ಕಲಬುರಗಿ: ಪ್ರಯಾಣಿಕರನ್ನು ಬಿಟ್ಟು ಹೋದ ಸಿಕಂದರಾಬಾದ್‌ ಎಕ್ಸಪ್ರೆಸ್‌

Published : Jun 26, 2023, 04:14 AM IST
ಕಲಬುರಗಿ: ಪ್ರಯಾಣಿಕರನ್ನು ಬಿಟ್ಟು ಹೋದ ಸಿಕಂದರಾಬಾದ್‌ ಎಕ್ಸಪ್ರೆಸ್‌

ಸಾರಾಂಶ

ಇಲ್ಲಿನ ರೈಲು ನಿಲ್ದಾಣದ ಸಿಬ್ಬಂದಿಯ ಭಾರಿ ಅಚಾತುರ್ಯದಿಂದಾಗಿ ಹುಬ್ಬಳ್ಳಿಯಿಂದ ಹೊರಟು ಕಲಬುರಗಿ ಮಾರ್ಗವಾಗಿ ಸಿಕಂದರಾಬಾದ್‌ಗೆ ಹೊರಟಿದ್ದ ಎಕ್ಸ್‌ಪ್ರೆಸ್‌ ರೈಲು ಬರುವಿಕೆಗಾಗಿ ಕಾಯುತ್ತಿದ್ದ ನೂರಾರು ಪ್ರಯಾಣಿಕರನ್ನು ನಿಲ್ದಾಣದಲ್ಲೇ ಬಿಟ್ಟು ತೆರಳಿದ ಪ್ರಸಂಗ ಭಾನುವಾರ ಬೆಳಗ್ಗೆ ನಡೆದಿದೆ.

ಕಲಬುರಗಿ (ಜೂ.26) ಇಲ್ಲಿನ ರೈಲು ನಿಲ್ದಾಣದ ಸಿಬ್ಬಂದಿಯ ಭಾರಿ ಅಚಾತುರ್ಯದಿಂದಾಗಿ ಹುಬ್ಬಳ್ಳಿಯಿಂದ ಹೊರಟು ಕಲಬುರಗಿ ಮಾರ್ಗವಾಗಿ ಸಿಕಂದರಾಬಾದ್‌ಗೆ ಹೊರಟಿದ್ದ ಎಕ್ಸ್‌ಪ್ರೆಸ್‌ ರೈಲು ಬರುವಿಕೆಗಾಗಿ ಕಾಯುತ್ತಿದ್ದ ನೂರಾರು ಪ್ರಯಾಣಿಕರನ್ನು ನಿಲ್ದಾಣದಲ್ಲೇ ಬಿಟ್ಟು ತೆರಳಿದ ಪ್ರಸಂಗ ಭಾನುವಾರ ಬೆಳಗ್ಗೆ ನಡೆದಿದೆ.

ಹುಬ್ಬಳ್ಳಿಯಿಂದ ಶನಿವಾರ ರಾತ್ರಿಯೆ ಹೊರಟಿದ್ದ ಸಿಕಂದರಾಬಾದ್‌ ಎಕ್ಸಪ್ರೆಸ್‌ ರೈಲು ಬೆಳಗ್ಗೆ 6.15 ಗಂಟೆಗೆ ಕಲಬುರಗಿಗೆ ಬರೋದಿತ್ತು. ಈ ರೈಲು ಕಲಬುರಗಿಗೆ ಬಂದು ಹೋದರೂ ಸಹ ಈ ರೈಲಿನ ಆಗಮನ, ನಿರ್ಗಮನದ ಬಗ್ಗೆ ಯಾವುದೇ ಘೋಷಣೆಗಳು ರೈಲು ನಿಲ್ದಾಣದಲ್ಲಿ ಕೇಳಿ ಬರಲಿಲ್ಲ. ಹೀಗಾಗಿ ಈ ರೈಲಿಗಾಗಿ ಕಾಯುತ್ತಿದ್ದ ನೂರಾರು ಜನ ಹಾಗೇ ಪಾಟ್‌ಫಾಮ್‌ರ್‍ನಲ್ಲೇ ಇದ್ದರು.

