ದೇಶದಲ್ಲಿ ಈಗ ಕೈಗಾರಿಕೆಗಳ ಅಭಿವೃದ್ದಿಯಾಗುತ್ತಿವೆ. ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಯಾದಾಗಿನಿಂದ ರಾಜ್ಯದಲ್ಲಿ ಐಟಿ ಬಿಟಿ ಗಳೊಂದಿಗೆ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೆಂಗಳೂರು ವಿಶ್ವದ ಗಮನ ಸೆಳೆಯಿತು. ಅಂದಿನಿಂದ ನಾವು ಐಟಿ ಬಿಟಿಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದ್ದೇವೆ ಎಂದ ಸಣ್ಣ ನೀರಾವರಿ,ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು
ಚಿಕ್ಕಬಳ್ಳಾಪುರ(ಆ.13): ಕೇಂದ್ರದ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರನ್ನು ಇತ್ತೀಚೆಗೆ ದೆಹಲಿಯಲ್ಲಿ ಭೇಟಿ ಮಾಡಿ, ರಾಜ್ಯಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಪಾರ್ಕ್ ಮತ್ತು ಸೈನ್ಸ್ ಸಿಟಿಯನ್ನು ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಲು ಮನವಿ ಸಲ್ಲಿಸಿದ್ದೇನೆ. ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಈ ಕುರಿತು ಪಾಲೋ ಅಪ್ ಮಾಡಲು ನಮ್ಮ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸಣ್ಣ ನೀರಾವರಿ,ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಹೇಳಿದರು.
ಶನಿವಾರ ತಾಲೂಕಿನ ಮುದ್ದೇನ ಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಇಂಡಿಯನ್ ಸ್ಟಾರ್ಟ್‌ಅಪ್ ಫೆಸ್ಟಿವೆಲ್-2023 ಕಾರ್ಯಕ್ರಮದ ಪ್ರಯುಕ್ತ ಸಾಯಿ ಪ್ರೇಮಾಮೃತಂ ಸಭಾಂಗಣದಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನದ ಅಂಗಡಿ ಮಳಿಗೆಗಳ ಉದ್ಘಾಟನೆ ನೆರವೇರಿಸಿ, ವಸ್ತು ಪ್ರದರ್ಶನದ ಅಂಗಡಿ ಮಳಿಗೆಗಳ ವೀಕ್ಷಿಸಿ ನಂತರ ಮಾತನಾಡಿದರು.
CHIKKABALLAPUR: ಮಾರುಕಟ್ಟೆಯಲ್ಲಿ ಟೊಮೆಟೋ ದರ ಭಾರೀ ಕುಸಿತ: ಬೆಳೆಗಾರರಲ್ಲಿ ತೀವ್ರ ನಿರಾಸೆ
ಸ್ಟಾರ್ಟ್‌ಅಪ್ ಫೆಸ್ಟಿವೆಲ್-2023
ಅವರು ‘ಕನ್ನಡಪ್ರಭ’ ಜತೆ ಮಾತನಾಡಿ, ದೇಶದಲ್ಲಿ ಈಗ ಕೈಗಾರಿಕೆಗಳ ಅಭಿವೃದ್ದಿಯಾಗುತ್ತಿವೆ. ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಯಾದಾಗಿನಿಂದ ರಾಜ್ಯದಲ್ಲಿ ಐಟಿ ಬಿಟಿ ಗಳೊಂದಿಗೆ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೆಂಗಳೂರು ವಿಶ್ವದ ಗಮನ ಸೆಳೆಯಿತು. ಅಂದಿನಿಂದ ನಾವು ಐಟಿ ಬಿಟಿಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದ್ದೇವೆ ಎಂದರು.
ಸತ್ಯಸಾಯಿಬಾಬಾರವರು ಆಂಧ್ರ ಮತ್ತು ಕರ್ನಾಟಕಕ್ಕೆ ಆಧ್ಯಾತ್ಮಿಕತೆ, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅದೇ ರೀತಿಯಲ್ಲಿ ಅವರ ಉತ್ತರಾಧಿಕಾರಿ ಮಧುಸೂದನ ಸಾಯಿಯವರು ಸತ್ಯಸಾಯಿ ಗ್ರಾಮದಲ್ಲಿ ಉಚಿತ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದಾರೆ ಮತ್ತು ಈಗ ಉಚಿತ ಮಡಿಕಲ್ ಕಾಲೇಜು ಸ್ಥಾಪಿಸಿದ್ದು ಅನುಮತಿಗಾಗಿ ಕಾಯುತ್ತಿದ್ದಾರೆ. ಶೀಘ್ರವೇ ಅನುಮತಿ ದೊರೆಯಲಿದೆ ಎಂದರು. ಸಿಕೆಬಿ-9 ಸಚಿವ ಎನ್.ಎಸ್.ಭೋಸರಾಜು ತಾಲೂಕಿನ ಮುದ್ದೇನ ಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನದ ಅಂಗಡಿ ಮಳಿಗೆಗಳನ್ನು ವಿಕ್ಷಿಸಿದರು.