ನೋಡಬನ್ನಿ ಉಡಚಾಣ ಹಟ್ಟಿ ಸರ್ಕಾರಿ ಶಾಲೆ: ಪರಿಸರ ಕಾಳಜಿ ಬಿಂಬಿಸುವ ಸ್ಕೂಲ್!

By Kannadaprabha News  |  First Published Mar 2, 2020, 7:34 AM IST

ರೈಲಿನ ವರ್ಣಚಿತ್ರದಿಂದ ಗಮನ ಸೆಳೆಯುತ್ತಿರುವ ಸರ್ಕಾರಿ ಶಾಲೆ | ಹೂವು, ಹಣ್ಣು, ಔಷಧಿ ಗಿಡ ನೆಟ್ಟು ಪಕ್ಷಿಗಳನ್ನು ಕೈಬೀಸಿ ಕರೆಯುತ್ತಿದೆ ಉಡಚಾಣ ಹಟ್ಟಿ ಶಾಲೆ | ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪರಿಸರ ಮಿತ್ರ ಪ್ರಶಸ್ತಿ| ಶಾಲಾವರಣದಲ್ಲಿ ಪ್ರವೇಶ ಮಾಡಿದರೆ ಸಾಕು ಮಲೆನಾಡಿನ ಪ್ರವಾಸಿ ತಾಣದಲ್ಲಿ ಸಂಚರಿಸುವ ಅನುಭವ|


ಬಿಂದುಮಾಧವ ಮಣ್ಣೂರ, ಶಿವಲಿಂಗೇಶ್ವರ ಎಸ್.ಜೆ. 

ಅಫಜಲ್ಪುರ/ ಕರಜಗಿ[ಮಾ.02]:  ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿವರೇ ಹೆಚ್ಚು. ಖಾಸಗಿ ಶಾಲೆಗಳ ಆಕರ್ಷಣೆಗೆ ಒಳಗಾಗಿ ಕೂಲಿ ಮಾಡುವವರೂ ಸಹಿತ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವಂತಹ ವಾತಾವರಣ ಮಧ್ಯೆ ಅಫಜಲ್ಪುರ ತಾಲೂಕಿನ ಉಡಚಾಣ ಹಟ್ಟಿ ಸರ್ಕಾರಿ ಶಾಲೆ ರೈಲಿನ ವರ್ಣಚಿತ್ರದಿಂದ ಎಲ್ಲರ ಗಮನ ಸೆಳೆದಿದೆ. 

Tap to resize

Latest Videos

ಬಿಸಿಲ ನಾಡು ಕಲಬುರಗಿಯಲ್ಲಿ ಮಲೆನಾಡಿನ ಕೂಲ್ ಕೂಲ್ ವಾತಾವರಣ ನಿರ್ಮಿಸಿದ ಸರ್ಕಾರಿ ಶಾಲೆ! 

