ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2023-24ನೇ ಸಾಲಿನ ಅಯವ್ಯಯದ ಪೂರಕವಾಗಿ ಜನಾಗ್ರಹ ಸಂಸ್ಥೆಯ ತಂಡವು ವಾರ್ಷಿಕ ನಗರ ಬಜೆಟ್ ಗಾಗಿ ಸಾರ್ವಜನಿಕ ಸಲಹೆಗಳನ್ನು ನಗರದ 243 ವಾರ್ಡ್ ಗಳಲ್ಲಿ ಸಂಗ್ರಹಿಸಲಾಗುತ್ತಿದ್ದು, ಅದರಂತೆ ಈ ಬಾರಿ ನಾಗರಿಕರ ಪ್ರತಿಕ್ರಿಯೆ ಪಡೆಯಲು "ನನ್ನ ನಗರ ನನ್ನ ಬಜೆಟ್" ಅಭಿಯಾನ ಹಮ್ಮಿಕೊಂಡಿದೆ.
ವರದಿ: ರಕ್ಷಾ ಕಟ್ಟೆಬೆಳಗುಳಿ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ನ.24): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2023-24ನೇ ಸಾಲಿನ ಅಯವ್ಯಯದ ಪೂರಕವಾಗಿ ಜನಾಗ್ರಹ ಸಂಸ್ಥೆಯ ತಂಡವು ವಾರ್ಷಿಕ ನಗರ ಬಜೆಟ್ ಗಾಗಿ ಸಾರ್ವಜನಿಕ ಸಲಹೆಗಳನ್ನು ನಗರದ 243 ವಾರ್ಡ್ ಗಳಲ್ಲಿ ಸಂಗ್ರಹಿಸಲಾಗುತ್ತಿದ್ದು, ಅದರಂತೆ ಈ ಬಾರಿ ರಸ್ತೆ, ಪಾದಚಾರಿ ಮಾರ್ಗ, ಬೀದಿ ದೀಪ, ಘನತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು ಕೊಯ್ಲಿನ ಬಗ್ಗೆ ನಾಗರಿಕರ ಪ್ರತಿಕ್ರಿಯೆ ಪಡೆಯಲು ಹಮ್ಮಿಕೊಂಡಿರುವ "ನನ್ನ ನಗರ ನನ್ನ ಬಜೆಟ್"(ಮೈ ಸಿಟಿ ಮೈ ಬಜೆಟ್) ಅಭಿಯಾನಕ್ಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಚಾಲನೆ ನೀಡಿದರು. ನನ್ನ ನಗರ ನನ್ನ ಬಜೆಟ್ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಪಾಲಿಕೆ ವಾರ್ಷಿಕ ಆಯವ್ಯದಲ್ಲಿ ನಾಗರಿಕರ ಸಹಭಾಗಿತ್ವ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕೆಂಬ ಉದ್ದೇಶದಿಂದ ಜನಾಗ್ರಹ ಸಂಸ್ಥೆಯು ನನ್ನ ನಗರ ನನ್ನ ಬಜೆಟ್ ಅಭಿಯಾನವನ್ನು ಕಳೆದ 7 ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಅಭಿಯಾನದ ಅಂಗವಾಗಿ ವಾಹನ ಪಾಲಿಕೆ 243 ವಾರ್ಡ್ ನಿಗದಿತ ಸ್ಥಳ/ಜನ ನಿಬಿಡ ಸ್ಥಳದಲ್ಲಿ ಸಂಚರಿಸಿ ಸಾರ್ವಜನಿಕ ಸಲಹೆಗಳನ್ನು ಸಂಗ್ರಹಿಸಲಿದೆ ಎಂದು ತಿಳಿಸಿದರು.