ವಂದೇ ಭಾರತ್‌ ರೈಲಲ್ಲಿ ಒಮ್ಮೆಯಾದ್ರೂ ಹೋಗ್ಬೆಕು ಅನ್ನೋ ಆಸೆಗೆ ತಣ್ಣೀರೆರಚಿದ ರೈಲ್ವೆ ಇಲಾಖೆ: ಪ್ರಯಾಣಿಕನ ಆಕ್ರೋಶ!

ಸಿಕಂದರಾಬಾದ್‌ ರೈಲು ಬರೋ ಹೊತ್ತು ಮೀರಿ ನಂತರದ ಹುಸೇನ್‌ ಸಾಗರ್‌ ರೈಲು ಬರೋ ಘೋಷಣೆಯಾದಾಗಲೇ ಎಲ್ಲರೂ ಎಚ್ಚೆತ್ತುಕೊಂಡು ಏನಾಯ್ತೆಂದು ವಿಚಾರಿಸಿದಾಗ ಸಿಕ​ಂ​ದ​ರಾ​ಬಾದ್‌ ರೈಲು ಅದಾಗಲೇ ಬಂದು ಹೋಗಿದ್ದು ಗೊತ್ತಾಗಿದೆ. ಇದರಿಂದ ತೀವ್ರ ಗೊಂದಲಕ್ಕೊಳಗಾದ ಪ್ರಯಾಣಿಕರು ರೈಲು ಸಿಬ್ಬಂದಿಯ ಅಲಕ್ಷತನವನ್ನು ಕಟುವಾಗಿ ಟೀಕಿಸಿದರು.

ಈ ಘಟನೆಯಿಂದ ನೂರಾರು ಪ್ರಯಾಣಿಕರು ರೊಚ್ಚಿಗೆದ್ದು ಸ್ಟೇಷನ್‌ ಮಾಸ್ಟರ್‌ ಜೊತೆ ಜಗಳಕ್ಕೆ ಮುಂದಾದಾಗ ಕೊನೆಗೆ ಹುಸೇನ್‌ ಸಾಗರ್‌ ರೈಲಲ್ಲಿ ಎಲ್ಲರನ್ನು ಹೈದ್ರಾಬಾದ್‌ಗೆ ಕಳುಹಿಸುವ ಏರ್ಪಾಟು ಮಾಡಲಾಯಿತು ಎಂದು ಗೊತ್ತಾಗಿದೆ.

ಕಲಬುರಗಿಯಿಂದ ಸಿಕಂದರಾಬಾದ್‌ಗೆ ತೆರಳಬೇಕಿದ್ದ ಪ್ರಯಾಣಿಕ ರೆಹಮಾನ್‌ ಹೇಳೋ ಪ್ರಕಾರ, ಸಿಕಂದರಾಬಾದ್‌ ಎಕ್ಸಪ್ರೆಸ್‌ 6.32ಕ್ಕೆ ಬರಲಿದೆ ಎಂದು ಫಲಕದಲ್ಲಿ ವೇಳೆ ಸಾರಲಾಗುತ್ತಿದ್ದರೂ ರೈಲೇ ಬರಲಿಲ್ಲ. ಆಮೇಲೆ ರೇಲ್ವೆ ಸಿಬ್ಬಂದಿ ನಂತರ ಬಂದ ಹುಸೇನ್‌ ಸಾಗರ್‌ ರೈಲಿನ ಮಾಹಿತಿ ನೀಡುತ್ತ ಘೋಷಣೆ ಕೂಗಿದಾಗಲಷ್ಟೇ ನಾವು ಹತ್ತಬೇಕಿದ್ದ ಸಿಕಂದರಾಬಾರ್‌ ರೈಲು ಹೋಗಿರೋದು ಗೊತ್ತಾಗಿದೆ. 60ಕ್ಕೂ ಹೆಚ್ಚು ಪ್ರಯಾಣಿಕರು ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದೇವು. ಸಕಾಲಕ್ಕೆ ಘೋಷಣೆ ಮಾಡದಿದ್ದರಿ​ಂದ ಇಂತಹ ಅಚಾತುರ್ಯಕ್ಕೆ ಕಾರಣವಾಯ್ತು ಎಂದು ರಹೇಮಾನ್‌ ಬೇಸರ, ವಿಷಾದದಿಂದಲೇ ತಮಗಾದ ಕೆಟ್ಟಅನುಭವ ’ಕನ್ನಡಪ್ರಭ’ ಜೊತೆ ಹಂಚಿಕೊಂಡರು.

