ಯಾದಗಿರಿ: ಟೈರ್ ಸುಡುವ ಸ್ಟಿಮ್ ಬಾಯ್ಲರ್ ಸ್ಫೋಟ, 8 ಮಂದಿಗೆ ಗಾಯ

Suvarna News   | Asianet News
Published : Mar 10, 2020, 02:40 PM IST
ಯಾದಗಿರಿ: ಟೈರ್ ಸುಡುವ ಸ್ಟಿಮ್ ಬಾಯ್ಲರ್ ಸ್ಫೋಟ, 8 ಮಂದಿಗೆ ಗಾಯ

ಸಾರಾಂಶ

ಟೈರ್ ಸುಡುವ ಸ್ಟಿಮ್ ಬಾಯ್ಲರ್ ಸ್ಫೋಟ| ಯಾದಗಿರಿ ತಾಲೂಕಿನ ಕಡೆಚೂರ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ನಡೆದ ದುರ್ಘಟನೆ| ಘಟನೆಯಲ್ಲಿ 8 ಮಂದಿಗೆ ಗಾಯ| 

ಯಾದಗಿರಿ(ಮಾ.10): ಟೈರ್ ಸುಡುವ ಸ್ಟಿಮ್ ಬಾಯ್ಲರ್ ಸ್ಫೋಟಗೊಂಡ ಪರಿಣಾಮ 8 ಜನರಿಗೆ ಗಾಯವಾದ ಘಟನೆ ತಾಲೂಕಿನ ಕಡೆಚೂರ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ಇಂದು(ಮಂಗಳವಾರ) ನಡೆದಿದೆ. 

ಸ್ಟಿಮ್ ಬಾಯ್ಲರ್ ಎಸ್.ಬಿ ಕಂಪನಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಈ ಕಂಪನಿಯಲ್ಲಿ ಟೈರ್ ಸುಟ್ಟು ಆಯಿಲ್ ತೆಗೆಯಲಾಗುತ್ತದೆ. ಕಳೆದ 15 ದಿನಗಳ ಹಿಂದಷ್ಟೇ ಕಂಪನಿ ಆರಂಭವಾಗಿತ್ತು ಎಂದು ತಿಳಿದು ಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸ್ಟಿಮ್ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ನಾಲ್ವರಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಗಾಯಾಳುಗಳನ್ನ ರಾಯಚೂರನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಸೈದಾಪುರ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
 

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!