ಜನಾಗ್ರಹ ಸಂಸ್ಥೆಯು 2023-2024ನೇ ಸಾಲಿನ ಆಯವ್ಯಯದಲ್ಲಿ ಯಾವೆಲ್ಲ ಕೆಲಸ ಆಗಬೇಕು ಎಂಬುದರ ಬಗ್ಗೆ ಮುಂದಿನ ಒಂದು ತಿಂಗಳು ಬಜೆಟ್ ವಾಹನದ ಮೂಲಕ ನಗರದಾದ್ಯಂತ ಸಂಚರಿಸಿ ಸಲಹೆಗಳನ್ನು ಸಂಗ್ರಹಿಸಲಿದೆ. ನಂತರ ಜನಾಗ್ರಹ ಸಂಸ್ಥೆಯು ನಾಗರಿಕರು ನೀಡಿರುವ ಸಲಹೆಗಳನ್ನು ಒಟ್ಟುಗೂಡಿಸಿ ಪಾಲಿಕೆಗೆ ವರದಿ ಸಲ್ಲಿಸಲಿದೆ. ಅನಂತರ ನಾಗರಿಕರು ನೀಡಿರುವ ಸಲಹೆಗಳನ್ನು ಆಯವ್ಯಯದಲ್ಲಿ ಸೇರ್ಪಡೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಬೆಂಗಳೂರು: ರಸ್ತೆ ನಿರ್ಮಾಣಕ್ಕೂ ಬಂತು ‘ರ‍್ಯಾಪಿಡ್’ ತಂತ್ರಜ್ಞಾನ..!
ಕಳೆದ ವರ್ಷದ(2022-23) ಆಯವ್ಯಯದಲ್ಲಿ 198 ವಾರ್ಡ್ ಗಳ ಪೈಕಿ ಪ್ರತಿ ವಾರ್ಡ್ಗೂ ತಲಾ 1 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿತ್ತು. ಅದನ್ನು ವಾರ್ಡ್ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಹಣ ವ್ಯಯಿಸಿದ್ದು, ಅದಕ್ಕಾಗಿ ಈಗಾಗಲೇ 70 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ಬಾಕಿ 30 ಲಕ್ಷ ರೂ.ಗಳನ್ನು ರಸ್ತೆಗಳನ್ನು ಮುಚ್ಚಲು ವ್ಯಯಿಸಲಾಗುತ್ತಿದೆ ಎಂದರು. ಪಾಲಿಕೆ ವ್ಯಾಪ್ತಿಯಲ್ಲಿರುವ ವಾರ್ಡ್ ಗಳಿಗೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕೆಂಬ ಒತ್ತಾಯವಿದ್ದು, ಅದನ್ನು ಪರಿಶೀಲಿಸಿ ಪ್ರತಿ ವಾರ್ಡ್ ನಲ್ಲೂ ಆಗಬೇಕಿರುವ ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸುವ ಆಲೋಚನೆಯಿದ್ದು, ಎಲ್ಲವನ್ನೂ ಪರಿಶೀಲಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿ ಚುನಾವಣೆಗೆ ಮತ್ತೆ 3 ತಿಂಗಳು ಸಮಯ ಕೇಳಿದ ಸರ್ಕಾರ
ವೆಬ್‌ಸೈಟ್ ಮೂಲಕವೂ ಸಲಹೆಗಳನ್ನು ನೀಡಿ:
ನನ್ನ ನಗರ ನನ್ನ ಬಜೆಟ್ ಅಭಿಯಾನಕ್ಕಾಗಿ ಪಾಲಿಕೆಯ 243 ವಾರ್ಡ್ ಗಳಿಗೂ ಬಜೆಟ್ ವಾಹನವು 30 ದಿನಗಳ ಕಾಲ ಭೇಟಿ ನೀಡಿ ನಾಗರಿಕರಿಂದ ಸಲಹೆಗಳನ್ನು ಪಡೆಯಲಿದೆ. ಜೊತೆಗೆ ನಾಗರಿಕರು http://www.mycitymybudget.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಸಲಹೆಗಳನ್ನು ನೀಡಬಹುದಾಗಿದೆ. ಈ ವೇಳೆ ಜನಾಗ್ರಹ ಸಂಸ್ಥೆ ನಾಗರಿಕ ಭಾಗವಹಿಸುವಿಕೆ ಯೋಜನಾ ನಾಯಕರಾದ ಸಂತೋಷ್ ನರಗುಂದ, ಬಿಎಎಫ್, ಬಿಪ್ಯಾಕ್, ವೈಟ್‌ಫೀಲ್ಡ್ ರೈಜರ್ಸ್, ವಾರ್ಡ್ ಸಮಿತಿ ಬಳಗ ಸೇರಿದಂತೆ ಇನ್ನಿತರೆ ಎನ್.ಜಿ.ಒ ಸಂಸ್ಥೆಗಳು ಉಪಸ್ಥಿತರಿದ್ದರು.