ಈ ಕುರಿತಂತೆ ಸ್ಟೇಷನ್‌ ಮಾಸ್ಟರ್‌ ಪಿ.ಎ. ನರಗುಂದಕರ್‌ಗೆ ಸಂಪರ್ಕಿಸಿ ಮಾಹಿತಿ ಕೋರಿದಾಗ ಆಗಿರುವ ಘಟನೆಗೆ ವಿಷಾದಿಸಿದರಲ್ಲದೆ, ಎಲ್ಲ ಪ್ರಯಾಣಿಕರನ್ನು ಹುಸೆನ್‌ ಸಾಗರ್‌ ರೈಲಲ್ಲಿ ಹತ್ತಿಸಿ ಹೈದ್ರಾಬಾದ್‌ಗೆ ಕಳುಹಿಸಲಾಗಿದೆ. ಯಾಕೆ ಹೀಗಾಯ್ತು ಎಂಬುದನ್ನು ವಿವರವಾಗಿ ಮಾಹಿತಿ ಪಡೆಯಲಾಗುತ್ತದೆ. ಇಂತಹ ಅಚಾತುರ್ಯಕ್ಕೇನು ಕಾರಣ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದರು.

ಪ್ರಯಾಣಿಕರೇ ಹುಷಾರ್‌: ರೈಲಲ್ಲಾಗುವ ಕಳ್ಳತನಕ್ಕೆ ರೈಲ್ವೆ ಇಲಾಖೆ ಜವಾಬ್ದಾರಿಯಲ್ಲ ಎಂದ ಸುಪ್ರೀಂಕೋರ್ಟ್‌

ಕಲಬುರಗಿ ರೈಲ್ವೆ ನಿಲ್ದಾಣ ಎಡವಟ್ಟುಗಳ ಸರಮಾಲೆÜ!

ಕಲಬುರಗಿ ರೇಲ್ವೆ ನಿಲ್ದಾಣದಲ್ಲಿ ನಿತ್ಯವೂ ಇಂತಹ ಒಂದಿಲ್ಲೊಂದು ಎಡವಟ್ಟುಗಳು ನಡೆದು ಪ್ರಯಾಣಿಕರು ಪರದಾಡುವಂತಾಗಿದೆ. ಪ್ರತಿದಿನದ ಸೊಲ್ಲಾಪುರ- ಯಶವಂತಪೂರ ರೈಲು ಬರುವಾಗ ಬೋಗಿ ಕೋಚ್‌ ಪೋಸಿಷನ್‌ ಪ್ಲಾಟ್‌ಪಾಮ್‌ರ್‍ನಲ್ಲಿ ಪ್ರದರ್ಶನ ಆಗೋದೇ ಇಲ್ಲ. ಅನೇಕ ಬಾರಿ ಈ ಎಡವಟ್ಟಿನಿಂದಾಗಿ ವಯೋವೃದ್ಧರು, ಮಹಿಳೆಯರು ತಮ್ಮ ಕೋಚ್‌ ಎಲ್ಲಿದೆ, ಬೋಗಿ ಎಲ್ಲಿದೆ ಎಂದು ಸರಿಯಾಗಿ ಅರಿಯಲಾಗದೆ ಅತ್ತಿತ್ತ ಓಡಾಡುತ್ತ ಪರದಾಡಿದ್ದಾರೆ.

PREV
click me!

Recommended Stories

ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?
Hubballi-Ankola National Highway ಅತಿಕ್ರಮಣದ ಪರಿಣಾಮ, ಮೃತ್ಯಕೂಪವಾದ ಹುಬ್ಬಳ್ಳಿ ಅಂಕೋಲಾ ಹೆದ್ದಾರಿ!