ಪರೀಕ್ಷೆ ಬರೆದ ಏಕೈಕ ವಿದ್ಯಾರ್ಥಿನಿ : ಕರ್ತವ್ಯ ನಿರ್ವಹಿಸಿದ್ದು18 ಸಿಬ್ಬಂದಿ

By Suvarna News  |  First Published Mar 10, 2020, 5:54 PM IST

ಮಂಗಳವಾರ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೇವಲ ಒಬ್ಬಳೆ ವಿದ್ಯಾರ್ಥಿನಿ ಬರೆದಿದ್ದಾಳೆ. ಆದ್ರೆ, ಓರ್ವ ವಿದ್ಯಾರ್ಥಿನಿಗೆ 18 ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿದೆ. 


ಬೆಳಗಾವಿ, (ಮಾ.10): ಒಬ್ಬ ವಿದ್ಯಾರ್ಥಿನಿಗಾಗಿ ಬರೋಬ್ಬರಿ 18 ಸಿಬ್ಬಂದಿ ಪರೀಕ್ಷಾ ಕರ್ತವ್ಯ ನಿರ್ವಹಿಸಿರುವ ಅಪರೂಪದ ಘಟನೆಗೆ ಬೆಳಗಾವಿ ಜಿಲ್ಲೆಯ ಮೂಡಲಗಿ ಶೈಕ್ಷಣಿಕ ವಲಯದ ಕಲ್ಲೋಳಿಯ ಎನ್.ಆರ್.ಪಾಟೀಲ ಪಿ.ಯು ಕಾಲೇಜು ಸಾಕ್ಷಿಯಾಗಿದೆ.

ಮಾ.4ರಿಂದ ರಾಜ್ಯಾದ್ಯಂತ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗಳು ನಡೆಯುತ್ತಿವೆ. ಅದರಂತೆ ಮಂಗಳವಾರ ಉರ್ದು ಭಾಷಾ ಪರೀಕ್ಷೆ ಇತ್ತು. ಕಲ್ಲೋಳಿ ಗ್ರಾಮದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಎನ್.ಆರ್.ಪಾಟೀಲ ಪಿ.ಯು ಕಾಲೇಜಿನಲ್ಲಿ ನಡೆದ ಪರೀಕ್ಷೆಗೆ ಓರ್ವ ವಿದ್ಯಾರ್ಥಿನಿ ಹಾಜರಾಗಿದ್ದಾಳೆ.

Tap to resize

Latest Videos

undefined

100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿನಿಯ ಕನ್ನಡ ಉತ್ತರ ಪತ್ರಿಕೆ ಹೀಗಿದೆ ನೋಡಿ

ವಡರಟ್ಟಿ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ  ವರ್ಷದ ವಿದ್ಯಾರ್ಥಿನಿ ಮುಸ್ಕಾನ ಪಠಾಣ ಎಂಬುವರು ಮಾತ್ರ  ಪರೀಕ್ಷೆ ಬರೆದಿದ್ದಾರೆ.

ಇವರಿಗೆ ಚಿಕ್ಕೋಡಿಯಿಂದ ಕಲ್ಲೋಳಿಗೆ ಪ್ರಶ್ನೆ ಪತ್ರಿಕೆ ತರಲು 5 ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರೆ, ಪರೀಕ್ಷಾ ಕೇಂದ್ರದಲ್ಲಿ ಒಬ್ಬರು ಕೊಠಡಿ ಮೇಲ್ವಿಚಾರಕರು, ಒಬ್ಬರು ಮುಖ್ಯ ಅಧೀಕ್ಷಕ, ಒಬ್ಬರು ಸಹ ಅಧೀಕ್ಷಕ, ವೀಕ್ಷಕ ದಳದ ೨ ಸಿಬ್ಬಂದಿ, ಕಚೇರಿ ಸಿಬ್ಬಂದಿ 3, ಪೊಲೀಸರು 2, ಒಬ್ಬ ಸಿಪಾಯಿ ಸೇರಿದಂತೆ ಒಟ್ಟು 15 ಜನ ಸಿಬ್ಬಂದಿ ಪರೀಕ್ಷಾ ಕರ್ತವ್ಯ ನಿರ್ವಹಿಸಿದ್ದಾರೆ.

 ಪರೀಕ್ಷಾ ಕೇಂದ್ರಕ್ಕೆ 3 ಜನರ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಒಟ್ಟಾರೆ ಒಬ್ಬ ವಿದ್ಯಾರ್ಥಿನಿಗೆ ಒಟ್ಟು 18 ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದಾರೆ.

ಸುದ್ದಿಯ ಫೋಟೋ ಸಾಂದರ್ಭಿಕ ಚಿತ್ರವಾಗಿರುತ್ತದೆ.

click me!