Bengaluru| ಟೊಮೆಟೋ ದುಬಾರಿ: ಕೇಜಿಗೆ ಈಗ 70 ರೂ., ಗ್ರಾಹಕರ ಜೇಬಿಗೆ ಕತ್ತರಿ

Kannadaprabha News   | Asianet News
Published : Oct 09, 2021, 07:49 AM ISTUpdated : Oct 09, 2021, 08:14 AM IST
Bengaluru| ಟೊಮೆಟೋ ದುಬಾರಿ: ಕೇಜಿಗೆ ಈಗ 70 ರೂ., ಗ್ರಾಹಕರ ಜೇಬಿಗೆ ಕತ್ತರಿ

ಸಾರಾಂಶ

*  10ರಿಂದ 15ರಷ್ಟಿದ್ದ ಬೆಲೆ *  ಈಗ 60ರಿಂದ  80ವರೆಗೂ ಮಾರಾಟ *  ಸಗಟು ವ್ಯಾಪಾರದಲ್ಲಿ ಪ್ರತಿ ಕೆಜಿ ಟೊಮೊಟೋಗೆ 50 ರು.ಗಳಿಗೆ ಮಾರಾಟ

ಬೆಂಗಳೂರು(ಅ.09):  ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾದ ಪರಿಣಾಮ ಟೊಮೆಟೋ ಬೆಳೆಯ ಇಳುವರಿ ನೆಲ ಕಚ್ಚಿದ್ದು, ರಾಜಧಾನಿ ಬೆಂಗಳೂರಿನಲ್ಲಿ(Bengaluru) ದಿಢೀರ್‌ ಬೆಲೆ ಏರಿಕೆಯಾಗಿದೆ.

ಸೆಪ್ಟಂಬರ್‌ ತಿಂಗಳ ಪ್ರಾರಂಭದಲ್ಲಿ ಪ್ರತಿ ಕೆ.ಜಿ. ಟೊಮೆಟೋಗೆ(Tomato) 10ರಿಂದ 15 ರಷ್ಟಿತ್ತು. ಅಕ್ಟೋಬರ್‌ ತಿಂಗಳ ಪ್ರಾರಂಭದಲ್ಲಿ .60ಕ್ಕೆ ಹೆಚ್ಚಳವಾಗಿದೆ. ಪ್ರಸ್ತುತ ಬೆಂಗಳೂರಿನ ಮಳಿಗೆಗಳಲ್ಲಿ 60 ರಿಂದ 70 ರವರೆಗೆ ಮಾರಾಟವಾಗುತ್ತಿದೆ. ಚಿಕ್ಕಬಳ್ಳಾಪುರ(Chikkaballapur), ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆಯಾಗುತ್ತಿದೆ(Rain). ಜೊತೆಗೆ, ವಾತಾವರಣದಲ್ಲಿನ ತಾಪಮಾನ(Temperature) ಕಡಿಮೆಯಾಗಿದೆ. ಇದರಿಂದ ಟೊಮೆಟೋ ಬೆಳೆಗೆ ಹೊಡೆತ ಬಿದ್ದಿದೆ. ಕೆಲ ತೋಟಗಳಲ್ಲಿ ನೀರು ನಿಂತಿದ್ದು, ಶೇ.50ಕ್ಕೂ ಹೆಚ್ಚು ಪ್ರಮಾಣದ ಬೆಳೆ(Crop) ನಾಶವಾಗಿದೆ. ಅಲ್ಲದೆ ಮಹಾರಾಷ್ಟ್ರದಿಂದಲೂ(Maharashtra) ಟೊಮೆಟೋ ಬೆಂಗಳೂರಿಗೆ ಸರಬರಾಜಾಗುತ್ತಿಲ್ಲ. ಬೆಂಗಳೂರು ನಗರದ ಯಶವಂತಪುರ ಎಪಿಎಂಸಿ(APMC) ಮತ್ತು ಸಿಂಗೇನ ಅಗ್ರಹಾರದ ಮಾರುಕಟ್ಟೆಯಲ್ಲಿ(Market) 20 - 22 ಕೆ.ಜಿ. ತೂಕದ ಬಾಕ್ಸ್‌ 1200 ರು.ಗಳಿಗೆ ನಿಗದಿಯಾಗಿದೆ.

ಬೆಲೆ ಕುಸಿತ: ಜಮೀನಿಗೆ ಗೊಬ್ಬರವಾದ ಟೊಮೆಟೋ

ಸಗಟು ವ್ಯಾಪಾರದಲ್ಲಿ ಪ್ರತಿ ಕೆಜಿ ಟೊಮೊಟೋಗೆ 50 ರು.ಗಳಿಗೆ ಮಾರಾಟವಾಗುತ್ತಿದೆ. ಆದರೆ, ಚಿಲ್ಲರೆ ವ್ಯಾಪಾರಿಗಳು 70 ರುವರೆಗೂ ಮತ್ತು ಆನ್ಲೈನ್‌ನಲ್ಲಿ ಖರೀದಿ ಮಾಡುವವರು 80ಕ್ಕೂ ಹೆಚ್ಚು ರು.ಗಳನ್ನು ತೆತ್ತು ಖರೀದಿ ಮಾಡುತ್ತಿದ್ದಾರೆ. ಮಳೆ ಪ್ರಮಾಣ ಇದೇ ರೀತಿಯಲ್ಲಿ ಮುಂದುವರೆದಲ್ಲಿ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
 

PREV
click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!