ಉಗ್ರದಾಳಿ ಸಾಧ್ಯತೆ: ಮಂಗಳೂರಿನ ಮಾಲ್, ಆಸ್ಪತ್ರೆಗಳಲ್ಲಿ ಸರ್ಚ್‌ ಆಪರೇಷನ್

Published : Aug 17, 2019, 12:23 PM IST
ಉಗ್ರದಾಳಿ ಸಾಧ್ಯತೆ: ಮಂಗಳೂರಿನ ಮಾಲ್, ಆಸ್ಪತ್ರೆಗಳಲ್ಲಿ ಸರ್ಚ್‌ ಆಪರೇಷನ್

ಸಾರಾಂಶ

ದೇಶದ ಯಾವುದೇ ಭಾಗದಲ್ಲಿ ಉಗ್ರದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಂಗಳೂರಿನ ಹಲವೆಡೆ ಶೋಧ ಕಾರ್ಯಾಚರಣೆ ನಡೆದಿದೆ. ಮಂಗಳೂರು ನಗರದ ಆಸ್ಪತ್ರೆ, ಮಾಲ್‌, ಐಟಿ ಕಂಪನಿ ಸೇರಿದಂತೆ ಪ್ರಮುಖ ಸ್ಥಳಗಳು ಹಾಗೂ ಕಟ್ಟಡಗಳಲ್ಲಿ ಭದ್ರತೆಯನ್ನು ಪರಿಶೀಲಿಸಲು ಮಂಗಳೂರು ನಗರ ಪೊಲೀಸರು ಶುಕ್ರವಾರ ದಿಢೀರನೆ ಬಿಗು ಶೋಧ ಕಾರ್ಯ ನಡೆಸಿದರು.

ಮಂಗಳೂರು(ಆ.17): ಮಂಗಳೂರು ನಗರದ ಆಸ್ಪತ್ರೆ, ಮಾಲ್‌, ಐಟಿ ಕಂಪನಿ ಸೇರಿದಂತೆ ಪ್ರಮುಖ ಸ್ಥಳಗಳು ಹಾಗೂ ಕಟ್ಟಡಗಳಲ್ಲಿ ಭದ್ರತೆಯನ್ನು ಪರಿಶೀಲಿಸಲು ಮಂಗಳೂರು ನಗರ ಪೊಲೀಸರು ಶುಕ್ರವಾರ ದಿಢೀರನೆ ಬಿಗು ಶೋಧ ಕಾರ್ಯ ನಡೆಸಿದರು.

ಮುಖ್ಯವಾಗಿ ಮುಡಿಪು ಇಸ್ಫೋಸಿಸ್‌, ಸೂರ್ಯ ಇಸ್ಫೋಟೆಕ್‌, ಕ್ಷೇಮ ಆಸ್ಪತ್ರೆ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ಹಠಾತ್ತನೆ ಪೊಲೀಸ್‌ ಪಹರೆ ಏರ್ಪಡಿಸಿ ಶ್ವಾನ ದಳ, ಬಾಂಬ್‌ ಸ್ಕ್ವಾಡ್‌ ಬಳಸಿಕೊಂಡು ವ್ಯಾಪಕ ಪ್ರಮಾಣದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದರು.

ಟೆರರ್ ಅಲರ್ಟ್: ಬೆಂಗಳೂರು ನಗರದಲ್ಲಿ ಕಟ್ಟೆಚ್ಚರ

ದೇಶದ ಯಾವುದೇ ಭಾಗದಲ್ಲಿ ಉಗ್ರದ ದಾಳಿ ಸಾಧ್ಯತೆ ಶಂಕೆಯಲ್ಲಿ ಕರಾವಳಿ ಪ್ರದೇಶವಾಗಿರುವ ಕಾರಣ ಇಲ್ಲಿಯೂ ಬಿಗು ತಪಾಸಣೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಹೈ ಅಲಾರ್ಟ್‌ ಘೋಷಿಸಲಾಗಿದೆ. ಇದೇ ರೀತಿ ಮಂಗಳೂರಿನಲ್ಲಿ ಕಟ್ಟುನಿಟ್ಟಿನ ಭದ್ರತೆಯ ಭಾಗವಾಗಿ ಈ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಉನ್ನತ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

PREV
click me!

Recommended Stories

ಮನೆಯೆಂದು ಮಸೀದಿ ಕಟ್ಟಿದ್ರಾ ಸಾರವಾಡ್ ಬ್ರದರ್ಸ್? ಹುಬ್ಬಳ್ಳಿಯಲ್ಲಿ ಹಿಂದೂಗಳ ಬೃಹತ್ ಪ್ರತಿಭಟನೆ, ಸ್ಫೋಟಕ ತಿರುವು!
ವಿದ್ಯಾರ್ಥಿ ರಾಜಕಾರಣಕ್ಕೆ ಗ್ರೀನ್ ಸಿಗ್ನಲ್? ಪಠ್ಯದ ಜೊತೆ ರಾಜಕೀಯ ಪಾಠ? ಉನ್ನತ ಶಿಕ್ಷಣ ಸಚಿವರ ಸ್ಫೋಟಕ ಸುಳಿವು, ಹೇಳಿದ್ದೇನು?