'ಸಿದ್ದ​ರಾ​ಮಯ್ಯ ಜಾರಿ​ಗೊ​ಳಿ​ಸಿ​ದ ಯೋಜ​ನೆ​ಗಳೇ ಮತ್ತೆ ಪಕ್ಷ​ವನ್ನು ಅಧಿ​ಕಾ​ರಕ್ಕೆ ತರಲಿವೆ'

By Kannadaprabha News  |  First Published Mar 13, 2021, 11:01 AM IST

ಹಾವೇರಿ ಜಿಲ್ಲೆಯಲ್ಲಿ ಮತ್ತೆ ರಾರಾ​ಜಿ​ಸ​ಲಿದೆ ಕಾಂಗ್ರೆ​ಸ್‌| ಮುಂದಿನ ದಿನ​ಗ​ಳಲ್ಲಿ ಮತ್ತೆ ಜಿಲ್ಲೆ ಕಾಂಗ್ರೆಸ್‌ ಪಾಲಾ​ಗ​ಲಿದೆ| ಬಿಜೆಪಿಯ ಜನ ವಿರೋ​ಧಿ-ರೈತ ವಿರೋಧಿ ನೀತಿ​ಗ​ಳಿಂದ ಆಕ್ರೋ​ಶ​ಗೊಂಡಿ​ರುವ ಮತ​ದಾ​ರರು ಮತ್ತೊಮ್ಮೆ ಕಾಂಗ್ರೆಸ್‌ ಆಶೀ​ರ್ವ​ದಿ​ಸುವ ಮೂಲಕ ರಾಜ್ಯ​ದಲ್ಲಿ ಅಧಿ​ಕಾ​ರಕ್ಕೆ ತರ​ಲಿ​ದ್ದಾ​ರೆಂದು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದ​ ಸತೀಶ ಜಾರ​ಕಿ​ಹೊಳಿ| 


ಕುಮಾರಪಟ್ಟಣ(ಮಾ.13): ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಹಾವೇರಿ ಜಿಲ್ಲೆ ರಾಜಕೀಯ ಬದ​ಲಾ​ವ​ಣೆ​ಯಿಂದ ಬಿಜೆಪಿ ಜಿಲ್ಲೆಯಾಗಿದೆ ಹೊರತು ಮತ​ದಾ​ರ​ರು ಬದ​ಲಾ​ಗಿಲ್ಲ. ಹೀಗಾಗಿ ಮುಂಬ​ರುವ ದಿನ​ಗ​ಳಲ್ಲಿ ಜಿಲ್ಲೆ​ಯಲ್ಲಿ ಮತ್ತೆ ಕಾಂಗ್ರೆಸ್‌ ರಾರಾ​ಜಿ​ಸ​ಲಿದೆ ಎಂದು ಕೆಪಿ​ಸಿಸಿ ಕಾರ್ಯಾ​ಧ್ಯಕ್ಷ ಸತೀಶ ಜಾರಕೀಹೊಳಿ ಹೇಳಿದರು.

ಸಮೀಪದ ಚಳಗೇರಿಯ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷ ಸಣ್ಣತಮ್ಮಣ್ಣ ಬಾರ್ಕಿ ಅವರ ಮನೆಗೆ ಶುಕ್ರ​ವಾರ ಭೇಟಿ ನೀಡಿದ ವೇಳೆ ಮಾತ​ನಾ​ಡಿದ ಅವರು, ಮುಂದಿನ ದಿನ​ಗ​ಳಲ್ಲಿ ಮತ್ತೆ ಜಿಲ್ಲೆ ಕಾಂಗ್ರೆಸ್‌ ಪಾಲಾ​ಗ​ಲಿದೆ. ಬಿಜೆಪಿಯ ಜನ ವಿರೋ​ಧಿ-ರೈತ ವಿರೋಧಿ ನೀತಿ​ಗ​ಳಿಂದ ಆಕ್ರೋ​ಶ​ಗೊಂಡಿ​ರುವ ಮತ​ದಾ​ರರು ಮತ್ತೊಮ್ಮೆ ಕಾಂಗ್ರೆಸ್‌ ಆಶೀ​ರ್ವ​ದಿ​ಸುವ ಮೂಲಕ ರಾಜ್ಯ​ದಲ್ಲಿ ಅಧಿ​ಕಾ​ರಕ್ಕೆ ತರ​ಲಿ​ದ್ದಾ​ರೆಂದು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದ​ರು.

Tap to resize

Latest Videos

ಹಾವೇರಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಗೆ ಕಠಿಣ ಶಿಕ್ಷೆ

ಸಿದ್ದ​ರಾ​ಮಯ್ಯ ನೇತೃ​ತ್ವದ ಸರ್ಕಾರ ಜಾರಿ​ಗೊ​ಳಿ​ಸಿ​ರುವ ಯೋಜ​ನೆ​ಗಳೇ ಮತ್ತೆ ಪಕ್ಷ​ವನ್ನು ಅಧಿ​ಕಾ​ರಕ್ಕೆ ತರಲಿವೆ. 5 ವರ್ಷ​ಗಳ ಕಾಲ ಸಿದ್ದ​ರಾಮಯ್ಯನ​ವರು ಜನ​ಪರ ಯೋಜ​ನೆ​ಗ​ಳನ್ನು ಜಾರಿ​ಗೊ​ಳಿ​ಸುವ ಮೂಲಕ ರಾಜ್ಯದ ಸಮಗ್ರ ಅಭಿ​ವೃ​ದ್ಧಿಗೆ ಶ್ರಮಿ​ಸಿ​ದ್ದರು ಎಂದ​ರು.

ಜಿಲ್ಲಾ ಕಾಂಗ್ರೆಸ್‌ ಪಕ್ಷದ ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷ ಸಣ್ಣತಮ್ಮಣ್ಣ ಬಾರ್ಕಿ ಮಾತ​ನಾಡಿ, ವರ್ಷದ ಹಿಂದೆ ನಾನು ಜಿಲ್ಲಾ​ಧ್ಯಕ್ಷ ಸ್ಥಾನಕ್ಕೆ ರಾಜೀ​ನಾಮೆ ನೀಡಿದ್ದೆ. ಆದರೆ, ಜಿಲ್ಲೆಯ ಹಿರಿಯ ಮುಖಂಡರು ಹಾಗೂ ಕಾರ್ಯ​ಕ​ರ್ತರು ಒತ್ತಾ​ಯದ ಮೇರೆಗೆ ರಾಜೀ​ನಾ​ಮೆ​ಯನ್ನು ಹಿಂಪ​ಡೆ​ದಿ​ದ್ದೇನೆ ಎಂದು ತಿಳಿ​ಸಿ​ದ​ರು. ಈ ವೇಳೆ ಪಿಎ​ಲ್‌ಡಿ ಬ್ಯಾಂಕ್‌ ಸದಸ್ಯ ಜಟ್ಟೆಪ್ಪ ಕರೇಗೌಡ್ರ, ಪರಶುರಾಮ ಜಂಗಳಿ, ಹರೀಶ ಜಂಗಳಿ, ಚಿರಂಜೀವಿ ಬಾರ್ಕಿ, ಯಲ್ಲಪ್ಪ ಬನ್ನಿಮಟ್ಟಿ ಉಪಸ್ಥಿತರಿದ್ದರು.
 

click me!