ತೋಟದ ಬಾವಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಅಣ್ಣ ತಂಗಿ| ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ನಡೆದ ಘಟನೆ| ಈಜಲು ಬಾರದೆ ಬಾವಿಯಲ್ಲೇ ಅಸುನೀಗಿದ ಅಣ್ಣ ತಂಗಿ|
ಅಥಣಿ(ಜೂ.07): ಈಜಲು ಹೋಗಿ ಅಣ್ಣ ತಂಗಿ ತೋಟದ ಬಾವಿಯಲ್ಲಿ ಮೃತಪಟ್ಟ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗುಂಡೇವಾಡಿ ಗ್ರಾಮದ ಪಾರಿಸ್ ನೇಮಣ್ಣ ಕುಪವಾಡ (15) ಮತ್ತು ಆತನ ಸಹೋದರಿ ಸನ್ಮತಿ ನೇಮಣ್ಣ ಕುಪವಾಡ (13) ಮೃತಪಟ್ಟ ಅಣ್ಣ ತಂಗಿಯಾಗಿದ್ದಾರೆ.
undefined
ಬೆಳಗಾವಿ: 'ಕೊರೋನಾ ಕಾಟದ ಮಧ್ಯೆಯೇ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಿದ್ಧರಾಗಿ'
ಗ್ರಾಮದ ಹೊರವಲಯದಲ್ಲಿ ನಿರ್ಮಿಸಲಾಗಿದ್ದ ತೋಟದಲ್ಲಿ ಇಬ್ಬರು ಮಕ್ಕಳು ಈಜಲು ಹೋಗಿದ್ದಾರೆ. ಆದರೆ, ಈಜಲು ಬಾರದೆ ಅಲ್ಲಿಯೇ ಅಸುನೀಗಿದ್ದಾರೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.