ಕಲಬುರಗಿ ನಗರದಾದ್ಯಂತ ನಿಷೇಧಾಜ್ಞೆ ಜಾರಿ: ಮದ್ಯ ಮಾರಾಟ ನಿಷೇಧ

By Suvarna News  |  First Published Aug 4, 2020, 3:46 PM IST

ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಕಲಬುರಗಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ 


ಕಲಬುರಗಿ, (ಆಗಸ್ಟ್‌ 04): ಅಯೋಧ್ಯೆಯಲ್ಲಿ ನಾಳೆ ಅಂದ್ರೆ ಬುಧವಾರ ಶ್ರೀ ರಾಮ ಮಂದಿರದ ಭೂಮಿ ಪೂಜೆ ನಡೆಯುತ್ತಿರುವುದರಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಕಲಬುರಗಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ 

ಕಲಬುರಗಿ ನಗರದಾದ್ಯಂತ ಆ.4ರ‌ ಮಧ್ಯಾಹ್ನ 3 ಗಂಟೆಯಿಂದ ಆ.6ರ ಬೆಳಿಗ್ಗೆ 6ಗಂಟೆ ವರೆಗೆ ಸಿ.ಆರ್.ಪಿ.ಸಿ. ಕಲಂ.144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಎನ್.ಸತೀಷ್ ಕುಮಾರ್ ಆದೇಶ ಹೊರಡಿಸಿದ್ದಾರೆ.

Tap to resize

Latest Videos

ಆಗಸ್ಟ್​​ 5ರಂದು ಕರ್ನಾಟಕದಾದ್ಯಂತ ಪೊಲೀಸ್ ಸರ್ಪಗಾವಲು: ಬಾಲ ಬಿಚ್ಚಿದ್ರೆ ಹುಷಾರ್

ಈ ಅವಧಿಯಲ್ಲಿ  ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಎನ್.ಸತೀಷಕುಮಾರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ‌ಮಂದಿರ‌ ನಿರ್ಮಾಣದ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಈ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ.

ಅಯೋಧ್ಯೆಯಲ್ಲಿ ಆ.5ರಂದು ಶ್ರೀ ರಾಮ ಮಂದಿರದ ಭೂಮಿ ಪೂಜೆ ನಡೆಯಲಿದೆ.

click me!