ನೂರಾರು ಕುಟುಂಬ ರಕ್ಷಿಸಿತು ಸರ್ಕಾರಿ ನೌಕರರ ಸಮಯಪ್ರಜ್ಞೆ!

Published : Aug 17, 2019, 12:21 PM ISTUpdated : Aug 17, 2019, 12:22 PM IST
ನೂರಾರು ಕುಟುಂಬ ರಕ್ಷಿಸಿತು ಸರ್ಕಾರಿ ನೌಕರರ ಸಮಯಪ್ರಜ್ಞೆ!

ಸಾರಾಂಶ

ನೂರಾರು ಕುಟುಂಬ ರಕ್ಷಿಸಿತು ಸಮಯಪ್ರಜ್ಞೆ| 300ಕ್ಕೂ ಅಧಿಕ ಕುಟುಂಬಗಳ ರಕ್ಷಣೆ| ತಾಪಂ ಇಒ, ಪಿಡಿ​ಒಗೆ ಶ್ಲಾಘನೆ

ಶ್ರೀಶೈಲ ಮಠದ

ಬೆಳಗಾವಿ[ಆ.17]: ಅಧಿಕಾರಿಗಳ ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆಯಿಂದಾಗಿ ತುಪರಿ ಹಳ್ಳದ ಪ್ರವಾಹದಲ್ಲಿ ಸಂಭವನೀಯ ದೊಡ್ಡ ಪ್ರಮಾಣದ ಜೀವ ಹಾನಿ ಅದೃಷ್ಟವಶಾತ್‌ ತಪ್ಪಿಹೋಗಿದೆ.

ಹೌದು, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಹೊಂಗಲ ಗ್ರಾಮದ ಬಳಿ ಹರಿಯುವ ತುಪರಿ ಹಳ್ಳಕ್ಕೆ ಪ್ರವಾಹ ಬಂದ ವೇಳೆ ಸವದತ್ತಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ್‌ ಹಾಗೂ ಪಿಡಿಒ ದಯಾನಂದ ಹುಲಮನಿ ಕೈಗೊಂಡ ದಿಟ್ಟಕ್ರಮ, ಸ್ಥಳೀಯರ ಸಾಹಸದಿಂದಾಗಿ ಗ್ರಾಮದ 300ಕ್ಕೂ ಅಧಿಕ ಕುಟುಂಬಗಳ ಜೀವ ರಕ್ಷಣೆಯಾಗಿದೆ.

ಆ.6ರ ರಾತ್ರಿ ತುಪರಿ ಹಳ್ಳದಲ್ಲಿ ನೀರಿನಮಟ್ಟಹೆಚ್ಚಾಗುತ್ತಲೇ ಇತ್ತು. ಮಳೆ ಕೂಡ ಸುರಿಯುತ್ತಿತ್ತು. ಅಧಿಕಾರಿಗಳು ತುಸು ನಿರ್ಲಕ್ಷ್ಯ ತೋರಿದ್ದರೂ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆ ಇತ್ತು. ನೂರಾರು ಜನರು ನೀರುಪಾಗುತ್ತಿದ್ದರು. ಗ್ರಾಮದಲ್ಲಿ ಎಲ್ಲರೂ ಗಾಢವಾದ ನಿದ್ರೆಯಲ್ಲಿದ್ದರು. ಆ.7ರ ಬೆಳಗಿನ ಜಾವ 3 ಗಂಟೆÜ ಸುಮಾರಿಗೆ ಅಪಾಯದ ನಿರೀಕ್ಷೆಯಲ್ಲೇ ತಾಪಂ ಇಒ ಯಶವಂತಕುಮಾರ್‌, ಪಿಡಿಒ ದಯಾನಂದ ಹುಲಮನಿ ಅವರು ಸ್ಥಳೀಯ ಸ್ವಯಂ ಸೇವಕರ ನೆರವಿನೊಂದಿಗೆ ನಡೆಸಿದ ಕಾರ್ಯಾಚರಣೆ ಇಡೀ ಗ್ರಾಮಸ್ಥರ ಪ್ರಾಣವನ್ನೇ ರಕ್ಷಿಸಿತು. ಅಂದು ಒಟ್ಟು 600 ಕುಟುಂಬಗಳ ಪೈಕಿ ಅರ್ಧದಷ್ಟುಕುಟುಂಬಗಳು ಸ್ಥಳಾಂತರಗೊಂಡವು.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!