ದೇವರ ದರ್ಶನಕ್ಕೆ ಮಾತ್ರ ಸದ್ಯ ಸೀಮಿತ ಅವಕಾಶ| ಅನ್ನಸಂತರ್ಪಣೆ, ತೀರ್ಥ ಪ್ರಸಾದ ವಿತರಣೆ ಇರುವುದಿಲ್ಲ| ದೇವಸ್ಥಾನಗಳಿಗೆ ತೆರಳುವ ಭಕ್ತರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಬೇಕು| ಮಾಸ್ಕ್ ಕಡ್ಡಾಯವಾಗಿ ಧರಿಸಕೊಂಡೇ ದೇವರ ದರ್ಶನ ಪಡೆಯಬೇಕು| ಚಿಕ್ಕಮಕ್ಕಳು ಹಾಗೂ ವಯೋವೃದ್ಧರು ದೇವಸ್ಥಾನಗಳಿಗೆ ದೇವರ ದರ್ಶನಕ್ಕೆ ಅವಕಾಶ ಇಲ್ಲ|
ಬೆಳಗಾವಿ(ಜೂ.07): ಜೂ. 8 ರಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನ, ಚಿಂಚಲಿ ಮಾಯಕ್ಕಾ ದೇವಿ ದೇವಸ್ಥಾನ ಹೊರತುಪಡಿಸಿ ಬೆಳಗಾವಿ ಜಿಲ್ಲೆಯ ಎಲ್ಲ ದೇವಸ್ಥಾನಗಳು, ಮಸೀದಿ, ಚಚ್‌ಗಳು ಪುನಾರಂಭಗೊಳ್ಳಲಿವೆ. ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ ದೇವಸ್ಥಾನಗಳಾದ ಸವದತ್ತಿ ಯಲ್ಲಮ್ಮ ಮತ್ತು ಚಿಂಚಲಿ ಮಾಯಕ್ಕಾ ದೇವಸ್ಥಾನಗಳು ಜೂ.30ರವರೆಗೆ ಭಕ್ತರ ದರ್ಶನಕ್ಕೆ ನಿರ್ಬಂಧಿಸಲಾಗಿದೆ.
ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ಎರಡೂ ದೇವಸ್ಥಾನಗಳಿಗೆ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ನಿರ್ಬಂಧವನ್ನು ಮುಂದುವರೆಸಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.
undefined
ಅಥಣಿ: ಈಜಲು ಹೋಗಿ ಅಣ್ಣ ತಂಗಿ ನೀರುಪಾಲು
ಚಿಕ್ಕೋಡಿ ತಾಲೂಕಿನ ಯಡೂರಿನ ವೀರಭದ್ರದೇವಸ್ಥಾನ, ರಾಮದುರ್ಗ ತಾಲೂಕಿನ ಗೊಡಚಿಯ ವೀರಭದ್ರ ದೇವಸ್ಥಾನ, ಅಥಣಿ ತಾಲೂಕಿನ ಖಿಳೇಗಾಂವ ಬಸವಣ್ಣ ದೇವಸ್ಥಾನ, ಬೆಳಗಾವಿ ಕಪಿಲೇಶ್ವರ ದೇವಸ್ಥಾನ, ಮಿಲಿಟರಿ ಮಹಾದೇವ ಮಂದಿರ, ಮಿಲಿಟರಿ ಗಣಪತಿ ಮಂದಿರ, ಹುಕ್ಕೇರಿ ತಾಲೂಕಿನ ಅಮ್ಮಣಗಿಯ ಮಲ್ಲಿಕಾರ್ಜುನ ದೇವಸ್ಥಾನ ಸೇರಿದಂತೆ ಮತ್ತಿತರ ವಿವಿಧ ದೇವಸ್ಥಾನಗಳನ್ನು ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಗುತ್ತಿದೆ. ಆದರೆ, ದೇವರ ದರ್ಶನಕ್ಕೆ ಮಾತ್ರ ಸದ್ಯ ಸೀಮಿತ ಅವಕಾಶ ನೀಡಲಾಗುತ್ತದೆ. ಅನ್ನಸಂತರ್ಪಣೆ, ತೀರ್ಥ ಪ್ರಸಾದ ವಿತರಣೆ ಇರುವುದಿಲ್ಲ. ದೇವಸ್ಥಾನಗಳಿಗೆ ತೆರಳುವ ಭಕ್ತರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಬೇಕು. ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಕೊಂಡೇ ದೇವರ ದರ್ಶನ ಪಡೆಯಬೇಕು. ಚಿಕ್ಕಮಕ್ಕಳು ಹಾಗೂ ವಯೋವೃದ್ಧರು ದೇವಸ್ಥಾನಗಳಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ.