ಬಾಂಬ್ ಪ್ರಕರಣ: KRSನಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ

By Kannadaprabha News  |  First Published Jan 22, 2020, 8:24 AM IST

ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸಿತಾಣಗಲೂ, ರೈಲ್ವೇ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೆಆರ್‌ಎಸ್‌ನಲ್ಲಿಯೂ ಪೊಲೀಸ್‌ ಭದ್ರತೆಯನ್ನು ಹೆಚ್ಚಿಸಲಾಗಿದೆ.


ಮಂಡ್ಯ(ಜ.22): ಮಂಗಳೂರಿನಲ್ಲಿ ಸಜೀವ ಬಾಂಬ್‌ ಪತ್ತೆಯಾದ ಹಿನ್ನೆಲೆ ಪ್ರಸಿದ್ಧ ಪ್ರವಾಸಿ ತಾಣ ಕೆಆರ್‌ಎಸ್‌ ಜಲಾಶಯಕ್ಕೆ ಹೆಚ್ಚಿನ ಪೋಲಿಸ್‌ ಭದ್ರತೆ ಒದಗಿಸಿ ಬಾಂಬ್‌ ನಿಷ್ಕ್ರಿಯದಳ ಸಿಬ್ಬಂದಿ ವಾಹನ ತಪಾಸಣೆ ನಡೆಸಿದ್ದಾರೆ.

ಬೃಂದಾವನ, ವಾಹನಗಳ ನಿಲ್ದಾಣ ಸೇರಿದಂತೆ ಸೂಕ್ಷ್ಮ ಪ್ರದೇಶಗಳು ಹಾಗೂ ಬೃಂದಾವನಕ್ಕೆ ಒಳ ಬರುವ ವಾಹನ ಹಾಗೂ ಪ್ರವಾಸಿಗರ ಬ್ಯಾಗ್‌ಗಳನ್ನು ಬಾಂಬ್‌ ನಿಷ್ಕಿ್ರಯಾದಳ ಹಾಗೂ ಸ್ವಾನದಳ ಪರಿಶೀಲಿಸಿತು.

Tap to resize

Latest Videos

ಸಾವಿರಾರು ದೇವರಿಲ್ಲ, ಒಬ್ಬನೇ ದೇವರಿದ್ದಾನೆ: ಸಿದ್ದರಾಮಯ್ಯ

ಕೈಗಾರಿಕಾ ಭದ್ರತೆ ಬಿಗಿ ಭದ್ರತೆಯಲ್ಲಿರುವ ಕೆಆರ್‌ಎಸ್‌ ಬೃಂದಾವನಕ್ಕೆ ಎಸ್ಪಿ ಕೆ.ಪರುಶುರಾಮ್‌ ಭೇಟಿ ನೀಡಿ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಅವರ ಬ್ಯಾಗ್‌ಗಳ ಮೇಲೆ ಹದ್ದಿನ ಕಣ್ಣಿಡಲು ಸೂಚಿಸಿ ನಾಕಾ ಬಂಧಿಯಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಆದೇಶಿಸಿದ್ದಾರೆ. ಜೊತೆಗೆ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಸ್ಥಳದಲ್ಲೇ ಮೊಕ್ಕಾ ಹೂಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಂಗನತಿಟ್ಟಿನಲ್ಲಿ ಅನಿಲ್ ಕುಂಬ್ಳೆ ದೋಣಿ ವಿಹಾರ

click me!