ಕರಾವಳಿಯಲ್ಲಿ ಮತ್ತೆ ನಿಷೇಧಿತ ಸ್ಯಾಟಲೈಟ್ ಫೋನ್ ಸಿಗ್ನಲ್ ಪತ್ತೆಯಾಗಿದ್ದು ಹಲವು ಅನುಮಾನಕ್ಕೆ ಎಡೆಯಾಗಿದೆ.
ಮಂಗಳೂರು (ಆ.15): ಕರಾವಳಿ ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಕರೆಯ ಸಿಗ್ನಲ್ ರವಾನೆಯಾಗಿರುವ ಬಗ್ಗೆ ಗುಪ್ತಚರ ಮೂಲಗಳಿಗೆ ಮಾಹಿತಿ ಲಭಿಸಿದ ಬಗ್ಗೆ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಇದನ್ನು ಪೊಲೀಸರಾಗಲೀ, ಗುಪ್ತಚರ ಇಲಾಖೆಯಾಗಲೀ ದೃಢಪಡಿಸಿಲ್ಲ.
undefined
ಕಳೆದ ವರ್ಷ ಬೆಳ್ತಂಗಡಿಯಲ್ಲಿ ಹಾಗೂ ಈ ಬಾರಿ ಬಂಟ್ವಾಳ ತಾಲೂಕಿನಲ್ಲಿ ಸ್ಯಾಟಲೈಟ್ ಫೋನ್ ಸಿಗ್ನಲ್ ರವಾನೆಯಾದ ಬಗ್ಗೆ ಮಾಹಿತಿ ಬಹಿರಂಗವಾಗಿತ್ತು. ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ ಸಿಗ್ನಲ್ ರವಾನೆಯಾಗುವುದು ಸಾಮಾನ್ಯ ಎನ್ನುತ್ತಾರೆ ಗುಪ್ತಚರ ಮೂಲಗಳು. ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮಂದಿ ಸ್ಯಾಟಲೈಟ್ ಫೋನ್ ಉಪಯೋಗಿಸುತ್ತಾರೆ.
ಕಾರವಾರ: ಭಾರಿ ಮಳೆಗೆ ಕರಾವಳಿಯಲ್ಲಿ 3202 ಮೀ. ಕಡಲ್ಕೊರೆತ...
ಆದರೆ ಸ್ಯಾಟಲೈಟ್ ಫೋನ್‌ನ್ನು ಕರಾವಳಿಯಲ್ಲಿ ಉಗ್ರ ಕೃತ್ಯಕ್ಕೆ ಬಳಕೆ ಮಾಡಿರುವ ಉದಾಹರಣೆ ಇದುವರೆಗೆ ಇಲ್ಲ ಎನ್ನುವುದು ಮೂಲಗಳ ಮಾಹಿತಿ. ಕರಾವಳಿಯ ಹೊನ್ನಾವರ, ಕುಮಟಾ ಸೇರಿದಂತೆ ಮೈಸೂರು, ಮಂಡ್ಯ, ಗೇರುಸೊಪ್ಪಾ ಭಾಗದಲ್ಲಿ ಆ.12ರಂದು ಸ್ಯಾಟಲೈಟ್ ಫೋನ್ ಸಿಗ್ನಲ್ ರವಾನೆಯಾಗಿವೆ ಎಂದು ಜಾಲತಾಣಗಳಲ್ಲಿ ಸುದ್ದಿ ಹಬ್ಬಿಸಲಾಗಿದೆ.