ಈ ಶಾಲೆಯು ತನ್ನದೇ ಆದ ರೀತಿಯಲ್ಲಿ ಆಕರ್ಷಣೆಗೆ ಒಳಗಾಗಿರುವುದಲ್ಲದೆ ಪರಿಸರ ಸ್ನೇಹಿ ಶಾಲೆ ಆಗಿದೆ. ಶಾಲಾ ಮಕ್ಕಳು ಇನ್ನೇನು ತನ್ನ ಗ್ರಾಮಕ್ಕೆ ರೈಲೈ ಬಂದು ನಿಂತಿದೆ ಎಂದು ಸಂತೋಷದಿಂದ ಓಡೋಡಿ ಬರುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರ ಮಕ್ಕಳು ಸಹ ರೈಲು ಮಾದರಿ ವರ್ಣಚಿತ್ರಕ್ಕೆ ಬೆರೆಗಾಗುತ್ತಿದ್ದಾರೆ. ಅಷ್ಟೇ ಸುತ್ತಮುತ್ತಲಿನ ಪರಿಸರ ಸ್ನೇಹ ವಾತಾವರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಲೂಕಿನ ಉಡಚಾಣ ಹಟ್ಟಿ ಸರ್ಕಾರಿ ಶಾಲೆ ಶಿಕ್ಷಕ ಹೈದರ ಚೌದರಿ ಬಿಸಿಲ ನಾಡಿನಲ್ಲಿದ್ದರೂ ತನ್ನ ಶಿಕ್ಷಕ ವೃತ್ತಿಯೊಂದಿಗೆ ಪರಿಸರ ಕಾಳಜಿಯಿಂದ ತಾನು ಸೇವೆ ಸಲ್ಲಿಸುತ್ತಿರುವ ಶಾಲೆ ಆವರಣದಲ್ಲಿ ತನ್ನ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಶಾಲಾ ಆವರಣವನ್ನು ಹಚ್ಚ ಹಸಿರಾಗಿರಿಸಿದ್ದಾರೆ. ಶಾಲಾ ಆವರಣದಲ್ಲಿ 200 ದುರಂತ ಗಿಡಗಳು, 10 ಅಕೇಲಿಫಾ, 10 ಬಾಟಲ್ ಫಾಮ್, 10 ಥುಜಾ, 15, ತೆಂಗು, 10 ಸೀತಾಫಲ, ಪೇರಲೆ, ದಾಳಿಂಬೆ, ಸಿಂಗಾಪುರ್ ಚೆರಿ, ಚಿಕ್ಕು, ಬದಾಮಿ, ಬೇವು, ನೆಲ್ಲಿಕಾಯಿ, ಕರಿಬೇವು ಮಾವು, ಹುಣಸೆ, ನಿಂಬೆ, ಗುಲಾಬಿ, ದಾಸವಾಳ, ಹಳದಿ ಸೇರಿದಂತೆ ವಿವಿಧ ಬಗೆಯ ಔಷಧೀಯ ಸಸಿಗಳನ್ನು ನೆಟ್ಟು ಬೋಧನೆಯೊಂದಿಗೆ ಇವುಗಳನ್ನು ಮಕ್ಕಳಂತೆ ಪೋಷಣೆ ಮಾಡುತ್ತ ಉದ್ಯಾನ ವನದಂತೆ ಬೆಳೆಸಿ ಇತರರಿಗೆ ಮಾದರಿಯಾಗಿದ್ದಾರೆ. 

ಶಾಲೆ ಆವರಣದಲ್ಲಿ ಪ್ರವೇಶ ಮಾಡಿದರೆ ಸಾಕು ಮಲೆನಾಡಿನ ಪ್ರವಾಸಿ ತಾಣದಲ್ಲಿ ಸಂಚರಿಸಿದ ಅನುಭವವಾಗುತ್ತದೆ. ಈ ಶಾಲೆಯಲ್ಲಿ ಮುಂಜಾನೆ ಮತ್ತು ಮುಸಂಜೆ ವೇಳೆಯಲ್ಲಿ ವಿವಿದ ಬಗೆಯ ಹಕ್ಕಿಗಳ ಚಿಲಿಪಿಲಿ ಕಲರವ ಶಬ್ದ ಈ ಉದ್ಯಾನವನದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಈ ಶಾಲೆ ಮಕ್ಕಳ ಮನಸ್ಸು ಉಲ್ಲಾಸಿತಗೊಳಿಸುತ್ತವೆ. ಈ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 337 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 9 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆವರಣದಲ್ಲಿ ಸರಸ್ವತಿ ಮೂರ್ತಿ, ಕಾರಂಜಿ ಚಿತ್ರ, ಭಾರತ ನಕಾಶೆ, ಕರ್ನಾಟಕ ನಕಾಶೆ, ಸಾವಯವ ರಸಗೊಬ್ಬರ, ಏಳು ಧ್ವಜದ ಕಂಬಗಳು, ಉಡಚಾಣಹಟ್ಟಿ ಎಕ್ಸ್‌ಪ್ರೆಸ್, ಪರಿಸರ ಸ್ನೇಹಿ ಎಕ್ಸ್‌ಪ್ರೆಸ್ ರೈಲುಗಳು, ನೋಡುಗರ ಕಣ್ಮನ ಸೇಳೆಯುತ್ತಿವೆ. 

