Kalaburagi| ಚಿಂಚೋಳಿ : ತಿಂಗಳಲ್ಲಿ 2ನೇ ಸಲ ಭೂಕಂಪನ

By Kannadaprabha News  |  First Published Oct 9, 2021, 8:03 AM IST
  • ವಿಜಯಪುರದ ಬಳಿಕ ಇದೀಗ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲೂ ಮತ್ತೆ ಭೂಕಂಪ
  • ರಿಕ್ಟರ್‌ ಮಾಪಕದಲ್ಲಿ 2.9ರಷ್ಟುಕಂಪನ ದಾಖಲು

ಕಲಬುರಗಿ/ಚಿಂಚೋಳಿ (ಅ.09): ವಿಜಯಪುರದ (Vijayapura) ಬಳಿಕ ಇದೀಗ ಕಲಬುರಗಿ ಜಿಲ್ಲೆಯ ಚಿಂಚೋಳಿ (Chincholi) ತಾಲೂಕಿನಲ್ಲೂ ಮತ್ತೆ ಭೂಕಂಪದ (Earthquake) ಅನುಭವ ಆಗಿದ್ದು, ರಿಕ್ಟರ್‌ ಮಾಪಕದಲ್ಲಿ 2.9ರಷ್ಟುಕಂಪನ ದಾಖಲಾಗಿದೆ. 

ತಾಲೂಕಿನ ತೇಗಲತಿಪ್ಪಿ, ಹಲಚೇರಾ, ಗಡಿಕೇಶ್ವರ ಗ್ರಾಮಗಳಲ್ಲಿ (villages) ಗುರುವಾರ ಮಧ್ಯರಾತ್ರಿ 12.44ಕ್ಕೆ ಭೂಮಿ ಕಂಪಿಸಿದ್ದರಿಂದ ನಿದ್ರೆಯಲ್ಲಿದ್ದ ಜನ ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿರುವ ಘಟನೆ ನಡೆದಿದೆ. ಈ ಊರುಗಳಲ್ಲಿ ಕಳೆದ ತಿಂಗಳು ಈ ರೀತಿಯ ಸದ್ದು, ಕಂಪನ ಸಂಭವಿಸಿ ಜನ ಭೀತರಾಗಿದ್ದರು. ಇದೀಗ ತಿಂಗಳಲ್ಲೇ 2ನೇ ಬಾರಿ ಈ ರೀತಿಯ ಕಂಪನ ಮರುಕಳಿಸಿದೆ.

Tap to resize

Latest Videos

ಹಲಚೇರಾ, ತೇಗಲತಿಪ್ಪಿ, ಗಡಿಕೇಶ್ವರ ಗ್ರಾಮಗಳಲ್ಲಿ ಐದು ವರ್ಷಗಳಿಂದ ಆಗಾಗ ಭೂಮಿ ಕಂಪಿಸುತ್ತಲೇ ಇದೆ. ಆದರೆ ಜಿಲ್ಲಾ ಗಣಿ ಮತ್ತು ಭೂಮಿ ವಿಜ್ಞಾನಿಗಳು ಇದು ಸಹಜಪ್ರಕ್ರಿಯೆ, ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಭೂಮಿಯೊಳಗಿನ  ಸುಣ್ಣದ ಪದರಗಳು ಒಂದಕ್ಕೊಂಡು ಜೋಡಣೆ ಆಗುವ ಸಂದರ್ಭದಲ್ಲಿ ಇಂಥ ಘಟನೆಗಳು ನಡೆಯುತ್ತವೆ. ಆಗ ಭೂಮಿಯೊಳಗಿನ ಗಾಳಿ ಹೊರ ಹೊಮ್ಮಿ ಶಬ್ದದ ಜತೆ ಭೂಮಿ ನಡಗುವುದು ಸಹಜ ಕ್ರಿಯೆ ಆಗಿದೆ ಎಂಬು ಗಣಿ ಮತ್ತು ಭೂವಿಜ್ಞಾನಿಗಳ ಅಭಿಪ್ರಾಯ.

ವಿಜಯಪುರದಲ್ಲಿ ಮತ್ತೆ ಭೂ ಕಂಪನ, ಮನೆ ಬಿರುಕು, ಜನರ ಆತಂಕ

ಆರು ಬಾರಿ ಕಂಪನ: ಇನ್ನು ವಿಜಯಪುರ ಜಿಲ್ಲೆಯಲ್ಲಿ ಸೆ.4ರಿಂದ ಇಲ್ಲಿ​ಯ​ವ​ರೆಗೆ ಒಟ್ಟು ಆರು ಬಾರಿ ಭೂಕಂಪನದ ಅನುಭವ ಆಗಿದೆ. ಕಳೆದೊಂದು ವಾರ​ದಲ್ಲಿ 3 ಬಾರಿ ಭೂಕಂಪನ ಆಗಿದೆ. ಸಾಮಾ​ನ್ಯ​ವಾಗಿ ಜಿಲ್ಲೆಯ ಬಸ​ವ​ನ​ಬಾ​ಗೇ​ವಾಡಿ (Basavanabagewadi),ಬಸ​ವ​ನ​ಬಾ​ಗೇ​ವಾಡಿ ತಾಲೂಕು ಮಸೂತಿ, ಸಿಂದಗಿ (sindagi) ಹಾಗೂ ವಿಜ​ಯ​ಪುರ (Vijayapura) ನಗರ ಸುತ್ತ​ಮು​ತ್ತಲ ಪ್ರದೇ​ಶ​ದಲ್ಲಿ ಈ ಕಂಪನ ಸಂಭವಿಸುತ್ತಿದೆ.

ಮತ್ತೊಂದೆಡೆ ಮಳೆ ಆರ್ಭಟ

ಮಳೆರಾಯನ ಇನ್ನೂ ಕಲಬುರಗಿ (Kalaburagi) ಜಿಲ್ಲೆ ಬಿಡುತ್ತಿಲ್ಲ. ಕಳೆದೊಂದು ವಾರದಿಂದ ನಿತ್ಯ ಬಿರುಸಿನ ಮಳೆ (Rain) ಸುರಿಯುತ್ತಿದೆ. ಮಂಗಳವಾರ ಮತ್ತೆ ಕಲಬುರಗಿ ನಗರ ಹಾಗೂ ಜಿಲ್ಲೆಯ ಶಹಾಬಾದ್‌, ವಾಡಿ, ಅಫಜಲ್ಪುರ, ಚಿಂಚೋಳಿಯಲ್ಲಿ ಸುಮಾರು 1 ಗಂಟೆ ಬಿರುಸಿನ ಮಳೆಯಾಗಿದೆ.

ಕಲಬುರಗಿ ನಗರ ಹಾಗೂ ಸುತ್ತಲಿನ 20 ರಿಂದ 25 ಕಿ.ಮೀ. ಪ್ರದೇಶದಲ್ಲಿ ಬಿರುಸಿನ ಮಳೆಯಾಗಿದೆ. ಗುಡುಗು ಹಾಗೂ ಸಿಡಿಲಿನ ಅಬ್ಬರವೂ ಜೋರಾಗಿತ್ತು. ಕಲಬುರಗಿ ನಗರದಲ್ಲೂ ಮಳೆ ಸುರಿದಿದೆ. ನಿರಂತರ ಮಳೆ ಸುರಿಯುತ್ತಿರೋದರಿಂದಾಗಿ ತೊಗರಿ ಫಸಲು (Crops) ತೀವ್ರ ತೊಂದರೆಗೀಡಾಗಿದೆ. ಮಳೆ ನೀರು ತೊಗರಿ ಹೊಲದಲ್ಲಿ ಮಡುಗಟ್ಟಿನಿಂತಿದೆ. ಇದರಿಂದ ತೊಗರಿ ಫಸಲು ಹಾಳಾಗುವ ಭೀತಿಯಲ್ಲಿದೆ. ರೈತರು ತೊಗರಿ ಬಿತ್ತಲು ಹತ್ತಾರು ಸಾವಿರ ಹಣ ವೆಚ್ಚ ಮಾಡಿದ್ದಾರೆ. ಈಗ ಮಲೆ ನಿಂತ ಮೇಲೆ ತೊಗರಿಯನ್ನೆಲ್ಲ ತೆಗೆದು ಆ ಹೊಲದಲ್ಲೇ ಕಡಲೆ ಬಿತ್ತುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ತೊಗರಿ ರೈತರು (farmers) ತೀವ್ರ ತೊಂದರೆ, ಆತಂಕ ಎದುರಿಸುತ್ತಿದ್ದಾರೆ

click me!