ಬೆಂಗಳೂರು: ಏಲ್ಲೆಂದ್ರಲ್ಲಿ ನಿಮ್ಮ ವಾಹನ ನಿಲ್ಸಿದ್ರೆ ಎಚ್ಚರ!

By Kannadaprabha NewsFirst Published Apr 18, 2024, 12:58 PM IST
Highlights

ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿ ನಿಲ್ಲುವ ವಾಹನಗಳ ತೆರವಿಗೆ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದು, 1412 ವಾಹನಗಳ ತೆರವಿಗೆ ಮುಂದಾಗಿದ್ದಾರೆ. 

ಬೆಂಗಳೂರು (ಏ.18): ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿ ನಿಲ್ಲುವ ವಾಹನಗಳ ತೆರವಿಗೆ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದು, 1412 ವಾಹನಗಳ ತೆರವಿಗೆ ಮುಂದಾಗಿದ್ದಾರೆ. ಈ ವಾಹನಗಳ ಮಾಲಿಕರಿಗೆ ‘ದಂಡ’ ವಿಧಿಸುವುದಲ್ಲದೆ ಆ ವಾಹನಗಳ ಜಪ್ತಿ ಮಾಡಿ ಚುರುಕು ಮುಟ್ಟಿಸಲು ಪೊಲೀಸರು ನಿರ್ಧರಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸಿ ಹೋಗುವ ಮುನ್ನ ನಾಗರಿಕರು ಜಾಗೃತರಾಬೇಕಿದೆ.

ನಗರದ 50 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಂತಹ ವಾಹನಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದೆ. ಈಗಾಗಲೇ 1412 ವಾಹನಗಳನ್ನು ಗುರುತಿಸಲಾಗಿದೆ. ಇದರಲ್ಲಿ 521 ಬೈಕ್, 706 ಆಟೋ, 79 ಕಾರುಗಳು, 6 ಭಾರಿ ವಾಹನಗಳು ಹಾಗೂ 93 ಲಘು ಸರಕು ಸಾಗಣೆ ವಾಹನಗಳಿವೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್ ಹೇಳಿದ್ದಾರೆ.

ಅಪ್ರಾಪ್ತ ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ: ಸೆಕ್ಯೂರಿಟಿ ಗಾರ್ಡ್ ಬಂಧನ

ಈ ವಾಹನಗಳ ಮಾಲಿಕರಿಗೆ ನೋಟಿಸ್ ನೀಡಿ ದಂಡ ಸಂಗ್ರಹಿಸಲಾಗುತ್ತದೆ. ನಂತರ 918 ವಾಹನಗಳನ್ನು ತೆರವು ಮಾಡಲಾಗುವುದು. ಇನ್ನುಳಿದ 494 ವಾಹನಗಳಿಗೆ ಮಾಲಿಕರು ಪತ್ತೆಯಾಗಿಲ್ಲ. ಈ ವಾಹನಗಳನ್ನು ನ್ಯಾಯಾಲಯದ ಅನುಮತಿ ಪಡೆದು ಸಾರ್ವಜನಿಕ ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಾಡಿ ವೋರ್ನ್‌ ಕ್ಯಾಮೆರಾ: ಬಿಎಂಟಿಸಿ ವಾಹನ ತಪಾಸಣಾ ಕಾರ್ಯಕ್ಕೆ ಸಂಬಂಧಿಸಿದಂತೆ ಬರುತ್ತಿರುವ ದೂರುಗಳನ್ನು ತಗ್ಗಿಸಲು ಹಾಗೂ ತಪಾಸಣಾ ಕಾರ್ಯವನ್ನು ಪಾರದರ್ಶಕವಾಗಿ ಮಾಡಲು ತಪಾಸಣಾ ಸಿಬ್ಬಂದಿಗೆ ಹೆಚ್ಚುವರಿಯಾಗಿ ಬಾಡಿ ವೋರ್ನ್‌ ಕ್ಯಾಮೆರಾ ವಿತರಿಸಲು ನಿಗಮ ನಿರ್ಧರಿಸಿದೆ. ಬಿಎಂಟಿಸಿ ಆದಾಯ ಸೋರಿಕೆ ತಡೆಯುವ ಸಲುವಾಗಿ ಟಿಕೆಟ್‌ ಪಡೆಯದೆ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವವರನ್ನು ಪತ್ತೆ ಮಾಡಿ ದಂಡ ವಿಧಿಸಲಾಗುತ್ತದೆ. 

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಚಿತ್ರೀಕರಣ: ಯೂಟ್ಯೂಬರ್ ಬಂಧನ

ಅದರಂತೆ ಬಿಎಂಟಿಸಿಯಲ್ಲಿನ 60ಕ್ಕೂ ಹೆಚ್ಚಿನ ತನಿಖಾ ಸಿಬ್ಬಂದಿ ಮಾಸಿಕ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳನ್ನು ತಪಾಸಣೆ ನಡೆಸಿ ಟಿಕೆಟ್‌ ರಹಿತ ಪ್ರಯಾಣಿಕರನ್ನು ಪತ್ತೆ ಮಾಡಿ ಅವರಿಂದ ದಂಡ ವಸೂಲಿ ಮಾಡುತ್ತಾರೆ. ಅದೇ ರೀತಿ ಟಿಕೆಟ್‌ ಪಡೆಯದ ಪ್ರಯಾಣಿಕರನ್ನು ಪತ್ತೆ ಮಾಡಿ ಅವರಿಗೆ ಟಿಕೆಟ್‌ ನೀಡುವಲ್ಲಿ ವಿಫಲವಾಗುವ ಬಸ್‌ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.

click me!