ಸಿದ್ದರಾಮಯ್ಯ ಗುಣಮುಖರಾಗಲು 5 ವರ್ಷದ ಬಾಲಕಿಯಿಂದ ವಿಶೇಷ ಪೂಜೆ!

By Suvarna News  |  First Published Aug 4, 2020, 12:32 PM IST

ಸಿಎಂ ಬಿಎಸ್ ಯಡಿಯೂರಪ್ಪ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಕೊರೋನಾ ವೈರಸ್ ವಕ್ಕರಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲು ರಾಜ್ಯಾದ್ಯಂತ ಪೂಜೆ, ಪ್ರಾರ್ಥನೆ ನಡೆಯುತ್ತಿದೆ. ಇದೀಗ 5 ವರ್ಷದ ಪುಟ್ಟ ಬಾಲಕಿ ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲು ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾಳೆ.


ಬಾಗಲಕೋಟೆ(ಆ.04): ಕರ್ನಾಟಕದಲ್ಲಿ ಕೊರೋನಾ ವೈರಸ್ ಮಹಾಮಾರಿ ಎಲ್ಲೆಡೆ ವಕ್ಕರಿಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೊರೋನಾ ವೈರಸ್ ಕಾರಣ ಆಸ್ಪತ್ರೆ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೂ ಕೊರೋನಾ ವೈರಸ್ ತಗುಲಿರುವ ಕಾರಣ ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿದ್ದರಾಮಯ್ಯ ಆರೋಗ್ಯ ಚೇತರಿಕೆಗೆ ರಾಜ್ಯದಲ್ಲಿ ಪೂಜೆ, ಪ್ರಾರ್ಥನೆ ನಡೆಯುತ್ತಿದೆ. ಇದೀಗ ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲು ಬಾಗಲಕೋಟೆಯ 5 ವರ್ಷದ ಪುಟ್ಟ ಬಾಲಕಿ ವಿಶೇಷ ಪೂಜೆ ಮಾಡಿದ್ದಾಳೆ.

ಸಿದ್ದರಾಮಯ್ಯ ಪತ್ನಿ, ಪುತ್ರನಿಗೂ ಕೋವಿಡ್ ಟೆಸ್ಟ್‌; ಮೊಮ್ಮಗನಿಗೆ ಕ್ವಾರಂಟೈನ್

Tap to resize

Latest Videos

ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ಬಾಲಕಿ ಸೃಷ್ಟಿ ಹೊಸಗೌಡ್ರ, ಸಿದ್ದರಾಮಯ್ಯ ಗುಣಮುಖರಾಗಲು ಪೂಜೆ ಸಲ್ಲಿಸಿದ್ದಾಳೆ. ಮನೆಯ ಜಗುಲಿಯಲ್ಲಿ, ದೇವರಿಗೆ ಕರ್ಪೂರದ ಆರತಿ ಬೆಳಗಿ, ಪೂಜೆ ಮಾಡಿದ್ದಾಳೆ. ಬಳಿಕ ದೇವರಲ್ಲಿ ಸಿದ್ದರಾಮಯ್ಯನವರು ಆದಷ್ಟು ಬೇಗ ಗುಣಮುಖರಾಗಲಿ, ಮನೆಗೆ ಮರಳಲಿ ಎಂದು ಬೇಡಿಕೊಂಡಿದ್ದಾಳೆ.

ಆಸ್ಪತ್ರೆಯಿಂದಲೇ ರಾಜ್ಯದ ಜನತೆಗೆ ವಿಡಿಯೋ ಸಂದೇಶ ರವಾನಿಸಿದ ಸಿಎಂ

ಸಿದ್ದರಾಮಯ್ಯ ಬಾದಾಮಿ ಕ್ಷೇತ್ರಕ್ಕೆ ಬಂದಾಗ ಹೊಸಗೌಡ್ರ ಮನೆಗೆ ಆಗಮಿಸುತ್ತಿದ್ದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಬಾಲಕಿ ಸೃಷ್ಟಿ ಹಲವು ಬಾರಿ ಬೇಟಿಯಾಗಿದ್ದಾಳೆ.  ಇತ್ತ ಸಿದ್ದರಾಮಯ್ಯನವರಿಗೂ ಸೃಷ್ಟಿ ಆತ್ಮೀಯಳಾಗಿದ್ದಳು. ಪ್ರತಿ ಬಾರಿ ಬಂದಾಗ ಸೃಷ್ಟಿಯನ್ನು ಮಾತನಾಡಿಸುತ್ತಿದ್ದರು. 

ಸುದ್ದಿ ತಿಳಿದ ತಕ್ಷಣವೇ ಬಾಲಕಿ ಸೃಷ್ಟಿ ದೇವರಲ್ಲಿ ಪ್ರಾರ್ಥನೆ ಆರಂಭಿಸಿದ್ದಾಳೆ. ಇದೀಗ ವಿಶೇಷ ಪೂಜೆ ಮೂಲಕ ದೇವರಲ್ಲಿ ಸಿದ್ದರಾಮಯ್ಯನವರ ಆರೋಗ್ಯಕ್ಕೆ ಬೇಡಿಕೊಂಡಿದ್ದಾಳೆ.
 

click me!