Mangaluru Blast Case: ಮಂಗಳೂರು ಬ್ಲಾಸ್ಟ್‌ಗೆ ಮುನ್ನ ಕರಾವಳಿಯಲ್ಲಿ ರಿಂಗಣಿಸಿದ ಸ್ಯಾಟಲೈಟ್ ಫೋನ್

By Gowthami K  |  First Published Nov 24, 2022, 2:50 PM IST

ಮಂಗಳೂರು ಬ್ಲಾಸ್ಟ್ ಗೆ ಮುನ್ನ ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ ರಿಂಗಣಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ರಿಂಗ್ ಆಗಿದ್ದು, ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಬಳಸಲಾಗಿರುವ ಮಾಹಿತಿ  ಲಭ್ಯವಾಗಿದೆ.


ಮಂಗಳೂರು (ನ.24): ಮಂಗಳೂರು ಬ್ಲಾಸ್ಟ್ ಗೆ ಮುನ್ನ ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ ರಿಂಗಣಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ರಿಂಗ್ ಆಗಿದ್ದು, ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಬಳಸಲಾಗಿರುವ ಮಾಹಿತಿ  ಲಭ್ಯವಾಗಿದೆ. ನ. 19 ರ ಸಂಜೆ 4:29 ರ ಹೊತ್ತಿಗೆ ಮಂಗಳೂರಿನಲ್ಲಿ ಬ್ಲಾಸ್ಟ್ ಆಗಿತ್ತು. ಅದಕ್ಕೂ ಮುನ್ನ ಅಂದರೆ  ನ.18ರಂದು ಬಂಟ್ವಾಳದ ಕಕ್ಕಿಂಜೆಯಲ್ಲಿ ಸ್ಯಾಟಲೈಟ್ ಫೋನ್ ರಿಂಗ್ ಆಗಿದೆ. ಆರೋಪಿ ಶಾರೀಕ್ ಅಥವಾ ಸ್ಲೀಪರ್ ಸೆಲ್ ಗಳ ಜತೆ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಶಂಕೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 2, ಉಡುಪಿಯ ಒಂದು ಕಡೆ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಿಂದ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಮಾಡಿರುವ ಸ್ಯಾಟಲೈಟ್ ಫೋನ್ ಲೊಕೇಷನ್ ನ್ನು ಬೇಹುಗಾರಿಕಾ ಏಜೆನ್ಸಿಗಳು ಟ್ರೇಸ್ ಮಾಡಿವೆ. ಸುಮಾರು 5 ವರ್ಷಗಳಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಸ್ಯಾಟಲೈಟ್ ಫೋನ್ ಸದ್ದು ಮಾಡುತ್ತಿದೆ.

ದೇವಸ್ಥಾನಗಳನ್ನು ಟಾರ್ಗೆಟ್ ಮಾಡಿದ್ದ ಶಾರೀಕ್: ಮಂಗಳೂರು ಆಟೋ ಬ್ಲಾಸ್ಟ್ ಪ್ರಕರಣ ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ಶಂಕಿತ ಉಗ್ರ ಶಾರೀಕ್  ಕರಾವಳಿಯ 3 ಪ್ರಸಿದ್ಧ ದೇವಾಲಯಗಳನ್ನು ಟಾರ್ಗೆಟ್​ ಮಾಡಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಮಂಗಳೂರು ನಗರದಲ್ಲಿರುವ ಕದ್ರಿ ಮಂಜುನಾಥ, ಮಂಗಳಾದೇವಿ, ಕುದ್ರೋಳಿ ದೇವಸ್ಥಾನವನ್ನು ಟಾರ್ಗೆಟ್ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಧರ್ಮ ದಂಗಲ್ ನ ಕಾರಣಕ್ಕೆ ದೇವಸ್ಥಾನಗಳು ಶಾರೀಕ್ ಗೆ ಟಾರ್ಗೆಟ್ ಆಯ್ತಾ ಎಂದು ಶಂಕೆ ವ್ಯಕ್ತವಾಗಿದೆ.

