ಸಾಗರದಲ್ಲಿ ಜುಲೈ 16ರ ವರೆಗೆ ಸ್ವಯಂ ಪ್ರೇರಿತ ಬಂದ್‌

By Kannadaprabha NewsFirst Published Jul 11, 2020, 9:13 AM IST
Highlights

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನದಲ್ಲಿ ದಿಢೀರ್ ಆಗಿ ಕೊರೋನಾ ಕೇಸ್‌ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ವಸಾಹತು ಪ್ರದೇಶ, ಆಟೋ ಕಾಂಪ್ಲೆಕ್ಸ್‌ ಮತ್ತು ಮಂಗಳಬೀಸು ಕೈಗಾರಿಕಾ ಪ್ರದೇಶ ಜುಲೈ 16ರ ವರೆಗೆ ಸ್ವಯಂಪ್ರೇರಿತವಾಗಿ ಬಂದ್‌ ಮಾಡಲು ತೀರ್ಮಾನಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಸಾಗರ(ಜು.11): ಕೊರೋನಾ ವೈರಸ್‌ ತಡೆಗಟ್ಟುವ ಸಂಬಂಧ ಪಟ್ಟಣದ ಕೈಗಾರಿಕಾ ವಸಾಹತು ಪ್ರದೇಶ, ಆಟೋ ಕಾಂಪ್ಲೆಕ್ಸ್‌ ಮತ್ತು ಮಂಗಳಬೀಸು ಕೈಗಾರಿಕಾ ಪ್ರದೇಶ ಜುಲೈ 16ರ ವರೆಗೆ ಸ್ವಯಂಪ್ರೇರಿತವಾಗಿ ಬಂದ್‌ ಮಾಡಲಾಗಿದೆ. 

ಹೊರರಾಜ್ಯ, ಹೊರಜಿಲ್ಲೆಯ ವಾಹನಗಳು ಆಟೋ ಕಾಂಪ್ಲೆಕ್ಸ್‌ಗೆ ದುರಸ್ತಿಗೆ ಬರುವ ಹಿನ್ನೆಲೆಯಲ್ಲಿ ಸಂಘದ ಸದಸ್ಯರ ಆರೋಗ್ಯ ದೃಷ್ಟಿಯಿಂದ ಲಾಕ್‌ಡೌನ್‌ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಶಿವಾನಂದ್‌ ತಿಳಿಸಿದ್ದಾರೆ.

ಬೆಳಗ್ಗೆ 10 ರಿಂದ ಸಂಜೆ 6 ವರೆಗೆ ವ್ಯಾಪಾರ ವಹಿವಾಟು: ಆದೇಶ

ಸಾಗರ: ಕೊರೋನಾ ಹಿನ್ನೆಲೆ ಪಟ್ಟಣದಲ್ಲಿ ಮುಂದಿನ ಆದೇಶದವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಯಲಿದೆ. ಸಂಜೆ 6 ರಿಂದ ಬೆಳಗ್ಗೆ 10 ಗಂಟೆವರೆಗೆ ಲಾಕ್‌ಡೌನ್‌ ಇರುತ್ತದೆ ಎಂದು ಉಪವಿಭಾಗಾ​ಧಿಕಾರಿ ಡಾ.ನಾಗರಾಜ್‌ ತಿಳಿಸಿದ್ದಾರೆ. 

ಶುಭ ತಂದ ಶುಕ್ರವಾರ: ಶಿವಮೊಗ್ಗದಲ್ಲಿ ಕೇವಲ 6 ಮಂದಿಗೆ ಸೋಂಕು

ಈ ಆದೇಶ ಶುಕ್ರವಾರದಿಂದ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದ್ದು ಸಾರ್ವಜನಿಕರು ಸುಳ್ಳುಸುದ್ದಿಗಳಿಗೆ ಕಿವಿಗೊಡಬಾರದು. ಲಾಕ್‌ಡೌನ್‌ ಸಂದರ್ಭದಲ್ಲಿ ಹೊರ ಜಿಲ್ಲೆಯ ವಾಹನಗಳನ್ನು ಹೊರತುಪಡಿಸಿ ಸ್ಥಳೀಯ ವಾಹನ ಹಾಗೂ ಜನಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಉಪವಿಭಾಗಾಧಿ​ಕಾರಿ ಡಾ.ನಾಗರಾಜ್‌ ತಿಳಿಸಿದ್ದಾರೆ.

click me!