ಹುಬ್ಬಳ್ಳಿಯ ಭಾಗ್ಯ ನಗರದಲ್ಲಿ ಫ್ಲಾಟ್ ಕೊಡದ ಎಸ್.ಬಿ.ಪ್ರಾಪರ್ಟಿಸ್‍ಗೆ ದಂಡ: ಆಯೋಗ ಆದೇಶ

By Govindaraj SFirst Published Jun 26, 2024, 7:06 PM IST
Highlights

ಹುಬ್ಬಳ್ಳಿಯ ಕೇಶ್ವಾಪುರ ನಗರದ ನಿವಾಸಿ ನಾಗರಾಜ ಮಾಲಗಿತ್ತಿ ಎಂಬುವವರು ರೈಲ್ವೆ ಉದ್ಯೋಗಿಯಾಗಿದ್ದರು. ಅವರು ಸ್ವಂತ ಮನೆ ಕಟ್ಟಿಕೊಳ್ಳುವ ಇಚ್ಚೆಯಿಂದ ಹುಬ್ಬಳ್ಳಿಯ ವಿಜಯಕುಮಾರ ಅಯ್ಯಾವರಿ ಇವರ ಎಸ್.ಬಿ. ಪ್ರಾಪರ್ಟಿಸ್‍ರವರ ಜೊತೆ ಫ್ಲಾಟ್ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರು. 
 

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಜೂ.26): ಹುಬ್ಬಳ್ಳಿಯ ಕೇಶ್ವಾಪುರ ನಗರದ ನಿವಾಸಿ ನಾಗರಾಜ ಮಾಲಗಿತ್ತಿ ಎಂಬುವವರು ರೈಲ್ವೆ ಉದ್ಯೋಗಿಯಾಗಿದ್ದರು. ಅವರು ಸ್ವಂತ ಮನೆ ಕಟ್ಟಿಕೊಳ್ಳುವ ಇಚ್ಚೆಯಿಂದ ಹುಬ್ಬಳ್ಳಿಯ ವಿಜಯಕುಮಾರ ಅಯ್ಯಾವರಿ ಇವರ ಎಸ್.ಬಿ. ಪ್ರಾಪರ್ಟಿಸ್‍ರವರ ಜೊತೆ ಫ್ಲಾಟ್ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರು. ಹುಬ್ಬಳ್ಳಿಯ ಭಾಗ್ಯ ನಗರ ಲೇಔಟ್‍ನಲ್ಲಿ ಫ್ಲಾಟ್ ನಂ.23ನ್ನು 2022ರಲ್ಲಿ ಒಟ್ಟು ರೂ.12,31,720/- ಪೈಕಿ ರೂ.6,15,000/- ಮುಂಗಡ ಹಣವಾಗಿ ಪಾವತಿಸಿ ದೂರುದಾರ ಎದುರುದಾರ ಜೊತೆ ಖರೀದಿ ಕರಾರು ಮಾಡಿಕೊಂಡಿದ್ದರು. 

Latest Videos

ನಂತರ ಎದುರುದಾರರು ಆ ಫ್ಲಾಟ್‌ನ್ನು ಅಭಿವೃದ್ಧಿ ಪಡಿಸದೇ ಒಂದಿಲ್ಲೊಂದು ನೆಪ ಹೇಳಿ ಮುಂದುಡುತ್ತಾ ಬಂದರು ದೂರುದಾರರು ಸಾಕಷ್ಟು ಸಲ ವಿನಂತಿಸಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ದೂರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರ/ಬಿಲ್ಡರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ.28/02/2024 ರಂದು ಈ ದೂರನ್ನು ಸಲ್ಲಿಸಿದ್ದರು.
 
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರನಿಂದ ರೂ.6,15,000/- ಹಣ ಪಡೆದುಕೊಂಡು ಎದುರುದಾರ ಅವರಿಗೆ ಫ್ಲಾಟ್ ಖರೀದಿ ಪತ್ರ ನೋಂದಣಿ ಮಾಡಿಕೊಡಲು ವಿಫಲರಾಗಿರುವುದು ಮತ್ತು ದೂರುದಾರನಿಗೆ ಹಣವನ್ನು ಹಿಂತಿರುಗಿಸದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. 

ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: 7 ಮಂದಿ ಬಂಧನ, 5 ಮಕ್ಕಳ ರಕ್ಷಣೆ, ಆರೋಗ್ಯ ಇಲಾಖೆ ಶಾಮೀಲು

ದೂರುದಾರರು ಸಂದಾಯ ಮಾಡಿದ ರೂ.6,15,000/- ಮತ್ತು ಅದರ ಮೇಲೆ ಮುಂಗಡ ಹಣ ಪಾವತಿಸಿದ ದಿನದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ10% ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಎದುರುದಾರರಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಎಸ್.ಬಿ. ಪ್ರಾಪರಟಿಸ್ ಪಾಲುದಾರರಾದ ವಿಜಯಕುಮಾರ ಅಯ್ಯಾವರಿ/ ಎದುರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

click me!