ಕೂಲಿಗಾಗಿ ನಿಮ್ಮ ಮತ ಕೇಳುತ್ತಿದ್ದೇನೆ: ಡಿ.ಕೆ.ಸುರೇಶ

By Kannadaprabha NewsFirst Published Apr 18, 2024, 1:25 PM IST
Highlights

ತಾಲೂಕಿನಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಕೂಲಿ ಕೇಳುತ್ತಿದ್ದಾನೆ ಎಂದು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಮನವಿ ಮಾಡಿದ್ದಾರೆ. ಕುಣಿಗಲ್ ಪಟ್ಟಣದ ಹುಚ್ಚ ಮಾಸ್ತಿಗೌಡ ವೃತ್ತದಲ್ಲಿ ಮತಯಾಚನೆ ಸಭೆಯಲ್ಲಿ ಮಾತನಾಡಿದರು.

ಕುಣಿಗಲ್: ತಾಲೂಕಿನಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಕೂಲಿ ಕೇಳುತ್ತಿದ್ದಾನೆ ಎಂದು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಮನವಿ ಮಾಡಿದ್ದಾರೆ. ಕುಣಿಗಲ್ ಪಟ್ಟಣದ ಹುಚ್ಚ ಮಾಸ್ತಿಗೌಡ ವೃತ್ತದಲ್ಲಿ ಮತಯಾಚನೆ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ಮಹಿಳೆಯರು ಯುವಕರು ಹಾಗೂ ರೈತರ ಕಷ್ಟಗಳಿಗೆ ನಾನು ಸ್ಪಂದಿಸಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಎಲ್ಲಾ ಕೂಡ ಮನೆಯಲ್ಲಿದ್ದರೆ ನಾನು ನಿಮ್ಮ ಜೊತೆ ಇದ್ದು ಕೆಲಸ ಮಾಡಿದ್ದೇನೆ. ಕುಣಿಗಲ್ ತಾಲೂಕಿನಲ್ಲಿ ವೈ ಕೆರಾಮಯ್ಯ ಹಾಗೂ ಹುಚ್ಚಮಾಸ್ತಿಗೌಡ ಅವರ ಕಂಡ ನೀರಾವರಿ ಕನಸನ್ನು ನಾವು ನನಸು ಮಾಡಿದ್ದೇವೆ. ಕುಣಿಗಲ್ ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆಯನ್ನು ತಂದಿದ್ದೇವೆ. ಆದರೂ ಕೂಡ ತುಮಕೂರು ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನಮ್ಮ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಾರೆ. ಆ ಎರಡು ಪಕ್ಷದ ಮುಖಂಡರಿಗೆ ನೀರಾವರಿ ಬಗ್ಗೆ ಚಿಂತೆ ಇಲ್ಲ. ಆದರೆ ನಾವು ನಿಮ್ಮ ಋಣ ತೀರಿಸಲು ಇಲ್ಲಿಗೆ ಬಂದಿದ್ದೇವೆ. ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ ಎಂದರು.

ಕುಣಿಗಲ್ ಶಾಸಕ ಡಾ.ರಂಗನಾಥ್ ಮಾತನಾಡಿ ಎಲ್ಲಾ ಸಂಸದರ ಪೈಕಿ ಅತಿ ಕ್ರಿಯಾಶೀಲ ಹಾಗೂ ಸರಳ ವ್ಯಕ್ತಿ ಆದಂತಹ ಸಂಸದರು ನಮಗೆ ಸಿಕ್ಕಿರುವುದು ಅದೃಷ್ಟ ಅವರನ್ನು ನಾವು ಗೆಲ್ಲಿಸಿಕೊಳ್ಳಬೇಕಿದೆ ಎಂದರು.

ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷ ಶಂಕರ್ ಕೆಪಿಸಿಸಿ ಸದಸ್ಯ ಬೇಗುರ್ ನಾರಾಯಣ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಇದ್ದರು.

ಬಿಜೆಪಿಗೆ ಸೋಲಿನ ಭೀತಿ

ರಾಮನಗರ (ಏ.17): ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಡಿ.ಕೆ.ಬ್ರದರ್ಸ್ ಆಪ್ತರ ಮೇಲೆ ಐಟಿ ದಾಳಿ ಮಾಡಲಾಗುತ್ತಿದೆ. ಇದನ್ನ ಬಿಟ್ಟು ಅವರು ಬೇರೆ ಏನೂ ಮಾಡೋಕಾಗಲ್ಲ. ನಮ್ಮನ್ನ ಏನಾದ್ರೂ ಮಾಡಿ ಕುಗ್ಗಿಸಬೇಕು ಅಂತ ಪ್ರಯತ್ನ ಮಾಡ್ತಿದ್ದಾರೆ. ಆ ಪ್ರಯತ್ನ ಯಶಸ್ವಿಯಾಗಲ್ಲ. ಸೋಲಿನ ಭೀತಿಯಿಂದ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪ ಮಾಡಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಅವರು, ಡಿ.ಕೆ.ಬ್ರದರ್ಸ್ ಆಪ್ತರ ಮೇಲೆ ಐಟಿ ದಾಳಿ ಮಾಡಲಾಗುತ್ತಿದೆ ಎಂಬ ವಿಚಾರವನ್ನು ಪ್ರಸ್ತಾಪ ಮಾಡಿದರು. ಬಿಜೆಪಿ-ಜೆಡಿಎಸ್ ನಾಯಕರಿಗೆ ಸೋಲಿನ ಭಯ ಕಾಡ್ತಿದೆ. ನಮ್ಮನ್ನ ಏನಾದ್ರೂ ಮಾಡಿ ಕುಗ್ಗಿಸಬೇಕು ಅಂತ ಪ್ರಯತ್ನ ಮಾಡ್ತಿದ್ದಾರೆ. ಆ ಪ್ರಯತ್ನ ಯಶಸ್ವಿಯಾಗಲ್ಲ. ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ. ಅವರಿಗೆ ಚುನಾವಣೆಯಲ್ಲಿ ಇರೋದು ಇದೊಂದೆ ಅಸ್ತ್ರ. ಐಟಿ, ಇಡಿ ಅಧಿಕಾರಿಗಳು ಬಿಜೆಪಿ ಪಕ್ಷ ಕೈಗೊಂಬೆಯಾಗಿ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು.