2017-18 ನೇ ಸಾಲಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈ ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ ಹಾಗೂ 5000 ನಗದು ಬಹುಮಾನ ನೀಡಲಾಗಿದೆ. 2018-19 ರಲ್ಲಿ ಶಾಲೆಗೆ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ ಲಭಿಸಿದೆ. ಶಾಲೆಗೆ ಎಪ್ಸನ್ ಮಲ್ಟಿಮೀಡಿಯಾ ಪ್ರೋಜೆಕ್ಟರ್ ಸ್ಮಾಟ್ ಕ್ಲಾಸ್ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ವಿಷಯ ಪರಿವಿಕ್ಷಕರಾದ ರಮೇಶ ಜಾನಕರ ಮತ್ತು ಉಮೇಶ್ ಜಾನಕರ ಶಾಲೆಗೆ 50 ಸಾವಿರ ದೇಣಿಗೆ ನೀಡಿದ್ದಾರೆ. ಉಡಚಾಣ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಮೇಶ ಪಾಟೀಲ್ ಅವರು ಶಾಲೆಗೆ ಫೋಕಸ್ ಬೀದಿ ದೀಪ ದೇಣಿಗೆ ನೀಡಿದ್ದಾರೆ. ಶಿಕ್ಷಕ ಸಮೂಹ ಹಾಗೂ ಸಮುದಾಯ ಸಹಭಾಗಿತ್ವ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಅಭಿವೃದ್ಧಿ ಕಂಡ ಶಾಲೆಗೆ ಎರಡು ಬಾರಿ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಸಿಕ್ಕಿದೆ. ಇದಲ್ಲದೇ ಶಾಲೆಯ ಸರ್ವತೋಮುಖ ಪ್ರಗತಿಗೆ ಸದಾ ಪ್ರೋತ್ಸಾಹ ನೀಡುವಂತಹ ಶಾಲಾಭಿವೃದ್ಧಿ ಸಮಿತಿ ಕಾರ್ಯಕ್ಕೆ ಉತ್ತಮ ಎಸ್ ಡಿಎಂಸಿ ಪ್ರಶಸ್ತಿಯೂ ಲಭಿಸಿದೆ. ಶಾಲೆಯು ತನ್ನದೇ ಆದ ರೀತಿಯಲ್ಲಿ ಆಕರ್ಷಣೆಗೆ ಒಳಗಾಗಿರುವುದಲ್ಲದೆ ಪರಿಸರ ಸ್ನೇಹಿ ಆಗಿದೆ.

ಈ ಬಗ್ಗೆ ಮಾತನಾಡಿದ ಅಫಜಲ್ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಶಾಲೆ ನನ್ನ ಮನೆ ಇದ್ದಂತೆ ಎಂಬ ಉದ್ದೇಶದೊಂದಿಗೆ ಪರಿಸರ ಉತ್ತಮಗೊಳಿಸುವ ಕಾಳಜಿ ಪ್ರತಿ ಶಿಕ್ಷಕನ ಗುರಿ ಯಾಗಬೇಕು, ಆಗ ಗುರುವಿನ ಸ್ಥಾನದ ಗೌರವ ಹೆಚ್ಚಾಗುತ್ತದೆ. ? ಲಕ್ಷ್ಮಣ ಹಿಟ್ಟಿನ ಮುಖ್ಯಗುರು ಸ.ಹಿ.ಪ್ರಾ ಶಾಲೆ ಉಡಚಾಣಹಟ್ಟಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಗಿಡ ಮರ ಬೆಳೆಸಿ ಶಾಲೆಯ ಸೌಂದರ್ಯ ಹೆಚ್ಚಿಸಿದ ಪರಿಸರ ಪ್ರೇಮ ಮೆಚ್ಚುವಂತದ್ದು. ಪ್ರತಿಯೊಬ್ಬ ಶಿಕ್ಷಕ ವೃತ್ತಿ ದಕ್ಷತೆ ಹೆಚ್ಚಿಸಿಕೊಂಡಾಗ ಉತ್ತಮ ಗುರುವಾಗಬಲ್ಲ ಎಂದು ಹೇಳಿದ್ದಾರೆ. 

click me!