Tap to resize

Latest Videos

ಮಂಗಳೂರು ಸೇರಿ ಕರಾವಳಿ ಭಾಗದಲ್ಲಿ ನಡೆದಿದ್ದ ವ್ಯಾಪಾರ ಧರ್ಮ ದಂಗಲ್ ಹಿನ್ನೆಲೆಯಲ್ಲಿ ಕೂಡ ತನಿಖೆ ನಡೆಸಲಾಗುತ್ತಿದೆ. ಹಿಜಾಬ್ ವಿವಾದದ ಬಳಿಕ ಮುಸ್ಲಿಂ ವ್ಯಾಪಾರಿಗಳ ವ್ಯಾಪಾರ ಬಹಿಷ್ಕರಿಸಿ ದೇವಸ್ಥಾನಗಳಲ್ಲಿ ಧರ್ಮ ದಂಗಲ್ ನಡೆದಿತ್ತು. ಮಂಗಳಾದೇವಿ, ಬಪ್ಪನಾಡು ಸೇರಿ ಹಲವು ದೇವಸ್ಥಾನಗಳಲ್ಲಿ ಧರ್ಮ ದಂಗಲ್ ನಡೆದಿತ್ತು. ಹಿಂದೂ ಸಂಘಟನೆಗಳು ದೇವಾಲಯದ ಮುಂಬಾಗ ಮುಸ್ಲಿಮರ ವ್ಯಾಪಾರದ ವಿರುದ್ದ ಸಿಡಿದೆದ್ದಿದ್ದರು. ಇದೇ ಕಾರಣಕ್ಕೆ ದೇವಸ್ಥಾನಗಳನ್ನೇ ಟಾರ್ಗೆಟ್ ‌ಮಾಡಿದನಾ ಶಾರೀಕ್ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಮಂಗಳೂರು ಬ್ಲಾಸ್ಟ್‌ ಆರೋಪಿ ಶಾರಿಕ್‌ಗೆ ಪಿಎಫ್ಐ ಸಂಪರ್ಕ..?

ಶಾರೀಕ್‌ ಶ್ವಾಸಕೋಶದಲ್ಲಿ ಹೊಗೆ!
ಕುಕ್ಕರ್‌ ಬಾಂಬ್‌ ಸ್ಫೋಟಿಸಿದ ಉಗ್ರ ಶಾರೀಕ್‌ ಶ್ವಾಸಕೋಶದೊಳಗೆ ಭಾರೀ ಹೊಗೆ ತುಂಬಿಕೊಂಡಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮಾಹಿತಿ ದೊರೆತಿದೆ.

 

 ಕೋಮು ವೈಷಮ್ಯ ಸೃಷ್ಟಿಸಲು ಮಂಗಳೂರು ಸ್ಫೋಟ: ಡಿಜಿಪಿ ಪ್ರವೀಣ್‌ ಸೂದ್‌

ಬಾಂಬ್‌ ಸ್ಫೋಟದ ವೇಳೆ ರಾಸಾಯನಿಕ ಉರಿದು ಅದರ ವಿಷ ಹೊಗೆ ಆತನ ಶ್ವಾಸಕೋಶ ಸೇರಿತ್ತು. ಜತೆಗೆ ಶೇ.45ರಷ್ಟುಸುಟ್ಟಗಾಯಗಳಾಗಿರುವುದರಿಂದ ಆರೋಗ್ಯ ಸ್ಥಿತಿ ತೀರ ಗಂಭೀರವಾಗಿತ್ತು. ಶ್ವಾಸಕೋಶದಲ್ಲಿನ ಸಮಸ್ಯೆ ನಿವಾರಣೆಗೆ ಸದ್ಯಕ್ಕೆ ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ವೆಂಟಿಲೇಟರ್‌ನಲ್ಲಿ ರೋಗಿಯ ಪ್ರತಿಕ್ರಿಯೆ ಮುಖ್ಯವಾಗುತ್ತದೆ. ಉಗ್ರ ಶಾರೀಕ್‌ ಕಣ್ಣು ಅಲುಗಾಡಿಸುತ್ತ ಪ್ರತಿಕ್ರಿಯೆ ನೀಡುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ವೆಂಟಿಲೇಟರ್‌ನಲ್ಲಿ ಇರುವುದರಿಂದ ಸದ್ಯಕ್ಕೆ ಪರಿಸ್ಥಿತಿ ಅಂದಾಜಿಸಲು ಸಾಧ್ಯವಿಲ್ಲದ ಸ್ಥಿತಿ ಇದೆ.

click me!