ಕೊರೋನಾ ಭೀತಿ: ಮಂಗಳೂರಲ್ಲಿ 51 ಜನರಿಗಾಗಿ ಹುಡುಕಾಟ

By Suvarna NewsFirst Published Mar 18, 2020, 2:51 PM IST
Highlights

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ 51 ಜನರಿಗಾಗಿ ಹುಡುಕಾಟ ನಡೆಸಲಾಗಿದೆ. ಏರ್ ಇಂಡಿಯಾ ವಿಮಾನದಲ್ಲಿ ಬಂದ ವ್ಯಕ್ತಿಗೆ ಕೊರೊನ ಸೊಂಕು ವಿಚಾರವಾಗಿ ಪ್ರತಿಯೊಬ್ಬ ವ್ಯಕ್ತಿಯ ಟ್ರ್ಯಾಕಿಂಗ್ ಮಾಡಲಾಗುತ್ತಿದೆ.

ಮಂಗಳೂರು(ಮಾ.18): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ 51 ಜನರಿಗಾಗಿ ಹುಡುಕಾಟ ನಡೆಸಲಾಗಿದೆ. ಏರ್ ಇಂಡಿಯಾ ವಿಮಾನದಲ್ಲಿ ಬಂದ ವ್ಯಕ್ತಿಗೆ ಕೊರೊನ ಸೊಂಕು ವಿಚಾರವಾಗಿ ಪ್ರತಿಯೊಬ್ಬ ವ್ಯಕ್ತಿಯ ಟ್ರ್ಯಾಕಿಂಗ್ ಮಾಡಲಾಗುತ್ತಿದೆ.

ಮಂಗಳೂರು ಏರ್ ಇಂಡಿಯಾ ವಿಮಾನದಲ್ಲಿ ಬಂದ ವ್ಯಕ್ತಿಗೆ ಕೊರೋನಾ ಸೊಂಕು ವಿಚಾರವಾಗಿ ತೀವ್ರ ನಿಗಾ ವಹಿಸಲಾಗಿದೆ. ವಿಮಾನದಲ್ಲಿ ಒಟ್ಟು 199 ಜನ ಪ್ರಯಾಣಿಕರು ಆಗಮಿಸಿದ್ದರು.

ಕೊರೋನಾ ಕಾಟ ಅಷ್ಟಿಷ್ಟಲ್ಲ: ಬರೀ ಕೆಮ್ಮಿದ್ದಕ್ಕೆ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ ಜನ!

ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 51 ಜನ ಪ್ರಯಾಣಿಕರು ಬಂದಿಳಿದಿದ್ದರು. ಜಿಲ್ಲಾಡಳಿತ ಈಗ 51 ಜನರ ವಿಳಾಸ ಪತ್ತೆ ಮಾಡುತ್ತಿದೆ. ಪ್ರತಿಯೊಬ್ಬರಿಗೆ ಕರೆ ಮಾಡಲು ತಂಡಗಳ ನಿಯೋಜನೆ ಮಾಡಿದ್ದು, ತಹಶಿಲ್ದಾರ್ ನೇತೃತ್ವದ ತಂಡ ವಿಳಾಸ ಪತ್ತೆಯಾದವರ ಮನೆಗಳಿಗೆ ತೆರಳುತ್ತಿದೆ.

ಜಿಲ್ಲಾಡಳಿತ ಎಲ್ಲರನ್ನು ಟ್ರಾಕ್ ಮಾಡುತ್ತಿದ್ದು, ಕಾಸರಗೋಡು ಜಿಲ್ಲಾಡಳಿತ ಉಳಿದ ಪ್ರಯಾಣಿಕರನ್ನು ಟ್ರಾಕ್ ಮಾಡುತ್ತಿದೆ. ಮಂಗಳವಾರ ಮಂಗಲೂರು ವಿಮಾನ ನಿಲ್ದಾಣದಲ್ಲಿ ಬಂದಿಳೀದ ವ್ಯಕ್ತಿಗೆ ಕೊರೋನಾ ಇರುವುದು ದೃಢಪಟ್ಟಿದೆ.

click me!