ಡಿಕೆಶಿ 9 ವರ್ಷದ ಹೆಣ್ಣು ಮಗು ಕಿಡ್ನಾಪ್ ಮಾಡಿ ಅವರಪ್ಪನ ಆಸ್ತಿ ಬರೆಸಿಕೊಂಡ ದಾಖಲೆಯಿದೆ; ಹೆಚ್.ಡಿ. ದೇವೇಗೌಡ ಆರೋಪ

ಬಿಜೆಪಿ ನಾಯಕರಿಗೆ ಬೆಲೆ ಏರಿಕೆ ಬಗ್ಗೆ ಮಾತನಾಡಿ ಅಂದ್ರೆ ಇವರಿಗೆ ಆಗಲ್ಲ. ಅವರು ಹಿಂದೆ ಕೊಟ್ಟ ಭರವಸೆ ಏನು, ಅದು ಇಡೇರಿದ್ಯಾ.? ಶ್ರೀರಾಮನವಮಿದಿನ ಸತ್ಯ ಹೇಳಬೇಕು. ಬಿಜೆಪಿಯವ್ರು ಮೊದಲು ಸತ್ಯ ಹೇಳಲಿ. ನಮ್ಮನ್ನ ಏನಾದ್ರೂ ಮಾಡಿ ಕುಗ್ಗಿಸಬೇಕು ಅಂತ ಪ್ರಯತ್ನ ಮಾಡ್ತಿದ್ದಾರೆ. ಆ ಪ್ರಯತ್ನ ಯಶಸ್ವಿಯಾಗಲ್ಲ.ಅವರು ಕೇವಲ ಕಾಂಗ್ರೆಸ್ ಪಕ್ಷವನ್ನ ಕಟ್ಟಿಹಾಕಲು ಬಂದಿದ್ದಾರೆ. ಇದನ್ನ ನಾವು ಹೊಸದಾಗಿ ನೋಡ್ತಿಲ್ಲ. ಎಲ್ಲಾ ಚುನಾವಣೆಗಳಲ್ಲೂ ಇದೇ ರೀತಿ ಮಾಡ್ತಿರೋದು ಗೊತ್ತಾಗಿದೆ ಎಂದು ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಹೇಳಿದರು.

ಕಾಂಗ್ರೆಸ್ ರಾಮನನ್ನ ಕಾಲ್ಪನಿಕ ಅಂದ್ರು ಎಂಬ ಅಶ್ವಥ್ ನಾರಾಯಣ್ ಹೇಳಿದ ಬಗ್ಗೆ ಮಾತನಾಡಿ, ಇದೇ ಜಿಲ್ಲೆಯಲ್ಲಿ ಇದ್ದ ಅಶ್ವಥ್ ನಾರಾಯಣ್ ಜಿಲ್ಲೆ ಕ್ಲೀನ್ ಮಾಡ್ತೀನಿ ಎಂದಿದ್ದರು ಅದನ್ನು ಮಾಡಿದ್ರಾ? ರಾಮದೇವರ ಬೆಟ್ಟದ ಅಭಿವೃದ್ಧಿಗೆ ಎಷ್ಟು ಹಣ ಇಟ್ಟಿದ್ರಿ.? ಆಕ್ಷನ್ ಫ್ಲಾನ್ ಏನ್ ಮಾಡಿದ್ರು, ಅರಣ್ಯ ಇಲಾಖೆ ಅನುಮತಿ ಪಡೆದಿದ್ದಾರಾ.? ಅನುಮತಿಗೆ ಅರ್ಜಿ ಹಾಕಿದ್ದಾರಾ.? ಇದು ಚುನಾವಣಾ ತಂತ್ರ. ರಾಮ ನಮ್ಮೂರಲ್ಲೂ ಅವನೆ. ನಮ್ಮೂರಲ್ಲೂ ರಾಮಮಂದಿರ ಕಟ್ಟಿದ್ದಿವಿ. ನಾವೂ ರಾಮನ ಪೂಜೆ ಮಾಡ್ತೀವಿ. ರಾಮ ಕೇವಲ ಬಿಜೆಪಿಯವ್ರ ಸ್ವತ್ತಲ್ಲ. ಅವ್ರಿಗೆ ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಮ ನೆನಪಾಗ್ತಾನೆ ಕೇಸರಿ ಶಾಲು ಹಾಕೊಂಡು ರಾಮದೇವರ ಬೆಟ್ಟ ಹತ್ತಿದ್ರೆ ಇವರು ರಾಮ ಭಕ್ತರಾಗೋದಿಲ್ಲ ಎಂದು ಟಾಂಗ್ ನೀಡಿದರು.

click me!