ಸೆಲ್ಕೋದಿಂದ ಪತ್ರಕರ್ತೆಯರಿಗೆ ನೆರವು : ಸ್ವಯಂ ಉದ್ಯೋಗಕ್ಕೆ ಅವಕಾಶ

Kannadaprabha News   | Asianet News
Published : Feb 19, 2021, 12:26 PM IST
ಸೆಲ್ಕೋದಿಂದ ಪತ್ರಕರ್ತೆಯರಿಗೆ ನೆರವು : ಸ್ವಯಂ ಉದ್ಯೋಗಕ್ಕೆ ಅವಕಾಶ

ಸಾರಾಂಶ

ಸೌರ ವಿಜ್ಞಾನಿ ಡಾ. ಹರೀಶ್ ಹಂದೆ ನೇತೃತ್ವದ ಸೆಲ್ಕೊ ಇಂಡಿಯಾ ಸಂಸ್ಥೆಯು ಸೆಲ್ಕೊ ಕಾರ್ಯಚಟುವಟಿಕೆಗಳ ದಾಖಲೀಕರಣಕ್ಕಾಗಿ ಫೆಲೋಶಿಪ್ ನೀಡಿ ಹಾಗೂ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸಿ ಅವರ ಸಂಕಷ್ಟವನ್ನು ನಿವಾರಿಸುವ ಕೆಲಸ ಮಾಡಿದೆ.

ಬೆಂಗಳೂರು(ಫೆ.19 ):  ಕೊವಿಡ್‍ನಿಂದ ಆರ್ಥಿಕ ಸಂಕಷ್ಟಕ್ಕೀಡಾದ ಪತ್ರಕರ್ತೆಯರಿಗೆ ಸೌರ ವಿಜ್ಞಾನಿ ಡಾ. ಹರೀಶ್ ಹಂದೆ ನೇತೃತ್ವದ ಸೆಲ್ಕೊ ಇಂಡಿಯಾ ಸಂಸ್ಥೆಯು ಸೆಲ್ಕೊ ಕಾರ್ಯಚಟುವಟಿಕೆಗಳ ದಾಖಲೀಕರಣಕ್ಕಾಗಿ ಫೆಲೋಶಿಪ್ ನೀಡಿ ಹಾಗೂ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸಿ ಅವರ ಸಂಕಷ್ಟವನ್ನು ನಿವಾರಿಸುವ ಕೆಲಸ ಮಾಡಿದೆ.

ಕೊವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತೆಯರ ಸಂಘದ ಮನವಿಯ ಮೇರೆಗೆ ಸಂಘದ ಪದಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದ ನಂತರ ಸೆಲ್ಕೊ ಸೋನಾರ್ ಪ್ರೈವೇಟ್ ಲಿಮಿಟೆಡ್‍ನ ಸಿಇಒ ಮೋಹನ್ ಹೆಗಡೆ ಅವರು ಐವರು ಪತ್ರಕರ್ತೆಯರಿಗೆ ಫೆಲೋಶಿಪ್ ಮೂಲಕ ಕೆಲಸ ಒದಗಿಸಿದರು. 

ರೀಲ್‌ನಲ್ಲಿ ಜರ್ನಲಿಸ್ಟ್, ರಿಯಲ್‌ನಲ್ಲಿ ಎಂಜಿನಿಯರ್: ಕನ್ನಡತಿಯ ಪೂಜಾ ಇವ್ರೇ .

ಸೆಲ್ಕೊ ಸಂಸ್ಥೆಯ ಚಟುವಟಿಕೆಗಳ ದಾಖಲೀಕರಣ ಹಾಗೂ ಭಾಷಾಂತರ ಕೆಲಸಕ್ಕಾಗಿ ಮೂರು ತಿಂಗಳ ಕಾಲ ಈ ಫೆಲೋಶಿಪ್ ನೀಡಲಾಗಿತ್ತು. ಅಲ್ಲದೇ ಸ್ವಯಂ ಉದ್ಯೋಗ ಕೈಗೊಳ್ಳಲು ಆಶಿಸಿದ ಪತ್ರಕರ್ತೆಯೊಬ್ಬರಿಗೆ `ರೋಟಿ ಮೇಕರ್' ಯಂತ್ರವನ್ನು ಸೆಲ್ಕೊ ಉಚಿತವಾಗಿ ವಿತರಿಸಿತು. ಪತ್ರಕರ್ತೆಯರ ಸಂಘ ನೀಡಿದ ಆರ್ಥಿಕ ಸಹಾಯದಿಂದ ಪತ್ರಕರ್ತೆಯೊಬ್ಬರ ಮನೆಗೆ ಸೌರದೀಪಗಳನ್ನು ಸಹ ಅಳವಡಿಸಲಾಗಿದೆ.

ಪತ್ರಕರ್ತ ವಿಶ್ವೇಶ್ವರ ಭಟ್‌, ಸುಜಾತಾಗೆ ಕಸಾಪ ದತ್ತಿ ಪ್ರಶಸ್ತಿ ..

ತುರ್ತು ಸಂದರ್ಭದಲ್ಲಿ ಸೆಲ್ಕೊ ನೀಡಿದ ಈ ನೆರವಿಗಾಗಿ ಪತ್ರಕರ್ತೆಯರ ಸಂಘವು ಸಂಸ್ಥೆಗೂ ಹಾಗೂ ಸಂಘದ ಮನವಿಗೆ ತಕ್ಷಣವೇ ಸ್ಪಂದಿಸಿದ ಸಿಇಒ ಮೋಹನ್ ಹೆಗಡೆ ಅವರಿಗೂ ಧನ್ಯವಾದಗಳನ್ನು ತಿಳಿಸುತ್ತದೆ. ಮುಂಬರುವ ದಿನಗಳಲ್ಲೂ ಪತ್ರಕರ್ತೆಯರ ಸಂಘವು ಸೆಲ್ಕೊ ಜೊತೆ ಸಮಾಜಮುಖಿ ಕೆಲಸಗಳಿಗಾಗಿ ಸದಾ ಕೈಜೋಡಿಸಲಿದೆ ಎಂದು ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

PREV
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು