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗಾಂಧಿ ಜಯಂತಿಯಂದು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೇ ಮಾಂಸ ಮಾರಾಟವಕ್ಕೂ ನಿಷೇಧವಿದೆ. ಆದರೆ, ಪಟ್ಟಣದಲ್ಲಿ ಬುಧವಾರ ಬೆಳಗ್ಗೆ ಕೆಲ ಅಂಗಡಿಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿತ್ತು. ಮಾಂಸದಂಗಡಿಗಳಲ್ಲೂ ಪ್ರಾಣಿ ವಧೆ ರಾಜಾರೋಷವಾಗಿಯೇ ನಡೆದಿತ್ತು. ಬಳಿಕ ಸಾರ್ವಜನಿಕರು ಈ ಬಗ್ಗೆ ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಲಾಯಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಿಷೇಧವಿದ್ದರೂ ಮಾಂಸದ ಅಂಗಡಿಗಳನ್ನು ತೆರೆದು ಮಾರಾಟ ನಡೆಸಲಾಗಿದೆ. ಇದು ಗಾಂಧೀಜಿಯವರಿಗೆ ಮಾಡುತ್ತಿರುವ ಅಪಮಾನ ಎಂದು ಬಸವರಾಜ, ಅಶೋಕ ಕಾಳೆ, ಹನುಮಂತಪ್ಪ ಬಂಡಿವಡ್ಡರ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದರು.